ಬ್ಲೂಹಿಲ್ ಹೊಟೇಲ್ ಬಳಿ ಗಾಂಜಾ ದಂಧೆ! 55,000 ಮೌಲ್ಯದ ಸ್ವತ್ತು ಜಪ್ತಿ, ಆರೋಪಿ ಬಂಧನ
Marijuana racket near Bluehill Hotel! Property worth Rs. 55,000 seized, accused arrested
ಲೋಕದರ್ಶನ ವರದಿ
ಮುಂಡಗೋಡ 02 : ಪಟ್ಟಣದ ಯಲ್ಲಾಪುರ ರಸ್ತೆಯ ಬ್ಲೂಹಿಲ್ ಹೋಟೆಲ್ ಸಮೀಪ ಬಹಿರಂಗವಾಗಿಯೇ ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಮುಂಡಗೋಡ ಪೊಲೀಸರು ಬಂಧಿಸಿ, ?55 ಸಾವಿರ ಮೌಲ್ಯದ ಗಾಂಜಾ ಹಾಗೂ ವಾಹನವನ್ನು ಜಪ್ತಿ ಮಾಡಿದ್ದಾರೆ. ಹಳದಿ ಬ್ಯಾಗ್ನಲ್ಲಿ ಅಡಗಸಿ ಬಹಿರಂಗವಾಗಿಯೇ ಗಾಂಜಾ ಮಾರಾಟ ಮಾಡುತ್ತಿದ್ದ ದಂಧೆಕೋರನಿಗೆ ಮುಂಡಗೋಡ ಪೊಲೀಸರು ಕೊನೆಗೂ ಚಳ್ಳೆಹಣ್ಣು ತಿನ್ನಿಸಿದದಾರೆ! ಬಂಧಿತ ಆರೋಪಿ ಮುಡಗೋಡ ಪಟ್ಟಣದ ಹಳೂರು ಓಣಿ ನಿವಾಸಿ ಇಸ್ಮಾಯಿಲ್ ಬಾಬುಸಾಬ್ ಜಮಖಂಡಿ (40) ಎಂದು ಗುರುತಿಸಲಾಗಿದದು, ಆತನ ಬಳಿ ಇದ್ದ 436 ಗ್ರಾಂ ಗಾಂಜಾ (ಅಂದಾಜು 25,000 ಮೌಲ್ಯ) ಹಾಗೂ ಕೃತಯಕ್ಕೆ ಬಳಸಿದ 30,000 ಮೌಲ್ಯದ ಬೈಕ್ ಸೇರಿ ಒಟ್ಟು 55,000 ಮೌಲ್ಯದ ಸ್ವತ್ತನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.
ಉತ್ತರ ಕನ್ನಡ ಎಸ್ಪಿ ದೀಪನ್ ಎಮ್.ಎನ್, ಹೆಚ್ಚುವರಿ ಎಸ್ಪಿ ಕೃಷ್ಣಮೂರ್ತಿ ಜಿ ಹಾಗೂ ಶಿರಸಿ ಡಿವೈಎಸ್ಪಿ ಗೀತಾ ಪಾಟೀಲ್, ರವರ ಮಾರ್ಗದರ್ಶನದಲ್ಲಿ, ಮುಡಗೋಡ ಸಿಪಿಐ ರಮೇಶ್ ಹನಾಪುರ ಹಾಗೂ ಪಿಎಸ್‌ಐ ಮಂಜುನಾಥ ಗೌಡರ ನೇತೃತ್ವದ ತಂಡ ಈ ಯಶಸ್ವಿ ಕಾರ್ಯಾಚರಣೆ ನಡೆಸಿತು. ಪ್ರೊಬೇಷನರಿ ಪಿಎಸ್‌ಐ ಕಾಸಿಮಸಾ ವಾಗಣಗೇರಿ ಸೇರಿದತೆ ಶಿದ್ದಲಿಂಗೇಶ, ಅಣ್ಣಪ್ಪ ಬುಡಿಗೇರ, ಕೆಂಚಪ್ಪ ಜಾಲಿಕಟ್ಟಿ, ಮುತ್ತು ಭೋವಿ, ಸಂಜು ರಾಠೋಡ, ಮಂಜುನಾಥ ಓಣಿಕೇರಿ ಮತ್ತು ಬಸವರಾಜ ಒಡೇಯರ್ ಈ ದಾಳಿಯಲ್ಲಿ ಸಕರಿಯವಾಗಿ ಪಾಲ್ಗೊಂಡರು.
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ 