ಅಂತರರಾಷ್ಟ್ರೀಯ

ಮೋದಿ ಎದುರು ದೇಶಭಕ್ತಿಗೀತೆ ಹಾಡಿದ ಹುಡುಗ; ವಿಡಿಯೋ ವೈರಲ್

ಮೋದಿ ಎದುರು ದೇಶಭಕ್ತಿಗೀತೆ ಹಾಡಿದ ಹುಡುಗ; ವಿಡಿಯೋ ವೈರಲ್

ಬರ್ಲಿನ್: ಮೇ 02: ಪ್ರಧಾನಿ ನರೇಂದ್ರ ಮೋದಿ ಇಂದಿನಿಂದ ಯುರೋಪ್‌ನ ಜರ್ಮನಿ, ಡೆನ್ಮಾರ್ಕ್‌ ಮತ್ತು ಫ್ರಾನ್ಸ್‌ ರಾಷ್ಟ್ರಗಳ ಪ್ರವಾಸ ಕೈಗೊಂಡಿದ್ದು, ಜರ್ಮನಿಗೆ ಆಗಮಿಸುತ್ತಿದ್ದಂತೆ ಭಾರತೀಯ ಸಮುದಾಯದಿಂದ ಅದ್ದೂರಿ ಸ್ವಾಗತ ದೊರೆತಿದೆ.

ಪ್ರಧಾನಿ ಮೋದಿ ಇಂದು ಮುಂಜಾನೆ ಜರ್ಮನಿಯ ಬರ್ಲಿನ್-ಬ್ರಾಂಡೆನ್ ಬರ್ಗ್ ವಿಮಾನ ನಿಲ್ದಾಣಕ್ಕೆ ಬಂದಿಳಿದರು. ನಂತರ ಹೊಟೇಲ್ ಅಡ್ಲಾನ್ ಕೆಂಪಿನ್ಸ್ಕಿಗೆ ತೆರಳಿದ ಪ್ರಧಾನಿ, ಅಲ್ಲಿ ಭಾರತೀಯ ಸಮುದಾಯದ ಸದಸ್ಯರೊಂದಿಗೆ “ವಂದೇ ಮಾತರಂ” ಮತ್ತು “ಭಾರತ್ ಮಾತಾ ಕಿ ಜೈ” ಘೋಷಣೆಗಳ ನಡುವೆ ಸಂವಾದ ನಡೆಸಿದರು.

ಜರ್ಮನಿಯ ಹೋಟೆಲ್‌ನಲ್ಲಿ ಪೋಷಕರೊಂದಿಗೆ ಬಂದಿದ್ದ ಮಕ್ಕಳನ್ನು ಭೇಟಿ ಮಾಡಿದ ಪ್ರಧಾನಿ ಅವರು ಅವರೊಂದಿಗೆ ಕೆಲವು ಸಮಯ ಕಳೆದಿದ್ದಾರೆ. ಮಕ್ಕಳೊಂದಿಗಿರುವ ಪ್ರಧಾನಿ ಅವರ ವಿಡಿಯೋವನ್ನು ವಿವಿಧ ಸಚಿವರು ಕೂ ನಲ್ಲಿ ಹಂಚಿಕೊಂಡಿದ್ದಾರೆ.

ವಿಡಿಯೋದಲ್ಲಿ ಆರಾಧ್ಯ ಒಂದು ಮಗು ಪ್ರಧಾನಿ ನರೇಂದ್ರ ಮೋದಿ ಅವರ ಚಿತ್ರ ಬಿಡಿಸಿ ಅವರಿಂದ ಆ ಚಿತ್ರದ ಮೇಲೆ ಸಹಿ ಪಡೆದು ಆನಂದಿಸಿದ್ದಾರೆ. ನಂತರ ಅದೇ ಹುಡುಗಿಯ ಪಕ್ಕದಲ್ಲಿದ್ದ ಹುಡುಗನೊಬ್ಬ ಹಿಂದುಸ್ತಾನದ ಕುರಿತು ಹಾಡು ಹೇಳಿದ್ದು, ಪ್ರಧಾನಿ ಅದಕ್ಕೆ ತಾಳ ಹಾಕಿರುವ ವಿಡಿಯೋ ಹೋಗು ಮೋದಿ ಅವರ ಭಾವಚಿತ್ರ ಬಿಡಿಸಿರುವ ಹುಡುಗಿಯೊಬ್ಬಳಿಗೆ ಆಟೋಗ್ರಾಫ್ ನೀಡುತ್ತಿರುವ ವಿಡಿಯೋಗಳು ಈಗ ಎಲ್ಲೆಡೆ ವೈರಲ್ ಆಗುತ್ತಿದೆ.

ಜರ್ಮನಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಮುಂದೆ ಭಾರತೀಯ ಯುವಕನೊಬ್ಬ ದೇಶಭಕ್ತಿಯ ಹಾಡನ್ನು ಹಾಡಿದ್ದಾನೆ ಎಂದು ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ಕೂ ಮಾಡಿದ್ದಾರೆ.

ಸುದ್ದಿ ಓದಿ