ಯೂನಿಸ್ ಚಂಡಮಾರುತದ ಅಬ್ಬರಕ್ಕೆ 9 ಮಂದಿ ಬಲಿ
ವ್ಯಾಟಿಕನ್: ಫೆಬ್ರವರಿ 19: ಅಟ್ಲಾಂಟಿಕ್ ಚಂಡಮಾರುತದಿಂದ ವಾಯುವ್ಯ ಯೂರೋಪ್‌ನಲ್ಲಿ ಅಲ್ಲೋಲ್ಲ ಕಲ್ಲೋಲವಾಗಿದ್ದು, ಚಂಡಮಾರುತದ ಹೊಡೆತಕ್ಕೆ ೯ ಮಂದಿ ಜೀವ ಕಳೆದುಕೊಂಡಿದ್ದಾರೆ.
ಲಂಡನ್‌ನಲ್ಲಿ ಮಹಿಳೆ (30), ಹ್ಯಾಂಪ್ ಶೈರ್ ಯುವಕ (20) ಮತ್ತು ಮರ್ಸಿಸೈಡ್ ನಲ್ಲಿ ಓರ್ವ ವ್ಯಕ್ತಿ (50) ಯುರೋಪ್‌ನಲ್ಲಿ ಬೇರೆಡೆ ಐದು ಜನರು ಸಾವನ್ನಪ್ಪಿರುವ ಬಗ್ಗೆ ವರದಿಯಾಗಿದೆ.
ಯೂನಿಸ್ ಎಂಬ ಚಂಡಮಾರುತ ಬೀಸಿದ ಹೊಡೆತಕ್ಕೆ ಮರಗಳು ಉರುಳಿವೆ, ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಕೆಲವು ಕಟ್ಟಡಗಳ ಮೇಲ್ಛಾವಣಿ ಹಾರಿ ಹೋಗಿದೆ. ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ವಿಮಾನ ಸೇವೆ ರದ್ದುಗೊಳಿಸಲಾಗಿದೆ. ಇನ್ನು ಐಲ್ ಆಫ್ ವೈಟ್‌ನಲ್ಲಿ 122mph ಗಾಳಿಯು ಇಂಗ್ಲೆಂಡ್‌ನಲ್ಲಿ ತಾತ್ಕಾಲಿಕ ದಾಖಲೆ ಸೃಷ್ಟಿಸಿದೆ. ಇದು 1979 ರಲ್ಲಿ ಕಾರ್ನ್ ವಾಲ್‌ನಲ್ಲಿರುವ ಗ್ವೆನಾಪ್ ಹೆಡ್‌ನಲ್ಲಿ 118mph ಹಿಂದಿನ ದಾಖಲೆಯನ್ನು ಮುರಿದಿದೆ.
ಮುಂಜಾನೆ ಹವಾಮಾನ ಇಲಾಖೆಯು ಆಗ್ನೇಯ ಇಂಗ್ಲೆಂಡ್ ಜೊತೆಗೆ ನೈಋತ್ಯ ಇಂಗ್ಲೆಂಡ್ ಮತ್ತು ದಕ್ಷಿಣ ವೇಲ್ಸ್‌ನ ಕರಾವಳಿ ಪ್ರದೇಶಗಳಲ್ಲಿ ಜೀವಕ್ಕೆ ಅಪಾಯವಿರುವುದನ್ನು ಸೂಚಿಸುವ ಮೂಲಕ ರೆಡ್ ಅಲರ್ಟ್ ಘೋಷಿಸಲಾಗಿದೆ. ಸ್ಕಾಟ್‌ಲ್ಯಾಂಡ್, ಉತ್ತರ ಐರ್ಲೆಂಡ್ ಮತ್ತು ಉತ್ತರ ಇಂಗ್ಲೆಂಡ್‌ನ ಕೆಲವು ಭಾಗಗಳಲ್ಲಿ ಕಡಿಮೆ-ಗಂಭೀರ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.