ಅಂತರರಾಷ್ಟ್ರೀಯ

ಹೈಟಿಯಲ್ಲಿ 8 ಟರ್ಕಿಶ್ ನಾಗರಿಕರ ಅಪಹರಣ

ಹೈಟಿಯಲ್ಲಿ 8 ಟರ್ಕಿಶ್ ನಾಗರಿಕರ ಅಪಹರಣ

ಪೋರ್ಟ್-ಔ-ಪ್ರಿನ್ಸ್: ಮೇ 09: ಮಹಿಳೆಯರು ಸೇರಿದಂತೆ ಎಂಟು ಟರ್ಕಿಶ್ ನಾಗರಿಕರನ್ನು ಹೈಟಿಯಲ್ಲಿ ಅಪಹರಿಸಲಾಗಿದೆ. ಭಾನುವಾರ ಮಧ್ಯಾಹ್ನ ಕ್ರೊಯಿಕ್ಸ್-ಡೆಸ್-ಬೊಕೆಟ್ಸ್‌ನಲ್ಲಿ ಟರ್ಕಿಯ ನಾಗರಿಕರು ಡೊಮಿನಿಕನ್ ರಿಪಬ್ಲಿಕ್-ಹೈಟಿ ಮಾರ್ಗದಲ್ಲಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದಾಗ ಅಪಹರಣ ನಡೆದಿದೆ ಎಂದು ಹೈಟಿ24 ಪೋರ್ಟಲ್ ವರದಿ ಮಾಡಿದೆ.

ಪೋರ್ಟಲ್ ಪ್ರಕಾರ, ಈ ಅಪಹರಣ ಪ್ರಕರಣವನ್ನು ಐವ್ಸ್ ಮೇರಿ ಚಾನೆಲ್ ದೃಢಪಡಿಸಿದೆ. ಅಲ್ಲದೆ, ಈ ಬಗ್ಗೆ ಹೈಟಿ ಸರ್ಕಾರಕ್ಕೆ ತಿಳಿದಿದೆ ಎಂದು ಮಾಹಿತಿ ನೀಡಿದೆ.

ಕಳೆದ ತಿಂಗಳ ಕೊನೆಯಲ್ಲಿ ಡೊಮಿನಿಕನ್ ಗಣರಾಜ್ಯದ ರಾಯಭಾರ ಕಚೇರಿಯಲ್ಲಿ ಕೃಷಿ ಸಲಹೆಗಾರ ಕಾರ್ಲೋಸ್ ಗಿಲ್ಲೆನ್ ಟಾಟಿಸ್ ಅವರನ್ನು ಹೈಟಿಯ ಇದೇ ಪ್ರದೇಶದಲ್ಲಿ ಅಪಹರಣ ಮಾಡಲಾಗಿತ್ತು. ಬಳಿಕ ಅವರನ್ನು ಬಿಡುಗಡೆ ಮಾಡಲಾಯಿತು.

ಸುದ್ದಿ ಓದಿ