ಅಮೆರಿಕದಲ್ಲಿ 8 ಒಮಿಕ್ರಾನ್ ಸೋಂಕು ಪ್ರಕರಣ ದಾಖಲು
ನ್ಯೂಯಾರ್ಕ್, ಡಿ 3: ದಕ್ಷಿಣ ಆಫ್ರಿಕಾದಲ್ಲಿ ಕಾಣಿಸಿಕೊಂಡಿರುವ ಒಮಿಕ್ರಾನ್ ಹೊಸ ಕೊವಿಡ್ ಸೋಂಕು ಹೆಚ್ಚಿನ ದೇಶಗಳಿಗೆ ಹಬ್ಬುತ್ತಿದೆ.
ಅಮೆರಿಕದ ವಾಣಿಜ್ಯ ರಾಜಧಾನಿ ಎಂದೇ ಪ್ರಸಿದ್ದಿಯಾದ ನ್ಯೂಯಾರ್ಕ್ ನಗರದಲ್ಲಿ 5 ಹೊಸ ಒಮಿಕ್ರಾನ್ ಪ್ರಕರಣಗಳು ವರದಿಯಾಗಿದೆ.
ಆದರೂ ಜನತೆಗಾಗಿ ಆತಂಕ ಪಡಬೇಕಿಲ್ಲ ಬದಲಾಗಿ ಆರೋಗ್ಯ ಮಾರ್ಗಸೂಚಿಗಳನ್ನುಕಟ್ಟಿನಿಟ್ಟಾಗಿ ಪಾಲಿಸುವಂತೆ ನ್ಯೂಯಾರ್ಕ್ ಗೌರ್ನರ್ ಜನತೆಯಲ್ಲಿ ಮನವಿ ಮಾಡಿದ್ದಾರೆ.
ಒಟ್ಟಾರೆ ಅಮೆರಿಕದಲ್ಲಿ ಈವರೆಗೆ 8 ಒಮಿಕ್ರಾನ್ ಸೋಂಕು ಪ್ರಕರಣ ವರದಿಯಾಗಿದೆ ಎಂದು ಅಮೆರಿಕದ ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ. ಇದರ ಪರಿಣಾಮವಾಗಿ ಜನತೆ ಮೊದಲು ಲಸಿಕೆ ಪಡೆಯಬೇಕು, ಅಗತ್ಯವಿದ್ದವರೂ ಬೂಸ್ಟರ್ ಡೋಸ್ ಲಸಿಕೆ ಪಡೆಯಬೇಕು, ಮಾಸ್ಕ್ ಧರಿಸಬೇಕು. ಮತ್ತು ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕೆಂದು ಅಧಿಕಾರಿಗಳು ಜನತೆಗೆ ಕಿವಿಮಾತು ಹೇಳಿದ್ದಾರೆ.ಹೊಸ ಸೋಂಕಿನ ಕಾರಣ ಅಂತಾರಾಷ್ಟ್ರೀಯ ವಿಮಾನ ಪ್ರಯಾಣಿಕರ ಮೇಲೆ ಮತ್ತಷ್ಟು ನಿರ್ಬಂಧಗಳನ್ನು ಹಾಕಲು ಅಲ್ಲಿನ ಸರಕಾರ ನಿರ್ಧರಿಸಿದೆ.