ಅಂತರರಾಷ್ಟ್ರೀಯ

ವಿದೇಶ ರಷ್ಯಾದೊಂದಿಗೆ ಯುದ್ಧ ಭೀತಿ: ಉಕ್ರೇನ್ ನಲ್ಲಿ ನಕಲಿ ಬಂದೂಕಗಳಿಂದ ಜನರಿಗೆ ತರಬೇತಿ

ವಿದೇಶ ರಷ್ಯಾದೊಂದಿಗೆ ಯುದ್ಧ ಭೀತಿ: ಉಕ್ರೇನ್ ನಲ್ಲಿ ನಕಲಿ ಬಂದೂಕಗಳಿಂದ ಜನರಿಗೆ ತರಬೇತಿ

ಕೈವ್: ಜನವರಿ 31   ಕದನ ವಿರಾಮದ ನಂತರವೂ ರಷ್ಯಾ ಮತ್ತು ಉಕ್ರೇನ್‌ನಲ್ಲಿ ಉದ್ವಿಗ್ನತೆ ಮುಂದುವರಿದಿದೆ. ರಷ್ಯಾದ ಸೈನ್ಯವು ಉಕ್ರೇನ್ ಅನ್ನು ಭೂ ಹಾಗೂ ಸಮುದ್ರದ ಮೂಲಕ ಸುತ್ತುವರಿದಿದೆ. ರಾಜತಾಂತ್ರಿಕರ ಮಾತುಕತೆ ವಿಫಲವಾದ್ರೆ ಉಕ್ರೇನ್‌ನ ಪೂರ್ವ ಗಡಿಯಲ್ಲಿ ಯುದ್ಧ ಪ್ರಾರಂಭವಾಗುವ ಸಾಧ್ಯತೆ ತಳ್ಳಿ ಹಾಕುವಂತಿಲ್ಲ.

ಸಂಭಾವ್ಯ ರಷ್ಯಾದ ದಾಳಿಯ ಬೆದರಿಕೆಯ ದೃಷ್ಟಿಯಿಂದ ಉಕ್ರೇನ್‌ನ ಸಾಮಾನ್ಯ ಜನರು ಸಹ ಸಜ್ಜಾಗ ತೊಡಗಿದ್ದಾರೆ. ನಕಲಿ ಬಂದೂಕುಗಳ ಮೂಲಕ ರಷ್ಯಾದ ಬೆದರಿಕೆಯನ್ನು ಎದುರಿಸಲು ಸೇನೆಯೊಂದಿಗೆ ಮಿಲಿಟರಿ ಅಭ್ಯಾಸದಲ್ಲಿ ಜನ ನಿರತರಾಗಿರುವುದು ಕಂಡುಬಂದಿದೆ.

ಮಾಧ್ಯಮ ವರದಿಗಳ ಪ್ರಕಾರ ಉಕ್ರೇನ್‌ನ ಅನೇಕ ನಗರಗಳಲ್ಲಿ ಜನರಿಗೆ ಮಿಲಿಟರಿ ತರಬೇತಿ ನೀಡುವ ಸಂಬಂಧ ಹೋರ್ಡಿಂಗ್ ಗಳನ್ನು ಹಾಕಲಾಗಿದೆ. ಈ ಹೋರ್ಡಿಂಗ್‌ಗಳಲ್ಲಿ “ನಿಮ್ಮ ಮನೆಯನ್ನು ಹೇಗೆ ರಕ್ಷಿಸಬೇಕೆಂಬ ಬಗ್ಗೆ ತಿಳಿದುಕೊಳ್ಳಿರಿ” ಎಂದು ಬರೆಯಲಾಗಿದೆ. ಇದರಿಂದ ಉಕ್ರೇನ್ ಸೇನೆಯ ತರಬೇತಿಯಲ್ಲಿ ಸಾಮಾನ್ಯ ನಾಗರಿಕರು ಪಾಲ್ಗೊಳ್ಳುವ ಪ್ರಮಾಣ ಹೆಚ್ಚಾಗತೊಡಗಿದೆ.

2014ರಲ್ಲಿ ರಷ್ಯಾ ಕ್ರೈಮಿಯಾವನ್ನು ಸ್ವಾಧೀನಪಡಿಸಿಕೊಂಡ ನಂತರ ಉಕ್ರೇನ್ ನಲ್ಲಿ ಪ್ರಾದೇಶಿಕ ರಕ್ಷಣಾ ಪಡೆಗಳನ್ನು ಸ್ಥಾಪನೆ ಮಾಡಲಾಯಿತು. ಯೋಧರು ನೀಡುತ್ತಿರುವ ಈ ಟ್ರೈನಿಂಗ್ ನಲ್ಲಿ ಗೆರಿಲ್ಲಾ ತಂತ್ರಗಳ ಜೊತೆಗೆ ಬಂದೂಕು ನಿರ್ವಹಣೆಯ ಬಗ್ಗೆ ಕಲಿಸಿ ಕೊಡಲಾಗುತ್ತಿದೆ. ವಯಸ್ಕರ ಜೊತೆಗೆ ಮಕ್ಕಳು ಸಹ ಅಭ್ಯಾಸದಲ್ಲಿ ಭಾಗವಹಿಸುತ್ತಿದ್ದಾರೆ.

ಈ ಮಧ್ಯೆ ಬುಧವಾರ ಪ್ಯಾರಿಸ್ ನಲ್ಲಿ 8 ಗಂಟೆಗಳ ಕಾಲ ನಡೆದ ಸಭೆಯಲ್ಲಿ ರಷ್ಯಾ ಮತ್ತು ಉಕ್ರೇನ್ ಮಧ್ಯೆ ಕದನ ವಿರಾಮ ಒಪ್ಪಂದವಾಗಿದೆ. ಆದ್ರೂ ಸಹ ಎರಡು ದೇಶಗಳ ಮಧ್ಯೆ ಪರಿಸ್ಥಿತಿ ಉದ್ವಿಗ್ನತೆಯಿಂದ ಕೂಡಿದೆ. ರಷ್ಯಾ ರಾಷ್ಟ್ರದ ಯುದ್ಧ ಭೀತಿ ಹಾಗೂ ಪುಟಿನ್ ಆಕ್ರಮಣಕಾರಿ ನೀತಿಯ ಬಗ್ಗೆ ಉಕ್ರೇನ್ ಜನ್ರು ಕೋಪದಲ್ಲಿದ್ದಾರೆ.

ಸುದ್ದಿ ಓದಿ