ಬೆಳಗಾವಿಯ ವಿದ್ಯಾರ್ಥಿನಿ ಕು. ಸ್ಪೂರ್ತಿ ಕೊಂಕಣಿ ಭರತ ನಾಟ್ಯ ಪರಿಕ್ಷೆಯಲ್ಲಿ ಕರ್ನಾಟಕ ರಾಜ್ಯಕ್ಕೆ 2ನೇ ರ್ಯಾಂಕ್
ಬೆಳಗಾವಿ : ಇತ್ತಿಚೇಗೆ ಮಹಾರಾಷ್ಟ್ರ ಬೋರ್ಡ್‍ನಿಂದ ನಡೆದ ಭರತ ನಾಟ್ಯದ ಅಲಂಕಾರ ಪೂರ್ಣ ಪರೀಕ್ಷೆಯಲ್ಲಿ ಬೆಳಗಾವಿ ಪ್ರತಿಭೆ ಹಾಗೂ ಕೆಎಲ್ ಇ ಸಂಸ್ಥೆಯ ಡಾಕ್ಟರ್ ಆಫ್ ಫಾರ್ಮಸಿ ವಿದ್ಯಾಲಯದ ವಿದ್ಯಾರ್ಥಿನಿ ಕು. ಸ್ಪೂರ್ತಿ ಮಹಾಲಿಂಗ ಕೊಂಕಣಿ ಅವರು ಕರ್ನಾಟಕ ರಾಜ್ಯಕ್ಕೆ 2ನೇ ರ್ಯಾಂಕ್ ಪಡೆದುಕೊಂಡಿದ್ದಾಳೆ.
ಅಖಿಲ ಭಾರತೀಯ ಗಂಧರ್ವ ಮಹಾವಿದ್ಯಾಲಯ ಮುಂಬೈನ ಮಹಾರಾಷ್ಟ್ರ ಬೋರ್ಡ ಆಯೋಜಿಸಿದ್ದ ಭರತನಾಟ್ಯ ಕ್ಷೇತ್ರದ ಪರೀಕ್ಷೆಯಲ್ಲಿ ಬೆಳಗಾವಿಯ ಈ ವಿದ್ಯಾರ್ಥಿನಿ ಕು. ಸ್ಪೂರ್ತಿ ಇವರು ಈ ರ್ಯಾಂಕ್ ಗಿಟ್ಟಿಸಿಕೊಂಡಿದ್ದಾಳೆ. ವಿದ್ವಾನ್ ಟಿ. ರವೀಂದ್ರ ಶರ್ಮಾ ಅವರ ಮಾರ್ಗದರ್ಶನದಲ್ಲಿ ಕು. ಸ್ಪೂರ್ತಿ ಇವಳು ಕಳೆದ 15 ವರ್ಷಗಳಿಂದ ಭರತನಾಟ್ಯ ತರಬೇತಿ ಪಡೆಯುತ್ತಿದ್ದಾರೆ. ಈ ಹಿಂದೆ ಬೆಂಗಳೂರಿನಲ್ಲಿ ನಡೆದ ಘಣರಾಜ್ಯೋತ್ಸವ ಪರೇಡ್‍ನಲ್ಲಿ ಎನ್‍ಎಸ್‍ಎಸ್ ವತಿಯಿಂದ ಆಯ್ಕೆಗೊಂಡು ಭಾಗವಹಿಸಿದ್ದಳು.
ಅಲ್ಲದೆ ಕು. ಸ್ಪೂರ್ತಿ ಇವಳು ಬೆಳಗಾವಿ ಮಾಳಮಾರುತಿ ಪೊಲೀಸ ಠಾಣೆಯಲ್ಲಿ ಎಎಸ್ ಐ ಆಗಿ ಕಾರ್ಯ ಮಾಡುತ್ತಿರುವ ಮಹಾಲಿಂಗ ಕೊಂಕಣಿ ಅವರು ಪುತ್ರಿಯಾಗಿದ್ದಾಳೆ.