ಅಂತರರಾಷ್ಟ್ರೀಯ

ಅಫ್ಘಾನಿಸ್ತಾನದಲ್ಲಿ ಸೇನಾ ಘರ್ಷಣೆ: 9 ತಾಲಿಬಾನ್ ಉಗ್ರರು ಹತ

ಅಫ್ಘಾನಿಸ್ತಾನದಲ್ಲಿ ಸೇನಾ  ಘರ್ಷಣೆ: 9 ತಾಲಿಬಾನ್ ಉಗ್ರರು ಹತ

ಕಾಬೂಲ್, ನವೆಂಬರ್ 9: ಅಫ್ಘಾನಿಸ್ತಾನದ ಉತ್ತರ ಬಾಲ್ಕ್ ಪ್ರಾಂತ್ಯದಲ್ಲಿ ಸಂಭವಿಸಿದ ಮಿಲಿಟರಿ   ಘರ್ಷಣೆಯಲ್ಲಿ 9  ತಾಲಿಬಾನ್ ಉಗ್ರರು ಹತರಾಗಿದ್ದಾರೆ ಎಂದು ರಾಷ್ಟ್ರೀಯ ಸೇನೆ ಸೋಮವಾರ ವರದಿ ಮಾಡಿದೆ.

 

ವರದಿಗಳ ಪ್ರಕಾರ   ಜಾರಿ ಜಿಲ್ಲೆಯಲ್ಲಿ ಗುಂಡಿನ  ಚಕಮಕಿ ನಡೆದಿದ್ದು, ಭದ್ರತಾ ಸಿಬ್ಬಂದಿಯ ಕಡೆ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು  ಹೇಳಲಾಗಿದೆ.

ತಾಲಿಬಾನ್ ಈ ಘಟನೆಯ ಬಗ್ಗೆ ಇನ್ನಷ್ಟೆ  ಪ್ರತಿಕ್ರಿಯೆ ನೀಡಬೇಕಿದೆ. ಸೆಪ್ಟೆಂಬರ್ ಅಂತ್ಯದಲ್ಲಿ ಕತಾರ್ನಲ್ಲಿ ಕಾಬೂಲ್-ತಾಲಿಬಾನ್ ಮಾತುಕತೆ ಪ್ರಾರಂಭವಾದಾಗಿನಿಂದ ಅಫ್ಘಾನಿಸ್ತಾನವು ಹಿಂಸಾಚಾರದ ಉಲ್ಬಣಕ್ಕೆ ಸಾಕ್ಷಿಯಾಗುತ್ತಿದೆ. 

ಸುದ್ದಿ ಓದಿ