ಸೂಕ್ತ ಕ್ರಮ ಒದಗಿಸುವಂತೆ ಒತ್ತಾಯಿಸಿ ಎಬಿವಿಪಿ ಪ್ರತಿಭಟನೆ
ಲೋಕದರ್ಶನ ವರದಿ
ಹಾವೇರಿ12 : ನಗರದ ಜಿ.ಎಚ್.ಕಾಲೇಜು ವಿದ್ಯಾಥರ್ಿನಿ ರೇಣುಕಾಳನ್ನ ದುಷ್ಕಮರ್ಿಗಳು ಕುತಂತ್ರದಿಂದ ಕೊಲೆಗೈದು ನಿನ್ನೆ ದಿನ ವಿದ್ಯಾಥರ್ಿನಿಯ ಶವ ಅರೆಬೆಂದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ವಿದ್ಯಾಥರ್ಿಯ ಅರೆಬೆಂದ ದೇಹವನ್ನು ನೋಡಿದರೆ ದುಷ್ಕಮರ್ಿಗಳು ಅನುಮಾಸ್ಪಾದವಾಗಿ ಬಾಲಕಿಯನ್ನು ಕೊಂದು ಹಾಕಿರುವ ಅನುಮಾನ ವ್ಯಕ್ತವಾಗುತ್ತಿದೆ. ಇಂತಹ ಘಟನೆಗಳು ಜಿಲ್ಲೆಯಲ್ಲಿ ದಿನೆ ದಿನೆ ಹೆಚ್ಚುತ್ತಿವೆ. ಈ ಕೃತ್ಯ ವೇಸಗಿದವರನ್ನು ಕೊಡಲೇ ಬಂಧಿಸಬೇಕು.ಅವರಿಗೆ ಶಿಕ್ಷೆ ನೀಡಿ ವಿದ್ಯಾಥರ್ಿನಿಗೆ ನ್ಯಾಯ ದೊರೆಯುವಂತೆ ಮಾಡಬೇಕು ಹಾಗೂ ಇಂತಹ ಘಟನೆ ಮುಂದೆಂದೂ ನಡೆಯದಂತೆ ಸೂಕ್ತ ಕ್ರಮ ಒದಗಿಸುವಂತೆ ಒತ್ತಾಯಿಸಿ ಅಖಿಲ ಭಾರತೀಯ ವಿದ್ಯಾಥರ್ಿ ಪರಿಷತ್ ಹಾಗೂ ಜಿ ಎಚ್ ಕಾಲೇಜಿನ ಬೋಧಕ ವರ್ಗ ಹಾಗೂ ಸಾವಿರಾರು ವಿದ್ಯಾಥರ್ಿ ವೃಂದದವರು ಸಕರ್ಾರಕ್ಕೆ ಮನವಿ ಸಲ್ಲಿಸಿದರು. ಸಾವಿರಾರು ವಿದ್ಯಾಥರ್ಿಗಳು ಜಿಎಚ್ ಕಾಲೇಜಿನ ಮುಂದೆ ಪ್ರತಿಭಟಿಸಿ ನಡಿಸಿ ಪಾದಯಾತ್ರೆಯ ಮೂಲಕ ಸಿದ್ದಪ್ಪ ಸರ್ಕಲಿನಲ್ಲಿ ಜಮಾಯಿಸಿ ರಸ್ತೆ ತಡೆ ಮಾಡಿ ಸುಮಾರು 2 ಘಂಟೆಗಳ ಕಾಲ ಹೋರಾಟ ಮಾಡಿ ರೇಣುಕಾಳಗೆ ನ್ಯಾಯ ಒದಗಿಸಿ ಎಂಬ ಕೂಗು ಪ್ರತಿಧ್ವಿನಿಸಿತು. ಕಾಲೇಜಿನ ಪ್ರಚಾರ್ಯರಾದ ಎಸ್ಬಿ ನಾಡಗೌಡ ಮನವಿ ಪತ್ರವನ್ನು ಓದಿ ಎಲ್ಲರ ಪರವಾಗಿ ನ್ಯಾಯ ಒದಗಿಸುವಂತೆ ಪೊಲೀಸ್ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.ಸ್ಥಳೀಯ ಆಡಳಿತ ಮಂಡಳಿಯ ಪಿಡಿ ಶಿರೂರ ತೀವ್ರ ರೀತಿಯಾಗಿ ಪೋಲಿಸ್ ಅಧಿಕಾರಿಗಳು ತನಿಖೆ ನಡಿಸಿ ನ್ಯಾಯ ಒದಗಿಸುವಂತೆ ಆಗ್ರಹಿಸಿದರು.ಈ ಸಂದರ್ಭದಲ್ಲಿ ರೇಣುಕಾಗೆ ನ್ಯಾಯಕ್ಕಾಗಿ ಹಲವಾರು ರೈತ ಸಂಘಟನೆ ಹಾಗೂ ದಲಿತ ಸಂಘಟನೆ. ಮಹಿಳಾ ಸಂಘಟನೆಗಳು ಸೇರಿದಂತೆ ವಿವಿಧ ಸಂಘಟನೆಗಳ ಹೋರಾಟಗಾರರು ಸ್ವಯಂ ಪ್ರೇರಿತವಾಗಿ ಬೆಂಬಲಿಸಿ ಹೋರಾಟಕ್ಕೆ ಸಾಥ್ ನೀಡಿದರು.
ಜಿಎಚ್ ಕಾಲೇಜಿನ ಉಪನ್ಯಾಸಕ ವರ್ಗದವರು ಕೈಗಳಿಗೆ ಕಪ್ಪು ಪಟ್ಟಿ ಕಟ್ಟುವ ಮೂಲಕ ತಮ್ಮ ವಿದ್ಯಾಥರ್ಿನಿಗೆ ನ್ಯಾಯ ಒದಗಿಸುವಂತೆ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.ಎಬಿವಿಪಿ ಮುಖಂಡ ಕಿರಣ ಕೋಣನವರ ಮಾತನಾಡಿ ರೇಣುಕಾ ಪಾಟೀಲ ವಿದ್ಯಾಥರ್ಿನಿಯ ಕೊಲೆಯನ್ನು ನ್ಯಾಯ ಪೂರಕವಾಗಿ ತನಿಖೆ ಮಾಡಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಬೇಕು.
ವಿದ್ಯಾಥರ್ಿನಿಯರ ಸುರಕ್ಷತೆಗೆ ಸೂಕ್ತ ಪೋಲಿಸ್ ಬಂದೋಬಸ್ತನ್ನು ಒದಗಿಸಬೇಕು. ನಗರದಲ್ಲಿ ಸಿಸಿ ಕ್ಯಾಮರಾ ವ್ಯವಸ್ಥೆ ಅಳವಡಿಸಿ ಅವುಗಳನ್ನು ಪ್ರತಿ ವಾರಕ್ಕೊಮ್ಮೆ ಪರಿಶೀಲಿಸಿ ದುರ್ಘಟನೆಗಳನ್ನು ತಡೆಗಟ್ಟುವ ಹಾಗೆ ಕ್ರಮಕ್ಕೆ ಮುಂದಾಗಬೇಕು ಎಂದು ಒತ್ತಾಯಿಸಿದರು.ಎಬಿವಿಪಿ ಸಂಘಟನೆಯ ರಾಜ್ಯ ನಾಯಕರು ಮುಖಂಡರು ಸೇರಿದಂತೆ.ಜಿಎಚ್ ಕಾಲೇಜ್. ಕೊಳ್ಳಿ ಪಾಲಿಟೇಕ್ನಿಕ್ ಕಾಲೇಜ ಹಾಗೂ ನಗರದ ವಿವಿಧ ಕಾಲೇಜುಗಳ ಸಾವಿರಾರು ವಿದ್ಯಾಥರ್ಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ 