ಯೂರೋಪ್ ನ 8 ದೇಶಗಳಲ್ಲಿ ಕೊರೋನಾವೈರಸ್‍ನ ಹೊಸ ರೂಪಾಂತರ ಪತ್ತೆ – ವಿಶ್ವ ಆರೋಗ್ಯ ಸಂಸ್ಥೆ
ಜುರಿಚ್, ಡಿಸೆಂಬರ್ 26: ಯೂರೋಪ್‍ನ 8 ದೇಶಗಳಲ್ಲಿ ಕೊರೋನಾ ವೈರಸ್‍ನ ಹೊಸ ರೂಪಾಂತರ ಪತ್ತೆಯಾಗಿರುವ
ಹಿನ್ನೆಲೆಯಲ್ಲಿ ರಕ್ಷಣಾತ್ಮಕ ಕ್ರಮಗಳನ್ನು ಹೆಚ್ಚಿಸಬೇಕಾಗಿದೆ
ಎಂದು ವಿಶ್ವ ಆರೋಗ್ಯ ಸಂಸ್ಥೆಯ ಯೂರೋಪ್‍ನ ಪ್ರಾದೇಶಿಕ ನಿರ್ದೇಶಕರು ಹೇಳಿದ್ದಾರೆ.
‘ಯೂರೋಪ್
ಪ್ರಾಂತ್ಯದ 8 ದೇಶಗಳಲ್ಲಿ ಇದೀಗ ಹೊಸ ಕೋವಿಡ್-19 ರೂಪಾಂತರ ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಅಸ್ತಿತ್ವದಲ್ಲಿರುವ
ರಕ್ಷಣಾತ್ಮಕ ಕ್ರಮಗಳನ್ನು ಬಲಪಡಿಸುವುದು ಬಹಳ ಮುಖ್ಯವಾಗಿದೆ. ವ್ಯಕ್ತಿಗತ ಅಂತರ, ಮುಖಗವಸು ಧರಿಸುವುದು
ಮತ್ತಿತರ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವುದು ಅತ್ಯಗತ್ಯವಾಗಿದೆ. ವಿಶ್ವ ಆರೋಗ್ಯ ಸಂಸ್ಥೆ
ಪರಿಸ್ಥಿತಿಯ ಮೇಲ್ವಿಚಾರಣೆ ನಡೆಸುತ್ತಿದ್ದು, ನವೀಕೃತ ಮಾಹಿತಿಯನ್ನು ಒದಗಿಸಲಿದೆ ಎಂದು ವಿಶ್ವ ಆರೋಗ್ಯ
ಸಂಸ್ಥೆಯ ಯೂರೋಪ್‍ನ ಪ್ರಾದೇಶಿಕ ನಿರ್ದೇಶಕ ಎಂದು ಹ್ಯಾನ್ಸ್ ಕ್ಲುಗೆ ಶುಕ್ರವಾರ ಟ್ವೀಟ್ ಮಾಡಿದ್ದಾರೆ.
ಕೊರೋನಾವೈರಸ್ ನ ರೂಪಾಂತರ ಹಿಂದಿನ ಸ್ವರೂಪಗಳಿಗಿಂತ ಭಿನ್ನವಾಗಿ ಕಿರಿಯ ವಯಸ್ಸಿನವರಲ್ಲಿ ಹರಡುತ್ತಿದೆ. ಅದರ ಪರಿಣಾಮವನ್ನು ವ್ಯಾಖ್ಯಾನಿಸಲು ಸಂಶೋಧನೆ ನಡೆಯುತ್ತಿರುವಾಗ ಜಾಗರೂಕತೆ ಮುಖ್ಯವಾಗಿದೆ ಎಂದು ಕ್ಲುಗೆ ಹೇಳಿದ್ದಾರೆ.
ಕಳೆದ
ವಾರ ಬ್ರಿಟನ್‍ನಲ್ಲಿ ಕೊರೋನಾವೈರಸ್‌ನ ಹೊಸ ರೂಪಾಂತರ ಕಂಡುಬಂದಿತ್ತು. ಈ ರೀತಿಯ ವೈರಸ್ ಇತರ ಸಾರ್ಸ್-ಕೋವಿಡ್-19
ರೂಪಾಂತರಗಳಿಗಿಂತ ಶೇ 70ರಷ್ಟು ಹೆಚ್ಚು ಸಾಂಕ್ರಾಮಿಕವಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಅನೇಕ ದೇಶಗಳು
ಹೊಸ ಪ್ರಯಾಣ ನಿರ್ಬಂಧಗಳನ್ನು ಹೇರಿವೆ.