ಅಂತರರಾಷ್ಟ್ರೀಯ

ಕ್ಷಿಪಣಿ ದಾಳಿಗೆ ಖಾರ್ಕಿವ್‌ನಲ್ಲಿನ ಶಾಲೆ ಛಿದ್ರ ಛಿದ್ರ!

ಕ್ಷಿಪಣಿ ದಾಳಿಗೆ ಖಾರ್ಕಿವ್‌ನಲ್ಲಿನ ಶಾಲೆ ಛಿದ್ರ ಛಿದ್ರ!

ಕೈವ್: ಜುಲೈ 04: ರಷ್ಯಾದ ಕ್ಷಿಪಣಿ ದಾಳಿಗೆ ಉಕ್ರೇನ್ ನ ಶಾಲೆಯೊಂದು ಛಿದ್ರ ಛಿದ್ರವಾಗಿದೆ. ಉಕ್ರೇನ್‌ನ ಎರಡನೇ ಅತಿದೊಡ್ಡ ನಗರವಾದ ಖಾರ್ಕಿವ್‌ನ ಮಾಧ್ಯಮಿಕ ಶಾಲೆ ನಾಶವಾಗಿದೆ ಎಂದು ಪ್ರಾದೇಶಿಕ ಅಧಿಕಾರಿಗಳನ್ನು ಉಲ್ಲೇಖಿಸಿ ಮಾಧ್ಯಮ ವರದಿಗಳು ಸೋಮವಾರ ತಿಳಿಸಿವೆ.

ಟೆಲಿಗ್ರಾಮ್ ಪೋಸ್ಟ್‌ನಲ್ಲಿ ಓಲೆಹ್ ಸಿನೆಹುಬೊವ್ ಅವರು “ಇಂದು ಮುಂಜಾನೆ 4 ಗಂಟೆಗೆ ರಷ್ಯಾ ಖಾರ್ಕಿವ್‌ನ ಶೆವ್ಚೆಂಕೋವ್ಸ್ಕಿ ಜಿಲ್ಲೆಯ ಮೇಲೆ ಕ್ಷಿಪಣಿ ದಾಳಿ ಮಾಡಿದ್ದಾರೆ” ಎಂದು ಸಿಎನ್‌ಎನ್ ಉಲ್ಲೇಖಿಸಿದೆ.

“ರಷ್ಯಾ ಯೋಧರು ಮಾಧ್ಯಮಿಕ ಶಾಲೆಯನ್ನು ಗುರಿಯಾಗಿರಿಸಿಕೊಂಡು ಈ ದಾಳಿ ಮಾಡಿದ್ದಾರೆಂದು ವರದಿಯಾಗಿದ್ದು, ಸ್ಥಳೀಯ ರಕ್ಷಣಾ ಪಡೆಗಳು ಅವಶೇಷಗಳನ್ನು ತೆರವುಗೊಳಿಸುತ್ತಿದ್ದಾರೆ.”

ಸಿನೆಹುಬೊವ್ ಪ್ರಕಾರ, ಖಾರ್ಕಿವ್ ಪ್ರದೇಶದ ಇತರ ಪ್ರದೇಶಗಳಲ್ಲೂ ದಾಳಿಗಳು ನಡೆದಿವೆ. ಖಾರ್ಕಿವ್ ಪ್ರದೇಶದ ದೆರ್ಗಾಚಿ ಸಮುದಾಯದ ಬೆಜ್ರುಕಿ ಗ್ರಾಮದಲ್ಲಿ ಕನಿಷ್ಠ ಮೂವರು ಸಾವನ್ನಪ್ಪಿದ್ದಾರೆ ಮತ್ತು ಆರು ಮಂದಿ ಗಾಯಗೊಂಡಿದ್ದಾರೆ ಎಂದು ಸಿಎನ್‌ಎನ್ ವರದಿ ತಿಳಿಸಿದೆ. ಆದರೆ, ಗಾಯಾಳುಗಳ ಬಗ್ಗೆ ಇದುವರೆಗೂ ಯಾವುದೇ ವರದಿಯಾಗಿಲ್ಲ.

ಸುದ್ದಿ ಓದಿ