ಅಂತರರಾಷ್ಟ್ರೀಯ

ವಿಯೆಟ್ನಾಂ ಅಧ್ಯಕ್ಷತೆಯಲ್ಲಿ ಇಂದಿನಿಂದ ಆಸಿಯಾನ್ ಒಕ್ಕೂಟ ಶೃಂಗಸಭೆ: ಆರ್ ಸಿಇಪಿಗೆ ಸಹಿ ಸಾಧ್ಯತೆ

ವಿಯೆಟ್ನಾಂ ಅಧ್ಯಕ್ಷತೆಯಲ್ಲಿ ಇಂದಿನಿಂದ ಆಸಿಯಾನ್ ಒಕ್ಕೂಟ ಶೃಂಗಸಭೆ: ಆರ್ ಸಿಇಪಿಗೆ ಸಹಿ ಸಾಧ್ಯತೆ

ಮಾಸ್ಕೋ, ನವೆಂಬರ್ 12: ವಿಯೆಟ್ನಾಂ ಅಧ್ಯಕ್ಷತೆ ವಹಿಸಿರುವ ಆಗ್ನೇಯ ಏಷ್ಯಾ ರಾಷ್ಟ್ರಗಳ ಒಕ್ಕೂಟ (ಆಸಿಯಾನ್)ದ 37 ನೇ ಶೃಂಗಸಭೆ ಗುರುವಾರ ಆರಂಭವಾಗಲಿದ್ದು ನ 15 ರವರೆಗೆ ನಡೆಯಲಿದೆ.

 ಶೃಂಗಸಭೆಯು ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆಯಲಿದೆ. ಕೋವಿಡ್-19 ಸಾಂಕ್ರಾಮಿಕದಿಂದ ಆರ್ಥಿಕತೆಯ ಮೇಲಿನ ಪರಿಣಾಮಗಳು ಮತ್ತು ಪ್ರಾದೇಶಿಕ ಬೆಳವಣಿಗೆಗಳ ಮೇಲೆ ಶೃಂಗಸಭೆಯ ಕಾರ್ಯಸೂಚಿ ಕೇಂದ್ರೀಕರಿಸುವ ಸಾಧ್ಯತೆ ಇದೆ. ಶೃಂಗಸಭೆಯ ಕೊನೆಯ ದಿನದಂದು ಆಸಿಯಾನ್ ಸದಸ್ಯ ರಾಷ್ಟ್ರಗಳು ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ (ಆರ್‌ಸಿಇಪಿ) ಒಪ್ಪಂದಕ್ಕೆ ಸಹಿ ಹಾಕುವ ಸಾಧ್ಯತೆ ಇದೆ ಎಂದು ವಿಯೆಟ್ನಾಂ ಉಪ ವಿದೇಶಾಂಗ ಸಚಿವ ನ್ಗುಯೇನ್ ಕ್ವಾಕ್ಡಂಗ್ ಹೇಳಿದ್ದಾರೆ. 

ಆರ್‍ ಸಿಇಪಿ, ಆಸಿಯಾನ್ ಸದಸ್ಯ ರಾಷ್ಟ್ರಗಳು ಮತ್ತು ಈ ದೇಶಗಳ ಮುಕ್ತ ವ್ಯಾಪಾರ ಪಾಲುದಾರ ದೇಶಗಳಾದ ಚೀನಾ, ಭಾರತ, ಜಪಾನ್, ದಕ್ಷಿಣ ಕೊರಿಯಾ, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ನಡುವಿನ ಉದ್ದೇಶಿತ ವ್ಯಾಪಾರ ಒಪ್ಪಂದವಾಗಿದೆ.

ಆಸಿಯಾನ್ ಒಕ್ಕೂಟ ಸದಸ್ಯ ರಾಷ್ಟ್ರಗಳಲ್ಲಿ ಬ್ರೂನಿ, ಕಾಂಬೋಡಿಯಾ, ಇಂಡೋನೇಷ್ಯಾ, ಲಾವೋಸ್, ಮಲೇಷ್ಯಾ, ಮ್ಯಾನ್ಮಾರ್, ಫಿಲಿಪೈನ್ಸ್, ಸಿಂಗಾಪುರ, ಥಾಯ್ಲೆಂಡ್ ಮತ್ತು ವಿಯೆಟ್ನಾಂ ಸೇರಿವೆ.

ಸುದ್ದಿ ಓದಿ