ಸೌಂದತ್ತಿ

ಅಭ್ಯರ್ಥಿಯ ಗೆಲುವಿಗೆ ಕಾರ್ಯಕರ್ತರು ಪ್ರಯತ್ನಸಿ: ಕಾರಜೋಳ

ಅಭ್ಯರ್ಥಿಯ ಗೆಲುವಿಗೆ ಕಾರ್ಯಕರ್ತರು ಪ್ರಯತ್ನಸಿ: ಕಾರಜೋಳ

ಸವದತ್ತಿ02:   ಪಕ್ಷದ ಎಲ್ಲ ವರಿಷ್ಟರ ಒಮ್ಮತದ ಅಭಿಪ್ರಾಯದಂತೆ ಸುರೇಶ ಅಂಗಡಿಯವರ ಧರ್ಮ ಪತ್ನಿ ಮಂಗಳಾ ಅಂಗಡಿಯವರನ್ನು ಬೆಳಗಾವಿ ಲೋಕಸಭಾ ಉಪ ಚುನಾವಣೆಯ ಬಿಜೆಪಿ ಅಭ್ಯರ್ಥಿಯನ್ನಾಗಿಸಲಾಗಿದ್ದು, ಬಿಜೆಪಿ ಪಕ್ಷದ ಕಾರ್ಯಕರ್ತರು ಪ್ರಾಮಾಣಿಕವಾಗಿ ಪಕ್ಷದ ಅಭ್ಯರ್ಥಿಯ ಗೆಲುವಿಗೆ ನಿರಂತರ ಪ್ರಯತ್ನ ಮಾಡಬೇಕೆಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದರು. 

ಪಟ್ಟಣದ ಮಾಮನಿ ಕಲ್ಯಾಣ ಮಂಟಪದಲ್ಲಿ ಬೆಳಗಾವಿ ಲೋಕಸಭೆ ಉಪ ಚುನಾವಣೆ ಅಂಗವಾಗಿ ಬಿಜಿಪಿ ಅಭ್ಯರ್ಥಿ ಮಂಗಳಾ ಅಂಗಡಿಯವರ ಪರವಾಗಿ ಮತಯಾಚನೆ ಕುರಿತು ಹಮ್ಮಿಕೊಂಡ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.

ರಾಜ್ಯ ಮತ್ತು ಕೇಂದ್ರದಲ್ಲಿ ಬಿಜೆಪಿ ಸರಕಾರಗಳು ಜನಪರವಾದಂತ ಯೋಜನೆಗಳನ್ನು ರೂಪಿಸಿ ಜನರ ಮೆಚ್ಚುಗೆಗೆ ಪಾತ್ರವಾಗಿದ್ದು, ಸರಕಾರಗಳ ಸಾಧನೆಯನ್ನು ಮುಂದಿಟ್ಟುಕೊಂಡು ಮತಯಾಚನೆ ಮಾಡಬೇಕೆಂದರು. ಪ್ರಪಂಚದ ಎಲ್ಲ ರಾಷ್ಟ್ರಗಳು ಇಂದು ಭಾರತದತ್ತ ನೋಡುತ್ತಿದ್ದು, ಪ್ರಧಾನಿ ನರೇಂದ್ರ ಮೋದಿಯವರ ಆಡಳಿತದ ವೈಖರಿಗೆ ಇಂದು ಜಗತ್ತಿನ ಪ್ರತಿಯೊಂದು ರಾಷ್ಟ್ರಗಳು ಅದ್ಧೂರಿಯ ಸ್ವಾಗತ ಕೋರುತ್ತಿವೆ ಎಂದರು.  

ಮಾಜಿ ಮುಖ್ಯಮಂತ್ರಿ ಹಾಗೂ ಸಚಿವ ಜಗದೀಶ ಶೆಟ್ಟರ ಮಾತನಾಡಿ, ದೇಶದ ಹೆಚ್ಚಿನ ರಾಜ್ಯಗಳಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಅಭಿವೃದ್ಧಿ ಪರವಾಗಿರುವ ಯೋಜನೆಗಳನ್ನು ಬೆಂಬಲಿಸಿ ಎಲ್ಲೆಡೆ ಬಿಜೆಪಿ ತನ್ನ ಪ್ರಾಬಲ್ಯತೆಯನ್ನು ಸಾಧಿಸುತ್ತಿದೆ ಎಂದರು. 

ಇತ್ತೀಚಿನ ದಿನಗಳಲ್ಲಿ ದೇಶದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಅಡ್ರೆಸ್ ಇಲ್ಲದಾಗಿದೆ ಎಂದರು. ಸಂಸದ ಸುರೇಶ ಅಂಗಡಿಯವರು ಸಚಿವರಾಗಿ ಒಂದು ವರ್ಷದ ಅವಧಿಯಲ್ಲಿ ರೈಲ್ವೆ ಇಲಾಖೆಯಲ್ಲಿ ಸಾಕಷ್ಟು ಅಭಿವೃದ್ದಿಯನ್ನು ಮಾಡಿರುವುದು ಶ್ಲಾಘನೀಯ ಕಾರ್ಯವಾಗಿದೆ. ಅವರ ಕನಸನ್ನು ನನಸನ್ನಾಗಿಸುವ ಉದ್ಧೇಶದಿಂದ ಏ.17ರಂದು ನಡೆಯುವ ಚುನಾವಣೆಯಲ್ಲಿ ಅವರ ಧರ್ಮಪತ್ನಿ ಮಂಗಳಾ ಅಂಗಡಿಯವರಿಗೆ ಮತ ನೀಡಿ ನರೇಂದ್ರ ಮೋದಿಯವರ ಆಡಳಿತಕ್ಕೆ ಬೆಂಬಲ ಸೂಚಿಸಬೇಕೆಂದರು.

ಬಿಜೆಪಿ ಪಕ್ಷದ ಹಿರಿಯ ಮುಖಂಡರು ಹಾಗೂ ಕಾರ್ಯಕರ್ತರು ಮತ್ತು ಅಭಿಮಾನಿಗಳು ನಮಗೆ ಆತ್ಮಸ್ತೈರ್ಯ ತುಂಬಿರುವದನ್ನು ಮರೆಯುವಂತಿಲ್ಲ. ಪತಿಯ ಕನಸುಗಳನ್ನು ನನಸ್ಸನ್ನಾಗಿಸಲು ಇಂದು ಹೈಕಮಾಂಡ ಸೇರಿದಂತೆ ಎಲ್ಲ ಮುಖಂಡರು ಕಾರ್ಯಕರ್ತರು ಉಪ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಿದ್ದಾರೆ. ಪತಿಯ ರಾಜಕೀಯ ಹಾಗೂ ಅಭಿವೃದ್ದಿಪರವಾಗಿರುವ ಸಾಧನೆಗಳನ್ನೆ ಗುರಿಯಾಗಿಸಿಕೊಂಡು ಜನರ ಸಂಕಷ್ಟಗಳಿಗೆ ಸ್ಪಂಧಿಸುವ ಆತ್ಮ ವಿಶ್ವಾಸವನ್ನು ನಾನು ಹೊಂದಿದ್ದು, ಮತದಾರರು ನನಗೆ ಆಶೀರ್ವಾದ ಮಾಡಬೇಕೆಂದು ವಿನಂತಿಸಿದರು.

ವಿಧಾನಸಭೆ ಉಪಸಭಾಧ್ಯಕ್ಷ ಆನಂದ ಮಾಮನಿ ಮಾತನಾಡಿ, ಬೆಳಗಾವಿ ಲೋಕಸಭಾ ಮತಕ್ಷೇತ್ರ ಸೇರಿದಂತೆ ಕೇಂದ್ರ ಸರಕಾರದಲ್ಲಿ ಸಚಿವಸ್ಥಾನ ಪಡೆದು ಸುರೇಶ ಅಂಗಡಿಯವರು ಹಮ್ಮಿಕೊಂಡಂತ ಅಭಿವೃದ್ದಿಪರವಾಗಿರುವ ಕಾರ್ಯಗಳು ಮಾದರಿಯಾಗಿವೆ ಎಂದರು. ಸವದತ್ತಿ ಯಲ್ಲಮ್ಮಾ ಮತಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಮಂಗಳಾ ಅಂಗಡಿಯವರಿಗೆ ಹೆಚ್ಚಿನ ಮತಗಳು ಬರುವಂತೆ ಕಾರ್ಯಕರ್ತರು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಲಿದ್ದಾರೆ ಎಂದರು.

ಸಚಿವ ಉಮೇಶ ಕತ್ತಿ ಮಾತನಾಡಿ, ಸುರೇಶ ಅಂಗಡಿಯವರು ಸಚಿವರಾಗಿ ಒಂದು ವರ್ಷದ ಅವಧಿಯಲ್ಲಿ ರೈಲ್ವೆ ಇಲಾಖೆಯಲ್ಲಿ 57 ಸಾವಿರ ಕೋಟಿ ರೂ.ಗಳಷ್ಟು ಅನೇಕ ಯೋಜನೆಗಳನ್ನು ರೂಪಿಸುವದರ ಜೊತೆಗೆ ಕರ್ನಾಟಕದಲ್ಲಿ ಹೊಸ ಹೊಸ ಯೋಜನೆಗಳನ್ನು ಜಾರಿಗೆ ತಂದಿರುವುದನ್ನು ಸ್ಮರಿಸಬೇಕಿದೆ ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ಸಂಜಯ ಪಾಟೀಲ, ವಿ.ಪ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಮಾತನಾಡಿದರು.

ಸಂಸದ ಅಣ್ಣಾಸಾಹೇಬ ಜೊಲ್ಲೆ, ರಾಜ್ಯ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ, ಶಾಸಕ ಮಹಾಂತೇಶ ದೊಡಗೌಡರ, ಮಾಜಿ ಶಾಸಕ ಡಾ.ವಿ.ಐ.ಪಾಟೀಲ, ಶಶಿಕಾಂತ ನಾಯಕ, ಪುರಸಭೆ ಅಧ್ಯಕ್ಷ ರಾಜಶೇಖರ ಕಾರದಗಿ, ವಿಜಯ ಅಮಠೆ, ದೀಪಕ ಜಾನ್ವೇಕರ ಇತರರು ಉಪಸ್ಥಿತರಿದ್ದರು.

ಬಿಜೆಪಿ ತಾಲೂಕು ಅಧ್ಯಕ್ಷ ಈರಣ್ಣ ಚಂದರಗಿ ಸ್ವಾಗತಿಸಿದರು. ಸಿ.ಎಸ್.ಸಂಬಯ್ಯನಮಠ ನಿರೂಪಿಸಿ ವಂದಿಸಿದರು.

ಸುದ್ದಿ ಓದಿ