ಅಂತರರಾಷ್ಟ್ರೀಯ

ರಾಷ್ಟ್ರ ರಾಜಧಾನಿಯಲ್ಲಿ ಜನವರಿಯಲ್ಲಿ 88.2 ಮಿಮೀ ಮಳೆ; ಗಾಳಿಯ ಗುಣಮಟ್ಟ ಕಳಪೆ

ರಾಷ್ಟ್ರ ರಾಜಧಾನಿಯಲ್ಲಿ ಜನವರಿಯಲ್ಲಿ 88.2 ಮಿಮೀ ಮಳೆ; ಗಾಳಿಯ ಗುಣಮಟ್ಟ ಕಳಪೆ

ನವದೆಹಲಿ: ಜನೆವರಿ 24   ರಾಷ್ಟ್ರ ರಾಜಧಾನಿಯಲ್ಲಿ ಶನಿವಾರ ರಾತ್ರಿ ಸೇರಿದಂತೆ ಜನವರಿ ತಿಂಗಳಲ್ಲಿ 88.2 ಮಿಮೀ ಮಳೆ ಸುರಿದಿದ್ದು, ಇದು 1901 ರಿಂದ ಅತಿ ಹೆಚ್ಚು ಮಳೆ ದಾಖಲೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ.

ಇದಕ್ಕೂ ಮೊದಲು, ರಾಜಧಾನಿಯಲ್ಲಿ 1989ರಲ್ಲಿ 79.7 ಮಿಮೀ ಮತ್ತು 1953ರಲ್ಲಿ 73.7 ಮಿಮೀ ಮಳೆ ದಾಖಲಾಗಿದೆ ಎಂದು ಐಎಂಡಿ ತನ್ನ ದತ್ತಾಂಶದಲ್ಲಿ ವಿವರಿಸಿದೆ.

ನಗರಕ್ಕೆ ಪ್ರಾತಿನಿಧಿಕ ದತ್ತಾಂಶವನ್ನು ಒದಗಿಸುವ ಸಫ್ದರ್ ಜಂಗ್ ವೀಕ್ಷಣಾಲಯವು ಈ ತಿಂಗಳಿನಲ್ಲಿ ಇದುವರೆಗೆ ಆರು ದಿನಗಳ ಕಾಲ ಮಳೆ ಸುರಿದಿದ್ದು, ಮತ್ತು 88.2 ಮಿಮೀ ಮಳೆಯಾಗಿದೆ. ಶನಿವಾರ ರಾತ್ರಿಯಿಂದ ಭಾನುವಾರ ಬೆಳಗ್ಗೆ 8.30ರವರೆಗೆ ಒಟ್ಟು 24 ಗಂಟೆಗಳಲ್ಲಿ 19.7 ಮಿ.ಮೀ ಮಳೆಯಾಗಿದೆ ಎಂದು ಹೇಳಿದೆ.

IMD ಯ ವೆಬ್‌ಸೈಟ್‌ನಲ್ಲಿ ಪಾಲಂ ವೀಕ್ಷಣಾಲಯವು ಈ ತಿಂಗಳು ದಾಖಲೆಯ 110 ಮಿಮೀ ಮಳೆಯಾಗಿದೆ ಎಂಬ ಮಾಹಿತಿ ಲಭ್ಯವಿದೆ. ಭಾನುವಾರ, ರಾಷ್ಟ್ರ ರಾಜಧಾನಿಯಲ್ಲಿ ಕನಿಷ್ಠ ತಾಪಮಾನ 10.5 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ, ಸಾಮಾನ್ಯಕ್ಕಿಂತ ಮೂರುಪಟ್ಟು ಹೆಚ್ಚಿದ್ದರೆ, ಗರಿಷ್ಠ ತಾಪಮಾನವು 14.9 ಡಿಗ್ರಿ ಸೆಲ್ಸಿಯಸ್, ಸಾಮಾನ್ಯಕ್ಕಿಂತ ಆರರಷ್ಟು ಕಡಿಮೆ. ಐಎಂಡಿ ಪ್ರಕಾರ, ಸಂಜೆ 5.30 ಕ್ಕೆ ದಾಖಲಾದ ಸಾಪೇಕ್ಷ ಆರ್ದ್ರತೆಯು ಶೇಕಡಾ 84 ರಷ್ಟಿತ್ತು.

ಗಾಳಿಯ ಗುಣಮಟ್ಟ:
ದೆಹಲಿಯ ಗಾಳಿಯ ಗುಣಮಟ್ಟವು ಪುನಃ “ಕಳಪೆ” ವಿಭಾಗಕ್ಕೆ ಬಂದು ನಿಂತಿದೆ ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ಅಂಕಿಅಂಶಗಳು ತೋರಿಸಿವೆ.

ದೆಹಲಿ, ಫರಿದಾಬಾದ್ (115) ಮತ್ತು ಗುರ್ಗಾಂವ್ (172), ಫರಿದಾಬಾದ್ (115), ಗಾಜಿಯಾಬಾದ್ (165), ಗ್ರೇಟರ್ ನೋಯ್ಡಾ (140) ಮತ್ತು ನೋಯ್ಡಾ (148) ನಲ್ಲಿ ಸಂಜೆ 7.05 ಕ್ಕೆ ವಾಯು ಗುಣಮಟ್ಟ ಸೂಚ್ಯಂಕ (ಎಕ್ಯೂಐ) 201 ನಲ್ಲಿ ದಾಖಲಾಗಿದೆ.

ಶೂನ್ಯ ಮತ್ತು 50 ರ ನಡುವಿನ AQI ಅನ್ನು “ಉತ್ತಮ”, 51 ಮತ್ತು 100 “ತೃಪ್ತಿಕರ”, 101 ಮತ್ತು 200 “ಮಧ್ಯಮ”, 201 ಮತ್ತು 300 “ಕಳಪೆ”, 301 ಮತ್ತು 400 “ಅತ್ಯಂತ ಕಳಪೆ” ಮತ್ತು 401 ಮತ್ತು 500 “ತೀವ್ರ” ಎಂದು ಪರಿಗಣಿಸಲಾಗುತ್ತದೆ.

ಸುದ್ದಿ ಓದಿ