ಅಂತರರಾಷ್ಟ್ರೀಯ

ಫ್ರಾನ್ಸ್ ಗೂ ಹೊಸ ಮಾದರಿ ಕೊರೋನ ಸೋಂಕು ಲಗ್ಗೆ ....!!

ಫ್ರಾನ್ಸ್ ಗೂ ಹೊಸ ಮಾದರಿ ಕೊರೋನ ಸೋಂಕು ಲಗ್ಗೆ ....!!

ಪ್ಯಾರಿಸ್,  ಡಿಸೆಂಬರ್ 26: ಯುನೈಟೆಡ್ ಕಿಂಗ್‌ಡಂನಲ್ಲಿ ಮೊದಲ ಬಾರಿಗೆ ಪತ್ತೆಯಾದ ಹೊಸ ಸ್ವರೂಪದ ಕರೋನ ಸೋಂಕಿನ  ನಂತರ  ಫ್ರಾನ್ಸ್ ನಲ್ಲೂ  ಮೊದಲ ಪ್ರಕರಣ ದಾಖಲಾಗಿದೆ.

ಈ ವಿಷಯವನ್ನು ಫ್ರೆಂಚ್ ಟಿವಿ ಮಾಧ್ಯಮಗಳು ಪ್ರಮುಖವಾಗಿ  ವರದಿ ಮಾಡಿವೆ. ಇತ್ತೀಚೆಗೆ ಯುನೈಟೆಡ್ ಕಿಂಗ್‌ಡಮ್‌ನಿಂದ ಮರಳಿದ ಫ್ರೆಂಚ್ ಪ್ರಜೆಯೊಬ್ಬರಿಗೆ ಸೋಂಕು ಪತ್ತೆ  ಪರೀಕ್ಷೆ ನಡೆಸಲಾಗಿದೆ  ಎಂದು ರಾಷ್ಟ್ರೀಯ ಆರೋಗ್ಯ ಸಚಿವಾಲಯವನ್ನು ಉಲ್ಲೇಖಿಸಿ ಬಿಎಫ್‌ಎಂಟಿವಿ  ಶುಕ್ರವಾರ ತಡರಾತ್ರಿ ವರದಿ ಮಾಡಿದೆ.

ಮನುಷ್ಯನಿಗೆ ರೋಗದ ಯಾವುದೇ ಲಕ್ಷಣಗಳಿಲ್ಲದಿದ್ದರೂ  ರೋಗಿ  ಮನೆಯಲ್ಲೇ ಸ್ವಯಂ-ಕ್ವಾರಂಟೈನ್ ಗೆ ಒಳಗಾಗಿದ್ದಾನೆ. ಕಳೆದ ವಾರ ಯುನೈಟೆಡ್ ಕಿಂಗ್‌ಡಂನಲ್ಲಿ ಕರೋನ ಹೊಸ ಸ್ವರೂಪದ ಪ್ರಕರಣ ಪತ್ತೆಯಾಗಿತ್ತು ಇದು ಕೋವಿಡ್ -19 ರಕ್ಕಿಂತಲೂ ಶೇಕಡ   70 ರಷ್ಟು  ವೇಗವಾಗಿ ಹರಡಲಿದೆ ಎಂದು  ಹೇಳಲಾಗಿದೆ.  ವಿಶ್ವ ಆರೋಗ್ಯ ಸಂಸ್ಥೆ ಹೊಸ ರೀತಿಯ ಕರೋನವೈರಸ್ ಅನ್ನು ಈಗಾಗಲೇ 8 ಯುರೋಪಿಯನ್ ದೇಶಗಳಲ್ಲಿ ನೋಂದಾಯಿಸಲಾಗಿರುವುದಾಗಿ  ಹೇಳಿಕೊಂಡಿದೆ.  

ಸುದ್ದಿ ಓದಿ