ಸಿಂಗಾಪುರದಲ್ಲೂ ದಾಖಲಾಯಿತು ಹೊಸ ಸ್ವರೂಪದ ಕೊರೋನ ಸೋಂಕು ಪ್ರಕರಣ
ಮಾಸ್ಕೋ,
ಡಿಸೆಂಬರ್ 24:ಯುನೈಟೆಡ್ ಕಿಂಗ್‌ಡಂನಲ್ಲಿ
ಮೊದಲ ಬಾರಿಗೆ ಪತ್ತೆಯಾದ ಹೊಸ ಸ್ವರೂಪದ ಕೊರೋನ ಸೋಂಕು
ಈಗ ಸಿಂಗಾಪುರದಲ್ಲಿ ದಾಖಲಾಗಿದೆ ಎಂದು ಮಾಧ್ಯಮ ಗುರುವಾರ
ವರದಿ ಮಾಡಿವೆ.
ಸೋಂಕಿತ
ವ್ಯಕ್ತಿ 17 ವರ್ಷದ ಮಹಿಳಾ ವಿದ್ಯಾರ್ಥಿಯಾಗಿದ್ದು, ಡಿಸೆಂಬರ್ 6 ರಂದು ಯುನೈಟೆಡ್ ಕಿಂಗ್‌ಡಂನಿಂದ
ಹಿಂದಿರುಗಿದ್ದ ಎಂದು ಸ್ಟ್ರೈಟ್ ಟೈಮ್ಸ್ ಪತ್ರಿಕೆ ವರದಿ ಮಾಡಿದೆ. ರೋಗಿಯೊಂದಿಗೆ ಸಂಪರ್ಕ ಹೊಂದಿದ್ದ
ಎಲ್ಲ ಜನರನ್ನು ಪರೋಕ್ಷೆಗೆ ಳಪಡಿಸಲಾಗಿದೆ ಎಂದೂ ವರದಿಯಾಗಿದೆ. ಬುಧವಾರದಿಂದ ಆರಂಭಗೊಂಡು, ಸಿಂಗಾಪುರದಿಂದ
ಬರುವ ಎಲ್ಲಾ ಸಂದರ್ಶಕರು ಮತ್ತು ದೀರ್ಘಾವಧಿಯ ಪಾಸ್ ಹೊಂದಿರುವವರಿಗೆ 14 ದಿನಗಳ ಕಾಲ ಪ್ರವೇಶ ನಿಷೇಧಿಸಿದೆ.
ಹೊಸ
ಸ್ವರೂಪದ ಕೊರೋನ ಸೋಂಕು ಕೋವಿಡ್ -2 ರೂಪಾಂತರಗಳಿಗಿಂತ ಶೇಕಡ 70 ಪ್ರತಿಶತ ಹೆಚ್ಚಾಗಿ ಹರಡಲಿದೆ
ಎನ್ನಲಾಗಿದೆ.