ಅಂತರರಾಷ್ಟ್ರೀಯ

150 ವರ್ಷಗಳ ನಂತರ ಕಾಣಿಸಿಕೊಂಡು ಮಾಯವಾದ ಅಪರೂಪದ ದೊಡ್ಡ ಗೂಬೆ....!

150 ವರ್ಷಗಳ ನಂತರ   ಕಾಣಿಸಿಕೊಂಡು  ಮಾಯವಾದ  ಅಪರೂಪದ ದೊಡ್ಡ ಗೂಬೆ....!

ಲಂಡನ್‌ , ಆ  27: ಜಗತ್ತು ಆಧುನಿಕತೆ,  ತಂತ್ರಜ್ಞಾನ,  ಅಭಿವೃದ್ಧಿಯೊಂದಿಗೆ   ಕ್ಷಿಪ್ರಗತಿಯಲ್ಲಿ    ಮುಂದೆ  ಸಾಗುತ್ತಿದೆ.    ಇದು   ಒಂದುಕಡೆ  ಒಳ್ಳೆಯದಾಗಿದ್ದರೂ..  ಇನ್ನೊಂದೆಡೆ  ಅರಣ್ಯ ನಾಶ,  ಪರಿಸರ ನಾಶಕ್ಕೆ ಕಾರಣವಾಗುತ್ತಿದೆ.  ಪರಿಣಾಮ  ಜೀವ ವೈವಿಧ್ಯತೆಯ  ಪರಿಸ್ಥಿತಿ   ಮತ್ತಷ್ಟು  ಹದಗೆಡುತ್ತಿದೆ. ಈಗಾಗಲೇ  ನಾನಾ     ಪ್ರಬೇಧಗಳ  ಪಕ್ಷಿ, ಪ್ರಾಣಿ, ಜೀವಿಗಳು  ಅಪರೂಪವಾಗುತ್ತಿವೆ  ಇಲ್ಲವೆ  ನಶಿಸಿ ಹೋಗುತ್ತಿವೆ.    ಹಿಂದೆ   ಕಂಡು ಬರುತ್ತಿದ್ದ    ಕೆಲವು  ಜಾತಿಯ  ಪಕ್ಷಿಗಳು  ಪ್ರಾಣಿಗಳು ಈಗ   ಕಂಡುಬರುತ್ತಿಲ್ಲ.     ಇಂತಹ  ಪರಿಸ್ಥಿತಿಯಲ್ಲಿ   ..  ಹೊಸದಾಗಿ   ಒಂದು  ಅಪರೂಪದ ಪಕ್ಷಿ ಕಾಣಿಸಿಕೊಂಡು   ಅಚ್ಚರಿ ಮೂಡಿಸಿದೆ.   ಪ್ರಸ್ತುತ     ಆ ಪಕ್ಷಿಯ    ಫೋಟೋ  ನೆಟ್‌  ಅಂಗಳದಲ್ಲಿ    ವೈರಲ್ ಆಗಿದೆ.

ಪಕ್ಷಿಯ   ವಿಷಯಕ್ಕೆ  ಬಂದರೆ  ..150 ವರ್ಷಗಳ ಹಿಂದೆ ಕಾಣಿಸಿಕೊಂಡಿದ್ದ    ಆ      ದೊಡ್ಡ ಗೂಬೆ  ಇತ್ತೀಚೆಗೆ   ವಿಜ್ಞಾನಿಗಳ ಕ್ಯಾಮರಾ ಕಣ್ಣಿಗೆ ಬಿದ್ದಿದೆ.   ಇದರರ್ಥ   ಆ  ಪಕ್ಷಿ ಕೊನೆಯದಾಗಿ  1872 ರಲ್ಲಿ  ಕಾಣಿಸಿಕೊಂಡಿತ್ತು   ನಂತರ    ಈಗ   ಕಾಣಿಸಿಕೊಂಡಿದೆ.   ಶೆಲ್ಲಿ ಈಗಲ್  ಜಾತಿಗೆ   ಸೇರಿದ    ಈ  ಅಪರೂಪದ  ಗೂಬೆ  ಪಶ್ಚಿಮ ಆಫ್ರಿಕಾದಲ್ಲಿ  ಕಂಡು  ಬರುತ್ತವೆ.  ಇವು   ಪ್ರಪಂಚದಲ್ಲಿರುವ   ಗೂಬೆಗಳಿಗಿಂತ      ಆಕಾರದಲ್ಲಿ  ದೊಡ್ಡದಾಗಿದೆ.    ಇವು  ಮನುಷ್ಯರ  ಕಣ್ಣಿಗೆ  ಕಾಣಿಸಿಕೊಂಡು  ಸುಮಾರು 100 ವರ್ಷಗಳು   ದಾಟಿದ ನಂತರ ಅವು ಕಣ್ಮರೆಯಾಗಿವೆ ಎಂದು ಭಾವಿಸಲಾಗಿತ್ತು.  ಆದರೆ   ಅಕ್ಟೋಬರ್ 16 ರಂದು, ಲಂಡನ್‌ನ   ಇಂಪೀರಿಯಲ್ ಕಾಲೇಜ್  ಜೀವ ವಿಜ್ಞಾನ ವಿಭಾಗದ ಡಾ. ಜೋಸೆಫ್ ಟೋಬಿಯಾಸ್,  ಸೋಮರ್‌ಸೆಟ್‌ನ ಪರಿಸರಶಾಸ್ತ್ರಜ್ಞ ಡಾ. ರಾಬರ್ಟ್ ವಿಲಿಯಮ್ಸ್    ಈ  ಪಕ್ಷಿಯನ್ನು ಘಾನಾದ ಅಟಾವಾ ಅರಣ್ಯದಲ್ಲಿ ಗುರುತಿಸಿದ್ದಾರೆ.

ತಡ  ಮಾಡದೆ  ತಕ್ಷಣವೇ  ತಮ್ಮ  ಕ್ಯಾಮರಾದಲ್ಲಿ     ಅದನ್ನು ಸೆರೆಹಿಡಿದಿದ್ದಾರೆ.  ಆದರೆ, ಅವರಿಬ್ಬರೂ   ಕೇವಲ   15 ಸೆಕೆಂಡುಗಳ ಕಾಲ ಮಾತ್ರ ಪಕ್ಷಿಯನ್ನು ನೋಡಲು ಸಾಧ್ಯವಾಗಿದೆ.      ಆ  ಪಕ್ಷಿಗೆ  ವಿಶಿಷ್ಟವಾದ  ಕಪ್ಪು ಕಣ್ಣುಗಳು,   ಹಳದಿ ಬಿಲ್ಲು ಆಕಾರದಲ್ಲಿ  ದೊಡ್ಡದಾಗಿದೆ.  ಈ ಅಪರೂಪದ ಪಕ್ಷಿಗಾಗಿ ಪಶ್ಚಿಮ ತಗ್ಗು ಪ್ರದೇಶಗಳಲ್ಲಿ     ವರ್ಷಗಳಿಂದ   ಹುಡುಕುತ್ತಿದ್ದಾರೆ.  ಇತ್ತೀಚೆಗಷ್ಟೇ  ಪೂರ್ವ ಭಾಗದ  ಪರ್ವತ ಶ್ರೇಣಿಯ  ಕಾಡುಗಳಲ್ಲಿ  ಇದು    ಕಂಡು ಬಂದಿರುವುದು ತಮಗೆ ಅಚ್ಚರಿ  ಮೂಡಿಸಿದೆ  ಎಂದು  ಅವರು  ಹೇಳಿದ್ದಾರೆ.

ಸುದ್ದಿ ಓದಿ