ಅಂತರರಾಷ್ಟ್ರೀಯ

ಪ್ರವಾದಿ ಬಗ್ಗೆ ವ್ಯಂಗ್ಯ ರೇಖಾಚಿತ್ರ ರಚಿಸಿದ್ದ ಸ್ವೀಡನ್‌ ಕಲಾವಿದ ಅಪಘಾತದಲ್ಲಿ ಸಾವು

ಪ್ರವಾದಿ ಬಗ್ಗೆ   ವ್ಯಂಗ್ಯ  ರೇಖಾಚಿತ್ರ ರಚಿಸಿದ್ದ  ಸ್ವೀಡನ್‌  ಕಲಾವಿದ  ಅಪಘಾತದಲ್ಲಿ ಸಾವು

ಸ್ಟಾಕ್‌ ಹೋಂ, ಅ 4:  ಪ್ರವಾದಿ   ಮಹಮದ್‌     ಅವರ   ವ್ಯಂಗ್ಯ    ರೇಖಾ  ಚಿತ್ರ   ರಚಿಸುವ ಮೂಲಕ  ಕುಖ್ಯಾತಿ ಗಳಿಸಿದ್ದ  ಸ್ವಿಡೀಶ್‌   ವ್ಯಂಗ್ಯಚಿತ್ರಕಾರ    ಲಾರ್ಸ್ ವಿಲ್ಕ್ಸ್,   ರಸ್ತೆ  ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ ಎಂದು   ಸ್ವೀಡನ್‌  ಮಾಧ್ಯಮಗಳನ್ನು   ಆಧರಿಸಿ  ವಾಷಿಂಗ್ಟನ್ ಟೈಮ್ಸ್ ವರದಿ ಮಾಡಿದೆ.

75 ವರ್ಷದ ವಿಲ್ಕ್ಸ್   ಪೊಲೀಸ್ ರಕ್ಷಣೆಯೊಂದಿಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ, ದಕ್ಷಿಣ ಸ್ವೀಡನ್‌ನ ಮಾರ್ಕರಿಡ್ ಪಟ್ಟಣದ ಬಳಿ ಭಾನುವಾರ ಅಪಘಾತ ಸಂಭವಿಸಿದೆ.    ಲಾರ್ಸ್‌  ಲಾರ್ಸ್ ವಿಲ್ಕ್ಸ್  ಮೃತ ಪಟ್ಟಿರುವುದನ್ನು  ಅವರ ಸಂಗಾತಿ  ದೃಢಪಡಿಸಿದ್ದಾರೆ ಎಂದು   ಸ್ಥಳೀಯ      ದೈನಿಕ   ಹೇಳಿದೆ.

ಅಪಘಾತದ ಬಗ್ಗೆ  ಸ್ವೀಡಿಷ್ ಪೊಲೀಸರು   ವರದಿ ಮಾಡಿದ್ದು, ಆದರೆ,  ಯಾವುದೇ ಹೆಸರನ್ನು  ಬಿಡುಗಡೆಮಾಡಿಲ್ಲ.

"ಭಾನುವಾರ ಮಧ್ಯಾಹ್ನ, ಮಾರ್ಕರಿಡ್‌  ಹೊರವಲಯದ  ಇ- 4ರಲ್ಲಿ   ಅಪಘಾತ ಸಂಭವಿಸಿದೆ, ಸಿವಿಲ್‌  ಪೊಲೀಸ್  ಕಾರು  ಹಾಗೂ  ಟ್ರಕ್   ನಡುವೆ  ಮುಖಾಮುಖಿ  ಡಿಕ್ಕಿ  ಸಂಭವಿಸಿ ಅಪಘಾತ  ನಡೆದಿದೆ.     ಕಾರಿನಲ್ಲಿ  ಪ್ರಯಾಣಿಸುತ್ತಿದ್ದ  ಲಾರ್ಸ್ ವಿಲ್ಕ್ಸ್,  ಅವರ   ಇಬ್ಬರು ಪೊಲೀಸ್ ಅಧಿಕಾರಿಗಳು  ಸೇರಿ  ಮೂವರೂ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಅಪಘಾತ ಹೇಗೆ ಸಂಭವಿಸಿದೆ ಎಂಬುದು   ಸ್ಪಷ್ಟವಾಗಿಲ್ಲ,  ತನಿಖೆ ಆರಂಭಿಸಲಾಗಿದೆ ಎಂದು  ಪೊಲೀಸರು ಹೇಳಿದ್ದಾರೆ. 

2007 ರಲ್ಲಿ ಪ್ರವಾದಿ ಮುಹಮ್ಮದ್ ಅವರ  ವ್ಯಂಗ್ಯ  ರೇಖಾ ಚಿತ್ರ   ರಚನೆಯ  ನಂತರ    ವಿಲ್ಕ್ಸ್ ಪೊಲೀಸ್ ರಕ್ಷಣೆಯಲ್ಲಿ ವಾಸಿಸುತ್ತಿದ್ದರು,  ವ್ಯಂಗ್ಯ  ಚಿತ್ರ  ಅನೇಕ ಮುಸ್ಲಿಮರ  ಭಾವನೆಗಳಿಗೆ   ನೋವುಂಟುಮಾಡಿತ್ತು.

ಸುದ್ದಿ ಓದಿ