ಮಾರಕಾಸ್ತ್ರದೊಂದಿಗೆ ಮನೆಗೆ ನುಗ್ಗಿ ನಗದು ಸೇರಿ 30 ಲಕ್ಷದ ಚಿನ್ನಾಭರಣ ಕದ್ದು, ಬೈಕ್ ಸವಾರನ ಅಪಹರಿಸಿ ನಗದು, ಚಿನ್ನ ದೋಚಿದ್ದ 8 ಖದೀಮರ ಬಂಧನ

ಮಾರಕಾಸ್ತ್ರದೊಂದಿಗೆ ಮನೆಗೆ ನುಗ್ಗಿ ನಗದು ಸೇರಿ 30 ಲಕ್ಷದ ಚಿನ್ನಾಭರಣ ಕದ್ದು, ಬೈಕ್ ಸವಾರನ ಅಪಹರಿಸಿ ನಗದು, ಚಿನ್ನ ದೋಚಿದ್ದ 8 ಖದೀಮರ ಬಂಧನ

ಬೆಳಗಾವಿ : ಜಿಲ್ಲೆಯ ರಾಮದುರ್ಗ ತಾಲೂಕಿನ ಮನೆ ಒಂದಕ್ಕೆ ನುಗ್ಗಿ ದರೋಡೆ ಮಾಡಿ ಲಕ್ಷಾಂತರ ನಗದು ಹಾಗೂ ಚಿನ್ನ‌ ಕದ್ದಿದ್ದ ಹಾಗೂ ಬೈಕ್ ಸವಾರನ ತಡೆದು ಆತನನ್ನು ಅಪಹರಣ ಮಾಡಿ ಆತನ ಬಳಿ ಇದ್ದ ನಗದು ಹಾಗೂ ಚಿನ್ನ ದೋಚಿ ಫರಾರಿಯಾಗಿದ್ದ ಇವೇರಡು ಪ್ರಕರಣದ 8 ಖದೀಮರನ್ನು ಖೇಡ್ಡಾಗೆ ಬೀಳಿಸುವಲ್ಲಿ ಜಿಲ್ಲೆಯ ಕಟಕೋಳ ಪೊಲೀಸರು ಯಶಸ್ವಿಯಾಗಿದ್ದು, ಬಂಧಿತರಿಂದ 188 ಗ್ರಾಂ ಚಿನ್ನ ಹಾಗೂ ಕೃತ್ಯಕ್ಕೆ ಬಳಿಸಿದ್ದ 4 ಕಾರು, 2 ದ್ವಿಚಕ್ರ ವಾಹನ ವಶಪಡಿಸಿಕೊಂಡಿದ್ದಾರೆ.


   ಬನ್ನೂರಿನ ಮನೆಯೊಂದಕ್ಕೆ ಮಾರಕಾಸ್ತ್ರಗಳೊಂದಿಗೆ ಮನೆಗೆ ನುಗ್ಗಿ ಮಲಗಿದ್ದವರ ಬಾಯಿಗೆ ಬಟ್ಟೆ ಕಟ್ಟಿ ಮನೆಯಲ್ಲಿ ಇದ್ದ ನಗದು ಹಣ ಸೇರಿ ಸುಮಾರು 30 ಲಕ್ಷ ಮೌಲ್ಯದ ಚಿನ್ನಾಭರಣ ಕದ್ದು ಫರಾರಿಯಾಗಿದ್ದ ಹಾಗೂ ಬೈಕ್ ಸವಾರನನ್ನು ತಡೆದು ಅಪಹರಣ ಮಾಡಿ ಆತನ ಬಳಿ ಇದ್ದ ಲಕ್ಷಾಂತರ ಮೌಲ್ಯದ  ಖದೀಮರ ತಂಡವನ್ನು ಭೇಟೆಯಾಡಿರುವ ಕಟಕೋಳ ಪೊಲೀಸರು ಬಂಧಿಸಿದ್ದು ಈ ಪ್ರಕರಣದ 8 ಆರೋಪಿತರನ್ನು ಬಲೆಗೆ ಬೀಳಿಸುವಲ್ಲಿ ಕಟಕೋಳ ಪೊಲೀಸರು ಯಶಸ್ವಿಯಾಗಿದ್ದಾರೆ.

    ರಾಮದುರ್ಗ ತಾಲ್ಲೂಕಿನ ಬನ್ನೂರು ತಾಂಡಾದ ಚಂದ್ರು ಶಂಕರ ರಜಪೂತ ಎನ್ನುವರಿಗೆ ಸೇರಿದ್ದ ಮನೆಗೆ ಅಕ್ಟೊಬರ್ 2022ರ ದಿ. 25ರಂದು ರಾತ್ರಿ 2.30 ಗಂಟೆಯಲ್ಲಿ ಸುಮಾರು 8-9 ಜನ ಖದೀಮರು ಮಾರಕಾಸ್ತ್ರಗಳ ಜೊತೆಗೆ ಮನೆಗೆ ನುಗ್ಗಿ, ಮನೆಯವರ ಬಾಯಿಗೆ ಬಟ್ಟೆ ಕಟ್ಟಿ ಹೆದರಿಸಿ, ಮನೆಯ ಟ್ರೇಜರಿಯ ಚಾವಿ ಕಸಿದುಕೊಂಡು ಲಾಕರನಲ್ಲಿದ್ದ ಒಟ್ಟು 23,69,900 ನಗದು ಹಣ ಹಾಗೂ 6,30,000 ರೂಪಾಯಿ ಮೌಲ್ಯದ 158 ಗ್ರಾಂ ಚಿನ್ನಾಭರಣಗಳನ್ನು ದೋಚಿ ಫರಾರಿಯಾಗಿದ್ದರು. ಈ ಕುರಿತು ಕಟಕೋಳ ಠಾಣೆಯಲ್ಲಿ ಕಳೆದ ದಿ. 25/10/2022 ರಂದು ಚಂದ್ರು ಶಂಕರ ರಜಪೂತ (ಸಾ. ಬನ್ನೂರ ತಾಂಡಾ) ಇವರು ಕಟಕೋಳ ಪೊಲೀಸ ಠಾಣೆಯಲ್ಲಿ ದೂರು ಒಂದನ್ನು ನೀಡಿದ್ದರು. 

   ಅದರಂತೆ ರಾಮದುರ್ಗ ಪಟ್ಟಣದ ಮುಖೇಶಕುಮಾರ ಪ್ರಭುಲಾಲಜಿ ಸ್ಟಾಲಕಾ(41), ಇವರು ದಿ. 09/02/2023ರಂದು ರಾಮದುರ್ಗ ಪೊಲೀಸ ಠಾಣೆಗೆ ದೂರ ಒಂದನ್ನು ನೀಡಿದ್ದು, ದಿ. 08/02/2023ರಂದು ದ್ವಿಚಕ್ರ ವಾಹನ ಮೇಲಿಂದ ತಮ್ಮ ಮನೆಗೆ ತೆರಳುವಾಗ ಬಂದ ಖದೀಮರ ತಂಡವು ನನ್ನ ಬೈಕ್ ಅಡ್ಡಗಟ್ಟಿ ಕಣ್ಣಲ್ಲಿ ಕಾರದ ಪುಡಿ ಎರಚಿ ಕಾರಿನಲ್ಲಿ ಅಪಹರಿಸಿಕೊಂಡು ಹೋಗಿ ಅವನಿಂದ ಒಂದು ಬಂಗಾರದ ಚೈನ್ ಹಾಗೂ ಬಂಗಾರದ ಕಡಗ ಮತ್ತು ಅವನ ಬಳಿ ಇದ್ದ1 ಲಕ್ಷ 5 ಸಾವಿರ ರೂಪಾಯಿ ಹಾಗೂ ಒಂದು ಮೋಬೈಲನ್ನು ದೋಚಿ ಫರಾರಿಯಾಗಿರುವ ಬಗ್ಗೆ ದೂರು ನೀಡಿದ್ದರು.

   ಈ ಪ್ರಕರಣದ ಕಳ್ಳತನ ಬಗ್ಗೆ ತಪಾಸಣೆಯ ಕುರಿತು ರಾಮದುರ್ಗ ಡಿ.ಎಸ್.ಪಿ ರಾಮದುರ್ಗರವರ ಮಾರ್ಗದರ್ಶನದಂತೆ ಕಾರಜೋಳ. ಸಿಪಿಐ ಆಯ್. ಆರ್ . ಪಟ್ಟಣಶೆಟ್ಟಿ ಅವರ ನೇತೃತ್ವದಲ್ಲಿ ಪಿಎಸ್ ಐ ಶಿವಾನಂದ ಕಾರಜೋಳ (ಕಾ&ಸು), ಪಿಎಸ್ ಐ ಶಿದ್ರಾಮಪ್ಪ ಉನ್ನದ ಪಿಎಸ್‍ಐ ಕಟಕೋಳ ಪೊಲೀಸ್ ಠಾಣೆ ಹಾಗೂ ಸಿಬ್ಬಂದಿಗಳಾದ ಎಲ್.ಟಿ. ಪವಾರ ಎ.ಎಸ್.ಐ ರಾಮದುರ್ಗ ವೃತ್ತ, ವಾಯ್.ಜಿ.ಕೋಟಿ, ಡಿ.ಎಚ್.ನಧಾಪ್, ಎಮ್.ಎಮ್. ಪಡಸಲಗಿ ಇವರನ್ನೊಳಗೊಂಡ ತಂಡ ರಚಿಸಿ ತಪಾಸಣಿ ಕೈಕೊಂಡಿದ್ದರು.

   ಈ ಎರಡು  ಪ್ರಕರಣದಲ್ಲಿ ಒಟ್ಟು 8 ಜನಆರೋಪಿತರನ್ನು ದಸ್ತಗೀರ ಮಾಡಲಾಗಿದ್ದು, ಬಂಧಿತರಿಂದ 188 ಗ್ರಾಂ ಚಿನ್ನಾಭರಣ ಹಾಗೂ ಕೃತ್ಯಕ್ಕೆ ಬಳಸಿದ 4 ಕಾರುಗಳು 2 ಮೋಟಾರ ಸೈಕಲ ವಶಪಡಿಸಿಕೊಂಡು ಆರೋಪಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಅಲ್ಲದೆ ಕಟಕೋಳ ಹಾಗೂ ರಾಮದುರ್ಗ ಠಾಣೆಯ ಪೊಲೀಸರ ಕಾರ್ಯವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸಂಜೀವ ಪಾಟೀಲ ಹಾಗೂ ಹೆಚ್ವುವರಿ ಎಸ್ ಪಿ ವೇಣುಗೋಪಾಲ ಅವರು ಅಭಿನಂದಿಸಿ ಶ್ಲಾಘಿಸಿದ್ದಾರೆ. 



ಸುದ್ದಿ ಓದಿ