ಎಸ್ -400 ಕ್ಷಿಪಣಿಗಳ ಪೂರೈಕೆಗಾಗಿ ರಷ್ಯಾಕ್ಕೆ ಭಾರತದಿಂದ ಮುಂಗಡ ಪಾವತಿ
ಮಾಸ್ಕೋ, ಆ29 ಎಸ್ -400 ವಾಯು ರಕ್ಷಣಾ ಕ್ಷಿಪಣಿ ವ್ಯವಸ್ಥೆಗಳಿಗಾಗಿ ಭಾರತದಿಂದ ಮುಂಗಡ ಪಾವತಿಯನ್ನು ರಷ್ಯಾ ಸ್ವೀಕರಿಸಿದೆ ಎಂದು ರಷ್ಯಾದ ಸೇನಾ-ತಾಂತ್ರಿಕ ಸಹಕಾರ ಕುರಿತ ಫೆಡರಲ್ ಸರ್ವಿಸ್ ಗುರುವಾರ ತಿಳಿಸಿದೆ.
'ಎಸ್ -400 ಕ್ಷಿಪಣಿಗಳಿಗೆ ಭಾರತ ಮುಂಗಡ ಪಾವತಿಸುವುದರೊಂದಿಗೆ ಈ ವಿಷಯ ಇತ್ಯರ್ಥವಾಗಿದೆ.' ಎಂದು ರಕ್ಷಣಾ ಸಹಕಾರ ಸಂಸ್ಥೆ ಸ್ಪುಟ್ನಿಕ್ ತಿಳಿಸಿದೆ.
'ಕೆಲ ಕಾರಣಗಳಿಂದಾಗಿ, ನಾವು ತಾಂತ್ರಿಕ ವಿವರಗಳ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ' ಎಂದು ಪ್ರಸ್ತುತ ಮಾಸ್ಕೋ ಪ್ರದೇಶದ ಜುಕೋವ್ ಸ್ಕಿಯಲ್ಲಿ ನಡೆಯುತ್ತಿರುವ ಎಂಎಕೆಎಸ್-2019 ವೈಮಾನಿಕ ಪ್ರದರ್ಶನದ ವೇಳೆ ರಷ್ಯನ್ ಫೆಡರಲ್ ತಿಳಿಸಿದೆ.
2019 ರ ಅಂತ್ಯದ ವೇಳೆಗೆ ಭಾರತದಿಂದ ಮುಂಗಡ ಪಾವತಿ ಪಡೆಯಲು ರಷ್ಯಾ ಆಶಿಸುತ್ತಿದೆ. ಇದರಿಂದಾಗಿ ಪೂರೈಕೆ 2020 ರಲ್ಲಿ ಆರಂಭವಾಗಿ, 2025 ರ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ ಎಂದು ಜುಲೈ 9 ರಂದು ಸಂಸ್ಥೆಯ ಉಪನಿರ್ದೇಶಕ ವ್ಲಾಡಿಮಿರ್ ಡ್ರೋಜೋವ್ ಹೇಳಿದ್ದರು.
ಕಳೆದ ವರ್ಷ ಅಕ್ಟೋಬರ್ನಲ್ಲಿ ಭಾರತ ಮತ್ತು ರಷ್ಯಾ 5 ಶತಕೋಟಿ ಡಾಲರ್ ಮೊತ್ತದ ಎಸ್ -400 ಕ್ಷಿಪಣಿ ವ್ಯವಸ್ಥೆಗಳ ಪೂರೈಕೆ ಒಪ್ಪಂದವನ್ನು ಮಾಡಿಕೊಂಡಿದ್ದವು.
ಈ ಒಪ್ಪಂದವನ್ನು ಅಮೆರಿಕ ವಿರೋಧಿಸಿದೆ. ಕಳೆದ ವರ್ಷ, ಎಸ್ -400 ಕ್ಷಿಪಣಿಗಳನ್ನು ಖರೀದಿಸುವ ಬಗ್ಗೆ ಭಾರತ, ರಷ್ಯಾದೊಂದಿಗೆ ಒಪ್ಪಂದ ಮಾಡಿಕೊಳ್ಳುವುದನ್ನು ತಡೆಯುವ ಪ್ರಯತ್ನವನ್ನು ಅಮೆರಿಕ ಮಾಡಿತ್ತು.
ಜುಕೋವ್ ಸ್ಕಿಯಲ್ಲಿ ಅಂತಾರಾಷ್ಟ್ರೀಯ ವೈಮಾನಿಕ ಮತ್ತು ಬಾಹ್ಯಾಕಾಶ ಪ್ರದರ್ಶನ ಆಗಸ್ಟ್ 27ರಿಂದ ಆರಂಭವಾಗಿದ್ದು, ಸೆಪ್ಟೆಂಬರ್ 1ರವರೆಗೆ ನಡೆಯಲಿದೆ.
ಬೆಳಗಾವಿಗೆ ಮೋಹನ್ ಭಾಗವತ್ ಭೇಟಿ: 9 ದಿನ ಡ್ರೋನ್ ಹಾರಾಟಕ್ಕೆ ನಿಷೇಧ, 3 ಸ್ಥಳಗಳು ರೆಡ್ ಝೋನ್ : ಡಿಸಿ ಆದೇಶ
ಕೋಲ್ಕತ್ತಾ ಟಿಎಂಸಿ ಕಚೇರಿ ವಿವಾದದ ಮೇಲೆ ಬಂಡಾಯ ಗುಂಪಿಗೆ ಮಮತಾ ಬ್ಯಾನರ್ಜಿ ತೀವ್ರ ವಾಗ್ದಾಳಿ, “ಸಂಸ್ಥೆಗಳನ್ನು ಸ್ವಾಧೀನಪಡಿಸಿಕೊಳ್ಳಲು ಸಾಧ್ಯವಿಲ್ಲ” ಎಂದು ಹೇಳಿಕೆ
ಸಿಸಿಬಿ ಪೊಲೀಸರ ದಾಳಿ–4.96 ಲಕ್ಷ ಮೌಲ್ಯದ ಹೆರಾಯಿನ್ ವಶ, ಓರ್ವ ಬಂಧನ
ಬೆಂಗಳೂರು ಕ್ವಾರಿ ಬಂಡೆ ಕುಸಿತ: ಬಿಹಾರದ ಏಳು ಕಾರ್ಮಿಕರು ಮೃತ
11 ವರ್ಷಗಳಲ್ಲಿ ಡಿಜಿಟಲ್ ಇಂಡಿಯಾ ಆಡಳಿತವನ್ನು ಪರಿವರ್ತಿಸಿ, ನಾಗರಿಕರನ್ನು ಸಬಲಗೊಳಿಸಿದೆ: ಪ್ರಧಾನಿ ಮೋದಿ
ಮುಂಬೈನ ಚೆಂಬೂರಿನಲ್ಲಿ ಶಾಲಾ ಬಸ್ ಮೇಲೆ ಮರ ಉರುಳಿ ಬಿದ್ದು ವಿದ್ಯಾರ್ಥಿ ಸಾವು; ನಾಲ್ವರಿಗೆ ಗಾಯ 