ಅಂತರರಾಷ್ಟ್ರೀಯ

ಇಥಿಯೋಪಿಯಾದಲ್ಲಿ ಬಂದೂಕುಧಾರಿಗಳ ಗುಂಡಿಗೆ 90 ಜನ ಬಲಿ

ಇಥಿಯೋಪಿಯಾದಲ್ಲಿ ಬಂದೂಕುಧಾರಿಗಳ ಗುಂಡಿಗೆ  90 ಜನ ಬಲಿ

ಅಡಿಸ್ ಅಬಾಬಾ, ಡಿಸೆಂಬರ್ 24: ಇಥಿಯೋಪಿಯಾದ ಪಶ್ಚಿಮ ಬೆನಿಶಾಂಗುಲ್-ಗುಮುಜ್ ಪ್ರಾದೇಶಿಕ ರಾಜ್ಯದಲ್ಲಿ ಅಪರಿಚಿತ ಬಂದೂಕುಧಾರಿಗಳು  ಮನ ಬಂದಂತೆ ಗುಂಡಿನ ದಾಳಿ ನಡೆಸಿ  90 ಕ್ಕೂ ಹೆಚ್ಚು ನಾಗರಿಕರನ್ನು ಭೀಕರವಾಗಿ ಕೊಂದಿದ್ದಾರೆ.

ಈ ಘಟನೆ ಬುಧವಾರ ಮುಂಜಾನೆ ಬೆಕುಜಿ ಕೆಬೆಲ್ಲೆ, ಬುಲೆನ್ ವೆರೆಡಾ ಮತ್ತು ಮೆಟೆಕೆಲ್ ವಲಯದಲ್ಲಿ ಸಂಭವಿಸಿದೆ. ದಾಳಿಕೋರರು ನಿದ್ರೆಯಲ್ಲಿದ್ದ ನಿವಾಸಿಗಳ ಮೇಲೆ ಮನ ಬಂದಂತೆ ಗುಂಡಿನ  ದಾಳಿ   ನಡೆಸಿದ್ದಾರೆ .

"ಜನರನ್ನು  ಕೊಂದು ಅವರ ಮನೆಗಳನ್ನು ಸಹ ಸುಟ್ಟುಹಾಕಲಾಗಿದೆ ಎಂದು ನ್ಯಾಷನಲ್ ಆಡಿಸ್ ಸ್ಟ್ಯಾಂಡರ್ಡ್ ಸುದ್ದಿ ನಿಯತಕಾಲಿಕವು ಪ್ರತ್ಯಕ್ಷದರ್ಶಿಯೊಬ್ಬರನ್ನು ಉಲ್ಲೇಖಿಸಿದೆ. ವರದಿ ಮಾಡಿದೆ . ಭದ್ರತಾ ಪಡೆಗಳ ಮೇಲೂ ದಾಳಿ ನಡೆಸಲಾಗಿದೆ ಎನ್ನಲಾಗಿದೆ ಆದರೆ ದಾಳಿ ಕೋರರು ಬಂದು ಹೋದ ಮೇಲೆ ಭದ್ರತಾಪಡೆಗಳು ಸ್ಥಳಕ್ಕೆ ಆಗಮಿಸಿದವು  ಎನ್ನಲಾಗಿದೆ. 

ಬಹು ಜನಾಂಗೀಯ ಗುಂಪುಗಳು ಅಲ್ಲಿ ವಾಸಿಸುತ್ತಿದ್ದರೂ  ಅಮ್ಹರಾ ಸಮುದಾಯವನ್ನು  ಗುರಿಯಾಗಿಸಿಕೊಂಡು ದಾಳಿ ಮಾಡಲಾಗಿದೆ  ಎಂದು ವರದಿಯಾಗಿದೆ. ರಾಜ್ಯ-ಇಥಿಯೋಪಿಯನ್ ಮಾನವ ಹಕ್ಕುಗಳ ಆಯೋಗವು ಒಂದು ಹೇಳಿಕೆಯಲ್ಲಿ ದಾಳಿ ದೃಡಪಡಿಸಿದ್ದು  ಈ ಘಟನೆಯ ಬಗ್ಗೆ ತನಿಖೆ ನಡೆಸಬೇಕೆಂದು  ಒತ್ತಾಯಿಸಿದೆ.

ಮಂಗಳವಾರ, ದೇಶದ ಪ್ರಧಾನಿ ಅಬಿ ಅಹ್ಮದ್ ಸ್ಥಳೀಯ ಸಮುದಾಯದೊಂದಿಗೆ ಮಾತುಕತೆ ನಡೆಸಿ, ಈ ಪ್ರದೇಶದಲ್ಲಿನ ಭದ್ರತಾ ಬಿಕ್ಕಟ್ಟನ್ನು ಪರಿಹರಿಸಲು ಫೆಡರಲ್ ಸರ್ಕಾರ ಕಾರ್ಯನಿರ್ವಹಿಸುತ್ತಿದೆ. ಕಳೆದ . ನವೆಂಬರ್ 14 ರಂದು ಬಂದೂಕುಧಾರಿಗಳು ಬಸ್ ಪ್ರಯಾಣಿಕರನ್ನು  ಗುರಿಯಾಗಿಸಿಕೊಂಡು 34 ಜನರನ್ನು ಕೊಂದು ಹಾಕಲಾಗಿತ್ತು. 

ಸುದ್ದಿ ಓದಿ