ಕ್ರೀಡೆ

ಪ್ರತಿಸ್ಪರ್ಧಿಯ ಕಿಕ್ ಗೆ ಪ್ರಾಣ ಕಳೆದುಕೊಂಡ ಕಿಕ್ ಬಾಕ್ಸರ್

ಪ್ರತಿಸ್ಪರ್ಧಿಯ ಕಿಕ್ ಗೆ ಪ್ರಾಣ ಕಳೆದುಕೊಂಡ ಕಿಕ್ ಬಾಕ್ಸರ್

ಬೆಂಗಳೂರು: ಜುಲೈ 14 : ಜುಲೈ 10 ರಂದು ನಡೆದ ಕಿಕ್ ಬಾಕ್ಸಿಂಗ್ ಕಾರ್ಯಕ್ರಮದಲ್ಲಿ ತೀವ್ರವಾಗಿ ಗಾಯಗೊಂಡು ಕೋಮಾಗೆ ಹೋಗಿದ್ದ ಮೈಸೂರಿನ ಕಿಕ್ ಬಾಕ್ಸರ್ ನವೀನ್  ಖಾಸಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ . ಈ ಸಂಬಂಧ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ಪೊಲೀಸರ ಪ್ರಕಾರ ಕೆಂಗೇರಿ ಮೂಲದ ಕೆ-1 ಕಿಕ್ ಬಾಕ್ಸರ್ ಸಂಸ್ಥೆ, ಕರ್ನಾಟಕದ ವತಿಯಿಂದ ಜುಲೈ 10 ರಂದು ನಗರದ ಜ್ಞಾನಜ್ಯೋತಿ ನಗರದ ಜಿಮ್‌ನಲ್ಲಿ ರಾಜ್ಯ ಮಟ್ಟದ ‘ಕೆ1 ಕಿಕ್ ಬಾಕ್ಸಿಂಗ್ ಚಾಂಪಿಯನ್‌ಶಿಪ್’ ಆಯೋಜಿಸಲಾಗಿತ್ತು.

ಈ ಸಂದರ್ಭದಲ್ಲಿ, ನಿಖಿಲ್ ಗೆ ಪ್ರತಿಸ್ಫರ್ಧಿ ನೀಡಿದ ಕಿಕ್ ದೊಡ್ಡ ಹೊಡೆತ ನೀಡಿತು.  ತೀವ್ರ ಅಸ್ವಸ್ಥರಾದ ಅವರು ಬಾಕ್ಸಿಂಗ್ ರಿಂಗ್ ಒಳಗೆ ಕುಸಿದು ಬಿದ್ದರು. ತಕ್ಷಣವೇ ಅವರನ್ನ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅವರು ಎರಡು ದಿನಗಳ ಕಾಲ ಕೋಮಾದಲ್ಲಿಯೇ ಇದ್ದರು. ಆದರೆ ಚಿಕಿತ್ಸೆ ಫಲಿಸದೇ ಜುಲೈ 12 ರಂದು ಸಾವನ್ನಪ್ಪಿದರು.

ಮಾಜಿ ಕಿಕ್ ಬಾಕ್ಸರ್ ಎಂದು ಹೇಳಲಾದ ನಿಖಿಲ್ ತಂದೆ ಸುರೇಶ್ ಪಿ ನೀಡಿದ ದೂರಿನ ಮೇರೆಗೆ ನವೀನ್ ರವಿಶಂಕರ್ ಮತ್ತು ಕಾರ್ಯಕ್ರಮ ಆಯೋಜಕರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.

ಸುದ್ದಿ ಓದಿ