ಸಾವನೂರ

ಟಿಎಂಎಇಎಸ್ ಪ್ರೌಢ ಶಾಲೆಯಲ್ಲಿ 79ನೇ ಸ್ವಾತಂತ್ರ್ಯೋತ್ಸವ

ಟಿಎಂಎಇಎಸ್ ಪ್ರೌಢ ಶಾಲೆಯಲ್ಲಿ  79ನೇ ಸ್ವಾತಂತ್ರ್ಯೋತ್ಸವ

ಸವಣೂರ  18: ತಾಲ್ಲೂಕಿನ ಹಿರೇ ಮುಗದೂರ ಗ್ರಾಮದಲ್ಲಿ ಟಿಎಂಎಇಎಸ್ ಪ್ರೌಢ ಶಾಲೆ ಹಾಗೂ ಸರ್ಕಾರಿ ಹಿರಿಯ ಪ್ರಾತಮಿಕ ಶಾಲೆ ಆಯೋಸಿದ 79ನೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಗಳಾಗಿ ಆಗಮಿಸಿ ಗಂಗಾಧರ ಕನವಳ್ಳಿ ಅವರು ಮಾತನಾಡಿದರು. 

79ನೇ ಸ್ವಾತಂತ್ರ್ಯ ದಿನಾಚರಣೆಯ ಮಹತ್ವದ ದಿನ ದೇಶದ ಹಿತಕ್ಕಾಗಿ ನಾವೆಲ್ಲರೂ ಶ್ರಮಿಸಬೇಕಿದೆ. ದೇಶದ ಭವಿಷ್ಯ ಶಾಲೆಗಳಲ್ಲಿ ಅಡಕವಾಗಿದೆ. ಶಿಕ್ಷಕರು  ಉತ್ತಮಗುಣಾತ್ಮಕ ಶಿಕ್ಷಣ ನೀಡಿದಾಗ ಗ್ರಾಮ ಹಾಗೂ ದೇಶ ಉತ್ತಮವಾಗಲಿ ಸಾಧ್ಯವಾಗಲಿದೆ ಎಂದರು. 

ಈ ಸಂದರ್ಭದಲ್ಲಿ ಪ್ರಾಥಮಿಕ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷರಾದ ಗಣೇಶ ಬಾರ್ಕಿ ಶಿಕ್ಷಣ ಪ್ರೇಮಿಗಳಾದ ಸುರೇಶ ಬರದೂರ, ಪರಮಯ್ಯಸ್ವಾಮಿ ಹಿರೇಮಠ, ಪರಶುರಾಮ ಆರೇರ, ಕರಬಸವ ಕಡ್ಲೆಪ್ಪನವರ, ಶಿವರಾಜ ಮೇವುಂಡಿ,ಕೊಟೆಪ್ಪ ತಳವಾರ, ಶರಣಪ್ಪ ಸೋಮಸಾಗರ, ಸೋಮಯ್ಯಎಂ, ರಮೇಶ ಆರೇರ, ರಾಕೇಶ ಹಿರೇಮಠ, ಸಂಜೀವ ಮಾಲಿ,ಚಂದ್ರು ಮೇಲ್ಮರಿ, ಉಪಾಧ್ಯಕ್ಷರಾದ ಲಕ್ಷ್ಮೀ ನಡುವಿನ ಮನಿ, ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯರಾದ ಜಿ.ಮಲ್ಲಪ್ಪ, ಫಕ್ಕಿರೇಶರಿತ್ತಿ, ಶರಣಪ್ಪಕೆ,ಗುಡ್ಡಪ್ಪಎನ್, ಕವಿತಾ ಎಸ್, ಪ್ರೌಢ ಹಾಗೂ ಪ್ರಾಥಮಿಕ ಶಾಲೆಯ ಶಿಕ್ಷಕರು, ಬಿಸಿಯೂಟ ಸಿಬ್ಬಂದಿಗಳು,ಶಿಕ್ಷಣ ಪ್ರೇಮಿಗಳು,ಉಭಯ ಶಾಲೆಗಳ ಎಸ್‌ಡಿಎಂಸಿ ಪದಾಧಿಕಾರಿಗಳು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. 


ಸುದ್ದಿ ಓದಿ