ಚೀತಾ ಕರೆತರಲು ನಮೀಬಿಯಾ ತಲುಪಿದ ವಿಮಾನ
ವಿಂಡ್‌ಹೋಕ್ (ನಮೀಬಿಯಾ): ಸೆಪ್ಟೆಂಬರ್ 16: ಮಧ್ಯಪ್ರದೇಶದ ಭಾರತದ ಕುನೊ ರಾಷ್ಟ್ರೀಯ ಉದ್ಯಾನವನಕ್ಕೆ ಎಂಟು ಚೀತಾಗಳನ್ನು ತರಲು ವಿಶೇಷವಾಗಿ ವಿನ್ಯಾಸ ಮಾಡಿದ B747 ಜಂಬೋ ಜೆಟ್ ನಮೀಬಿಯಾ ರಾಜಧಾನಿ ತಲುಪಿದೆ.
ಭಾರತದಲ್ಲಿ 1950 ರ ದಶಕದಲ್ಲಿ ಕಾಡು ಬೆಕ್ಕುಗಳ ಪ್ರಬೇಧಕ್ಕೆ ಸೇರಿದ ಚೀತಾ ಕಣ್ಮರೆಯಾದ ನಂತರ ಅವುಗಳನ್ನು ಮತ್ತೆ ಭಾರತದ ಕಾಡಿಗಳಿಗೆ ಕರೆ ತರುವ ಯೋಜನೆ ಅಂಗವಾಗಿ ವಿಮಾನ ನಮೀಬಿಯಾ ತಲುಪಿದೆ. “ಹುಲಿಯ ನಾಡಿಗೆ ಸದ್ಭಾವನಾ ರಾಯಭಾರಿಗಳನ್ನು ಕೊಂಡೊಯ್ಯಲು ವಿಶೇಷ ಹಕ್ಕಿಯೊಂದು ಬ್ರೇವ್‌ನ ಭೂಮಿಯನ್ನು ಮುಟ್ಟಿದೆ” ಎಂದು ವಿಂಡ್‌ಹೋಕ್‌ನಲ್ಲಿರುವ ಭಾರತದ ಹೈಕಮಿಷನ್ ಕಚೇರಿ ಬುಧವಾರ ಟ್ವೀಟ್ ಮಾಡಿದೆ.
ಐದು ಹೆಣ್ಣು ಮತ್ತು ಮೂರು ಗಂಡು ಚೀತಾಗಳನ್ನು ರಾಜಸ್ಥಾನದ ಜೈಪುರಕ್ಕೆ ಸೆಪ್ಟೆಂಬರ್ 17 ರಂದು ಸರಕು ವಿಮಾನದಲ್ಲಿ ಇಂಟರ್-ಕಾಂಟಿನೆಂಟಲ್ ಟ್ರಾನ್ಸ್‌ಲೊಕೇಶನ್ ಯೋಜನೆಯ ಭಾಗವಾಗಿ ತರಲಾಗುತ್ತದೆ.
ನಂತರ ಅವುಗಳನ್ನು ಜೈಪುರದಿಂದ ಮಧ್ಯಪ್ರದೇಶದ ಶಿಯೋಪುರ್ ಜಿಲ್ಲೆಯ ಕುನೋ ರಾಷ್ಟ್ರೀಯ ಉದ್ಯಾನವನಕ್ಕೆ – ಹೆಲಿಕಾಪ್ಟರ್‌ಗಳಲ್ಲಿ ಕರೆ ತರಲಾಗುತ್ತದೆ.
ಪ್ರಧಾನಿ ನರೇಂದ್ರ ಮೋದಿ ಅವರು ಸೆಪ್ಟೆಂಬರ್ 17 ರಂದು ತಮ್ಮ ಜನ್ಮದಿನದಂದು ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನಕ್ಕೆ ಈ ಚೀತಾಗಳನ್ನು ಬಿಡಲಿದ್ದಾರೆ.
ಚೀತಾಗಳನ್ನು ಭಾರತಕ್ಕೆ ಕರೆತರುವ ವಿಮಾನವು ಮುಖ್ಯ ಕ್ಯಾಬಿನ್‌ನಲ್ಲಿ ಪಂಜರಗಳನ್ನು ಭದ್ರಪಡಿಸಲು ಅನುವು ಮಾಡಿಕೊಡುವಂತೆ ಮಾರ್ಪಡಿಸಲಾಗಿದೆ . ವಿಮಾನವು 16 ಗಂಟೆಗಳವರೆಗೆ ನಿರಂತರ ಹಾರುವ ಸಾಮರ್ಥ್ಯವಿರುವ ಅಲ್ಟ್ರಾ-ಲಾಂಗ್ ರೇಂಜ್ ಜೆಟ್ ಆಗಿದ್ದು, ಇಂಧನ ತುಂಬಲು ನಿಲುಗಡೆಯಿಲ್ಲದೆ ನೇರವಾಗಿ ನಮೀಬಿಯಾದಿಂದ ಭಾರತಕ್ಕೆ ಹಾರಬಲ್ಲದು, ಚೀತಾಗಳ ಯೋಗಕ್ಷೇಮದ ಬಗ್ಗೆ ಭಾರಿ ಕಾಳಜಿ ವಹಿಸಲಾಗಿದೆ.
ಚೀತಾಗಳು ತಮ್ಮ ಸಂಪೂರ್ಣ ವಾಯು ಸಾರಿಗೆ ಅವಧಿಯನ್ನು ಖಾಲಿ ಹೊಟ್ಟೆಯಲ್ಲಿ ಕಳೆಯಬೇಕಾಗುತ್ತದೆ ಎಂದು ಭಾರತೀಯ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ.
ದೀರ್ಘ ಪ್ರಯಾಣವು ಪ್ರಾಣಿಗಳಲ್ಲಿ ವಾಕರಿಕೆ ತರಹದ ಭಾವನೆಗಳನ್ನು ಉಂಟುಮಾಡುವುದರಿಂದ ಇತರ ತೊಡಕುಗಳಿಗೆ ಕಾರಣವಾಗುವುದರಿಂದ ಇಂತಹ ಮುನ್ನೆಚ್ಚರಿಕೆ ಅಗತ್ಯವಿದೆ.
ಅತಿಯಾದ ಬೇಟೆ ಮತ್ತು ಆವಾಸಸ್ಥಾನದ ನಷ್ಟದಿಂದ ಚೀತಾಗು ಭಾರತದಿಂದ ಸಂಪೂರ್ಣವಾಗಿ ನಾಶವಾದವು. 1952 ರಲ್ಲಿ ದೇಶದಲ್ಲಿ ಚಿರತೆ ಅಳಿವಿನಂಚಿನಲ್ಲಿದೆ ಎಂದು ಸರ್ಕಾರ ಘೋಷಿಸಿತು.
ಛತ್ತೀಸ್‌ಗಢದ ಕೊರಿಯಾ ಜಿಲ್ಲೆಯ ಸಾಲ್ ಅರಣ್ಯದಲ್ಲಿ 1948 ರಲ್ಲಿ ಕೊನೆಯದಾಗಿ ಮಚ್ಚೆಗಳುಳ್ಳ ಚೀತಾಗಳು ಸಾವನ್ನಪ್ಪಿದವು.
ದೇಶದಲ್ಲಿ ಅಳಿದು ಹೋದ ವನ್ಯಪ್ರಾಣಿ ತಳಿಗಳನ್ನು ಮರುಸ್ಥಾಪಿಸಲು ಭಾರತ ಸರ್ಕಾರ ಸತತ ಪ್ರಯತ್ನಗಳನ್ನು ನಡೆಸಿದೆ. ಇದರ ಪರಿಣಾವಾಗಿ ನಮೀಬಿಯಾದೊಂದಿಗೆ ಒಪ್ಪಂದಕ್ಕೆ ಸಹಿ ಹಾಕಲು ಕಾರಣವಾಯಿತು,