ಅಧಿಕ ಮಾಸದ ಬಾಗಿನ : ಆಸಕ್ತ ದಂಪತಿಗಳಿಗೆ ಪ್ರಸಾದ

ಅಧಿಕ ಮಾಸದ ಬಾಗಿನ : ಆಸಕ್ತ ದಂಪತಿಗಳಿಗೆ ಪ್ರಸಾದ Adhika month: Prasad for interested couples

ಲೋಕದರ್ಶನ ವರದಿ 

ಕೊಪ್ಪಳ 02: ಇಲ್ಲಿನ ಗವಿಶ್ರೀ ನಗರದಲ್ಲಿರುವ ಪ್ರಖ್ಯಾತ ಶ್ರೀ ಸಹಸ್ರಾಂಜನೇಯ ದೇವಸ್ಥಾನದ ವತಿಯಿಂದ ಅಧಿಕ ಮಾಸದ ಪ್ರಯುಕ್ತ ಬಾಗಿನ ಕೊಡುವ ಪದ್ಧತಿಯಂತೆ 33 ದಂಪತಿಗಳಿಗೆ ಶ್ರೀ ಸಹಸ್ರಾಂಜನೇಯ ಗುರುವಿನ ಪ್ರೇರಣೆಯಿಂದ ಈ ಅಧಿಕ ಮಾಸದ ಕೊನೆಯ ಶನಿವಾರ ಜೂನ್ 13 ರಂದು ಬೆಳಿಗ್ಗೆ 9 ಗಂಟೆಗೆ ಜರುಗುವ ವಿಶೇಷ ಪೂಜೆಯಲ್ಲಿ ಬಾಗಿನ ಕೊಡಲಾಗುವದು ಎಂದು ಟ್ರಸ್ಟ್‌ ಪ್ರಧಾನ ಕಾರ್ಯದರ್ಶಿ ಮಂಜುನಾಥ ಜಿ. ಗೊಂಡಬಾಳ ತಿಳಿಸಿದ್ದಾರೆ. 

ತಮ್ಮ ಮನೆಯಲ್ಲಿ ಶ್ರೀ ಆಂಜನೇಯ ಪ್ರತಿಮೆಯನ್ನು ಪೂಜಿಸಲು ಇಚ್ಚಿಸುವಂಥ 33 ದಂಪತಿಗಳಿಗೆ ಆಮಂತ್ರಣ ಬಾಗಿನ ಕೊಡುವ ಪದ್ಧತಿಯಂತೆ ಈ ಬಾರಿ ಅಜ್ಜನ ಸನ್ನಿಧಿಯಿಂದ ಪ್ರತಿಮೆಯನ್ನು ಪೂಜಿಸಲು ಅವರಿಗೆ ಆಶೀರ್ವಾದ ರೂಪದಲ್ಲಿ ಉಡುಗೊರೆಯಾಗಿ ಕೊಟ್ಟು ಹಾರೈಸಲಾಗುವದು. ಸದರಿ ಆಸಕ್ತ ದಂಪತಿಗಳು ಈ ಕೆಳಕಂಡ ದೂರವಾಣಿ ಸಂಖ್ಯೆಗೆ ಕರೆ ಮಾಡಿ ಇಲ್ಲವೇ ಖುದ್ದಾಗಿ ಭೇಟಿಯಾಗಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು, ಕಡ್ಡಾಯವಾಗಿ ಅಂದು ಅವರು ಆಗಮಿಸಬೇಕು ಹಾಗೂ ಹನುಮನ ವಿಗ್ರಹ ಪೂಜೆ ಮಾಡುವ ಕುಟುಂಬಗಳು ಮಾತ್ರ ಹೆಸರು ನೊಂದಾಯಿಸಿಕೊಳ್ಳಬೇಕು.