ತಂದೆಯನ್ನು ಗುಂಡಿಕ್ಕಿ ಕೊಂದ ಎರಡು ವರ್ಷದ ಬಾಲಕ
ಫ್ಲೋರಿಡಾ: ಜೂನ್ 07 : ಎರಡು ವರ್ಷದ ಬಾಲಕನೊಬ್ಬ ಆಕಸ್ಮಿಕವಾಗಿ ತನ್ನ ತಂದೆಯನ್ನು ಗುಂಡಿಕ್ಕಿ ಕೊಂದಿದ್ದಾನೆ ಎಂದು ಫ್ಲೋರಿಡಾದಲ್ಲಿ ಸ್ಥಳೀಯ ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.ಮೃತ ತಂದೆಯನ್ನು ರೆಗ್ಗಿ ಮಾಬ್ರಿ. ತಾಯಿ ಮೇರಿ ಅಯಲಾ. ಬಾಲಕ ಅಪ್ಪ ಬ್ಯಾಗ್ ನಲ್ಲಿ ಇಟ್ಟಿದ್ದ ಬಂದೂಕು ತೆಗೆದು ಗುಂಡು ಹಾರಿಸಿದ್ದಾನೆ. ತಕ್ಷಣವೇ ಆಸ್ಪತ್ರೆಗೆ ಕರೆದೊಯ್ದರೂ ಯಾವುದೇ ಪ್ರಯೋಜನವಾಗಿಲ್ಲ. ಘಟನೆಯ ವೇಳೆ ಐದು ತಿಂಗಳ ಹೆಣ್ಣು ಮಗು ಸೇರಿದಂತೆ ಐವರು ಕುಟುಂಬ ಸದಸ್ಯರು ಒಂದೇ ಕೋಣೆಯಲ್ಲಿದ್ದರು ಎಂದು ತಿಳಿದು ಬಂದಿದೆ. ಪ್ರಾರಂಭದಲ್ಲಿ ಸ್ವತಃ ರೆಗ್ಗಿ ಮಾಬ್ರಿ ಗುಂಡು ಹಾರಿಸಿಕೊಂಡಿದ್ದಾರೆ ಎಂದು ನಂಬಲಾಗಿತ್ತು. ತದನಂತರ ಮೂವರು ಮಕ್ಕಳಲ್ಲಿ ಎರಡು ವರ್ಷದ ಬಾಲಕ ಗುಂಡು ಹಾರಿಸಿರುವುದು ತಿಳಿದು ಬಂದಿತು ಎಂದು ಶೆರಿಫ್ ಜಾನ್ ಮಿನಾ ಹೇಳಿದರು.