ಹಠಾತ್ ಹೊಂಚುದಾಳಿ: 8 ಮಾಲಿಯನ್ ಸೈನಿಕರ ಹತ್ಯೆ
ಮಾಸ್ಕೋ, ಫೆಬ್ರವರಿ 15, ಮಾಲಿಯನ್ ಸಶಸ್ತ್ರ ಪಡೆಗಳ ಮೇಲೆ ಈಶಾನ್ಯ ಭಾಗದಲ್ಲಿ ಬಂಡುಕೋರರ ತಂಡ ನಡೆಸಿದ ಹಠಾತ್ ಸಂಚಿನ ದಾಳಿಗೆ 8 ಮಂದಿ ಸೈನಿಕರು ಹತರಾಗಿದ್ದಾರೆ ಎಂದು ರಾಷ್ಟ್ರೀಯ ಸೇನೆ ಪ್ರಕಟಣೆಯಲ್ಲಿ ತಿಳಿಸಿದೆ.ಗಾವೊ ಪ್ರದೇಶದಲ್ಲಿ ಶುಕ್ರವಾರ ನಡೆದ ಈ ಘಟನೆಯಲ್ಲಿ ಇನ್ನೂ ನಾಲ್ವರು ಸೈನಿಕರು ಗಾಯಗೊಂಡಿದ್ದಾರೆ.ಘರ್ಷಣೆಯ ಪರಿಣಾಮವಾಗಿ ಸೇನಾ ಘಟಕವು ಕೆಲವು ವಾಹನಗಳು ಮತ್ತು ಉಪಕರಣಗಳನ್ನು ಸಹ ಕಳೆದುಕೊಂಡಿದೆ ಎಂದೂ ಹೇಳಲಾಗಿದೆ. ಮತ್ತೊಂದು ಘಟನೆ ಮೊಪ್ತಿಯಲ್ಲಿ ನಡೆದಿದ್ದು, ಓರ್ವಯೋಧ ಮೃತಪಟ್ಟಿದ್ದು, ಇತರ ಮೂವರು ಗಾಯಗೊಂಡಿದ್ದಾರೆ.2012 ರಲ್ಲಿ ಟುವಾರೆಗ್ ಉಗ್ರರು ದೇಶದ ಉತ್ತರ ಭಾಗದಲ್ಲಿನ ಕೆಲ ಪ್ರದೇಶಗಳನ್ನು ವಶಪಡಿಸಿಕೊಂಡ ನಂತರ ಪರಿಸ್ಥಿತಿ ಅಸ್ಥಿರವಾಯಿತು. ಇಸ್ಲಾಮಿಸ್ಟ್ಗಳ ಚಟುವಟಿಕೆಗಳು, ಮಾಜಿ ಲಿಬಿಯಾದ ನಾಯಕ ಮುಅಮ್ಮರ್ ಗಡಾಫಿಗೆ ನಿಷ್ಠರಾಗಿರುವ ಶಕ್ತಿಗಳು ಮತ್ತು ಫ್ರೆಂಚ್ ಹಸ್ತಕ್ಷೇಪದ ಮೇಲೆ ಸಂಘರ್ಷ ಇನ್ನಷ್ಟು ಹೆಚ್ಚಾಗಿದೆ .
ಬೆಳಗಾವಿಗೆ ಮೋಹನ್ ಭಾಗವತ್ ಭೇಟಿ: 9 ದಿನ ಡ್ರೋನ್ ಹಾರಾಟಕ್ಕೆ ನಿಷೇಧ, 3 ಸ್ಥಳಗಳು ರೆಡ್ ಝೋನ್ : ಡಿಸಿ ಆದೇಶ
ಕೋಲ್ಕತ್ತಾ ಟಿಎಂಸಿ ಕಚೇರಿ ವಿವಾದದ ಮೇಲೆ ಬಂಡಾಯ ಗುಂಪಿಗೆ ಮಮತಾ ಬ್ಯಾನರ್ಜಿ ತೀವ್ರ ವಾಗ್ದಾಳಿ, “ಸಂಸ್ಥೆಗಳನ್ನು ಸ್ವಾಧೀನಪಡಿಸಿಕೊಳ್ಳಲು ಸಾಧ್ಯವಿಲ್ಲ” ಎಂದು ಹೇಳಿಕೆ
ಸಿಸಿಬಿ ಪೊಲೀಸರ ದಾಳಿ–4.96 ಲಕ್ಷ ಮೌಲ್ಯದ ಹೆರಾಯಿನ್ ವಶ, ಓರ್ವ ಬಂಧನ
ಬೆಂಗಳೂರು ಕ್ವಾರಿ ಬಂಡೆ ಕುಸಿತ: ಬಿಹಾರದ ಏಳು ಕಾರ್ಮಿಕರು ಮೃತ
11 ವರ್ಷಗಳಲ್ಲಿ ಡಿಜಿಟಲ್ ಇಂಡಿಯಾ ಆಡಳಿತವನ್ನು ಪರಿವರ್ತಿಸಿ, ನಾಗರಿಕರನ್ನು ಸಬಲಗೊಳಿಸಿದೆ: ಪ್ರಧಾನಿ ಮೋದಿ
ಮುಂಬೈನ ಚೆಂಬೂರಿನಲ್ಲಿ ಶಾಲಾ ಬಸ್ ಮೇಲೆ ಮರ ಉರುಳಿ ಬಿದ್ದು ವಿದ್ಯಾರ್ಥಿ ಸಾವು; ನಾಲ್ವರಿಗೆ ಗಾಯ 