ಸಂತಾನ ಶಸ್ತ್ರಚಿಕಿತ್ಸೆಗೆ ಹೋದ ಮಹಿಳೆ ಶವವಾಗಿ ಬಂದಳು
ಜಮಖಂಡಿ 16: ನಗರದ ಉಪವಿಭಾಗ ಸರಕಾರಿ ಆಸ್ಪತ್ರೆಯಲ್ಲಿ ಸಂತಾನ ಹರಣ ಶಸ್ತ್ರಚಿಕಿತ್ಸೆ ನಂತರ ವೈದ್ಯರ ಮತ್ತು ಶೂಷಕ್ರಿಯವ ನಿರ್ಲಕ್ಷದಿಂದ ಮೂರು ಮಕ್ಕಳನ್ನು ಹೊಂದಿದ ಮಹಿಳೆಯೊಬ್ಬಳು ಮೃತಪಟ್ಟಿರುವ ಘಟನೆಯೊಂದು ಬೆಳಗಿನ ಜಾವ ನಡೆದಿದೆ.
ತಾಲೂಕಿನ ತುಂಗಳ ಗ್ರಾಮದ ಮಹಿಳೆ ನೀಲವ್ವ ಮಾಯಪ್ಪ ಹೂಗಾರ (25) (ತವರುಮನೆ ತುಂಗಳ ಗ್ರಾಮ, ಗಂಡನ ಅಥಣಿ ತಾಲೂಕಿನ ಕೊಕಟನೂರ ಗ್ರಾಮ) ಮೃತ ದುರ್ದೈವಿಯಾಗಿದ್ದು, ಸಮರ್ಕ ರೀತಿಯಲ್ಲಿ ಉತ್ತಮ ವೈದ್ಯಕೀಯ ಚಿಕಿತ್ಸೆ, ವೈದ್ಯ ಮತ್ತು ಸಿಬ್ಬಂದಿಗಳ ನಿರ್ಲಕ್ಷ್ಯತನದಿಂದ ಮಹಿಳೆಯ ಸಾವು ಸಂಭವಿಸಿದೆ ಎಂದು ಮೃತಳ ಪತಿ ಮಾಯಪ್ಪ ನೇರ ಆರೋಪ ಮಾಡಿದ್ದಾರೆ. ಸರಕಾರಿ ಆಸ್ಪತ್ರೆಯ ವೈದ್ಯರ ದುರವರ್ತನೆಗೆ ಗ್ರಾಮಸ್ಥರು, ವಿವಿಧ ಸಂಘಟನೆಗಳು ಆಸ್ಪತ್ರೆಯಲ್ಲಿ ಆಕ್ರೋಶ ವ್ಯಕ್ತ ಪಡಿಸಿ ಪ್ರತಿಭಟನೆ ನಡೆಸಿದರು.
ಮೃತ ನೀಲವ್ವ ಹೂಗಾರ ಅವಳಿಗೆ ಮೂರು ಮಕ್ಕಳಿದ್ದು, ಅದರಲ್ಲಿ ಮೂರನೇ ಮಗು ಎರಡು ತಿಂಗಳ ಮಗು ಆಗಿದೆ. ಮಕ್ಕಳ ಸಂತಾನ ಚಿಕಿತ್ಸೆ ಮಾಡಿಸಿಕೊಳ್ಳಲು ಜಮಖಂಡಿ ಉಪವಿಭಾಗ ಸರಕಾರಿ ಆಸ್ಪತ್ರೆಗೆ ಆಗಮಿಸಿದ ಅವರು ಆರೋಗ್ಯವಾಗಿದ್ದರು. ಮೃತ ಮಹಿಳೆ ನೀಲವ್ಬ ಶಸ್ತ್ರಚಿಕಿತ್ಸೆ ಮಾಡಿಕೊಂಡು ಆಸ್ಪತ್ರೆಯಿಂದ ಹೊರಗಡೆ ಬರುವ ಬದಲಾಗಿ ಶವವಾಗಿ ಹೊರಬಂದಿರುವದಕ್ಕೆ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಘಟನೆಗೆ ಸಂಬಂಧಿಸಿದ ಎಲ್ಲರನ್ನು ಅಮಾನತ್ ಮಾಡುವಂತೆ ನೆರದಿದ್ದ ಜನರು ಒತ್ತಾಯಿಸಿದರು.
ಸರಕಾರಿ ಆಸ್ಪತ್ರೆಯಲ್ಲಿ ಮೃತ ಶರೀರದ ಮುಂದೆ ತಾಯಿ ಕಳೆದುಕೊಂಡ ಮೂರು ಮಕ್ಕಳಲ್ಲಿ ಎರಡು ತಿಂಗಳ ಕಂದಮ್ಮಾ ಅಳು, ಕಿರಚಾಟ ಎಲ್ಲರ ಕಣ್ಣಲ್ಲಿ ನೀರು ಹರಿಸುವ ಮೂಲಕ ತಂದೆ, ತಾಯಿ, ಪತಿ ಮಾಯಾಪ್ಪ ಹಾಗೂ ಕುಟುಂಬಸ್ಥರ ಅಕ್ರಂದನ ಮುಗಿಲು ಮುಟ್ಟಿತ್ತು. ಎರಡು ತಿಂಗಳ ಕಂದಮ್ಮಳನ್ನು ದೇವರೇ ಕಾಪಾಡಬೇಕು. ಎದೆ ಹಾಲು ಕುಡಿಸಿ ಬೆಳಸಬೇಕಾಗಿದ್ದ ತಾಯಿ ಮೃತಪಟ್ಟಿದ್ದು ಎಲ್ಲರಿಗೂ ಬರಸಿಡಿಲು ಬಡಿದಂತಾಯಿತು. ಸರಕಾರಿ ಅವ್ಯವಸ್ಥೆ ಖಂಡಿಸಿದ ದಲಿತ ಸಂಘಟನೆ ಮುಖಂಡ ಯಮನಪ್ಪ ಗುಣದಾಳ ಪ್ರತಿಭಟನೆ ನಡೆಸುವ ಮೂಲಕ ಮೃತಳ ಕುಟುಂಬಕ್ಕೆ ಸರಕಾರ 25ಲಕ್ಷ ರೂ.ಗಳ ಪರಿಹಾರ ನೀಡುವ ಮೂಲಕ. ತಪ್ಪಿಸ್ಥರಿಗೆ ಕಠಿಣ ಶಿಕ್ಷೆಯಾಗಬೇಕು ಇಲ್ಲವಾದಲ್ಲಿ ಕಾನೂನು ಹೋರಾಟ ಮಾಡಲಾಗುವದು ಎಂದು ಆಕ್ರೋಶ ವ್ಯಕ್ತಪಡಿಸಿದರು.