ಕಂಪ್ಲಿ ಶಾಸಕ ಜೆ.ಎನ್‌.ಗಣೇಶ್‌ಗೆ ಅವರಿಗೆ ಸಚಿವ ಸ್ಥಾನ ನೀಡಿ .ಕಾಂಗ್ರೆಸ್ ಯುವ ಮುಖಂಡ ಎಸ್ ಕನಕಪ್ಪ ಒತ್ತಾಯ

ಕಂಪ್ಲಿ ಶಾಸಕ ಜೆ.ಎನ್‌.ಗಣೇಶ್‌ಗೆ ಅವರಿಗೆ ಸಚಿವ ಸ್ಥಾನ ನೀಡಿ .ಕಾಂಗ್ರೆಸ್ ಯುವ ಮುಖಂಡ ಎಸ್ ಕನಕಪ್ಪ ಒತ್ತಾಯ  Give Ministerial post to Compli MLA J.N. Ganesh. Congress Youth Leader S Kanakappa Demands

ಲೋಕದರ್ಶನ ವರದಿ

ಕಂಪ್ಲಿ 02 :  ಕಂಪ್ಲಿ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯದೊಂದಿಗೆ ಜನಪರ ಸೇವೆ ಮಾಡುತ್ತಾ, ಕಾಂಗ್ರೆಸ್‌ನ ಶಿಸ್ತಿನ ಸಿಪಾಯಿಯಾಗಿರುವ ಅಭಿವೃದ್ದಿ ಹರಿಕಾರ ಬಡವರ ಬಂದು ಜನಪ್ರಿಯ ಶಾಸಕ ಜೆ.ಎನ್‌.ಗಣೇಶ್‌ಗೆ ಸಚಿವ ಸ್ಥಾನ ಕಲ್ಪಿಸಬೇಕೆಂದು ಕಾಂಗ್ರೆಸ್ ಯುವ ಮುಖಂಡ ಸುಣಗಾರ ಕನಕಪ್ಪ ಆಗ್ರಹಿಸಿದರು.ಪಟ್ಟಣದಲ್ಲಿ ಮಂಗಳವಾರ ಪತ್ರಕರ್ತರೊಂದಿಗೆ ಮಾತನಾಡಿ, ಕಳೆದ 2018ರಲ್ಲಿ ಮತದಾರರ ಆಶೀರ್ವಾದಿಂದ ಮೊದಲ ಗೆಲುವು ಸಾಧಿಸಿದ ದಿನದಿಂದಲೂ ಇಲ್ಲಿತನಕ ಕ್ಷೇತ್ರದಲ್ಲಿ ಶಿಕ್ಷಣ ರಸ್ತೆ, ಬೀದಿ ದೀಪ, ಕುಡಿಯುವ ನೀರು ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ ಏಕೈಕ ಶಾಸಕ ಜೆ.ಎನ್‌.ಗಣೇಶ. ಈ ಭಾಗದಲ್ಲಿ ಅತಿ ಹೆಚ್ಚಾಗಿ ಎಲ್‌ಎಲ್‌ಸಿ.ಮತ್ತು ಎಚ್‌ಎಲ್‌ಸಿ ಭಾಗದ ಕೃಷಿಕ ರೈತರ ಬೆಳೆಗಳಿಗೆ ನಿರಂತರವಾಗಿ ಕಷ್ಟದ ಸಮಯದಲ್ಲಿ ನೀರು ಹರಿಸಿ, ರೈತರ ಬದುಕು ಹಸನ ಮಾಡಿದ್ದಾರೆ. ಕಳೆದ ಏಂಟು ವರ್ಷಗಳಿಂದ ಕಂಪ್ಲಿ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸದೊಂದಿಗೆ ರಾಜ್ಯ ತಿರುಗಿ ನೋಡುವಂತೆ ಮಾಡಿದ್ದಾರೆ. ಪ್ರತಿಯೊಂದು ಹಂತದಲ್ಲಿ ಜನರ ಸೇವೆ ಮಾಡಿ, ಜನಮೆಚ್ಚಿನ ನಾಯಕನಾಗಿ ಹೊರಹೊಮ್ಮಿದ ಶಾಸಕ ಗಣೇಶ್‌ಗೆ ಡಿ.ಕೆ.ಶಿವಕುಮಾರ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ವರಿಷ್ಠರು ಹೆಚ್ಚಿನ ಗಮನ ಹರಿಸಿ, ಸಚಿವ ಸ್ಥಾನ ನೀಡಬೇಕು ಎಂದು ಒತ್ತಾಯಿಸಿದರು.