ನೈಜೀರಿಯಾ : ಹಳದಿ ಜ್ವರಕ್ಕೆ 76 ಜನರ ಸಾವು
ಲಾಗೋಸ್, 14: ನವೆಂಬರ್ ಮೊದಲ 10 ದಿನಗಳ ಅವಧಿಯಲ್ಲಿ ನೈಜೀರಿಯಾದ ಮೂರು ರಾಜ್ಯಗಳಲ್ಲಿ ಹಳದಿ ಜ್ವರ ಹರಡಿ 76 ಮಂದಿ ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯ ಆರೋಗ್ಯ ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.
ನವೆಂಬರ್ ಒಂದರಿಂದ ಹನ್ನೊಂದರ ನಡುವೆ ಡೆಲ್ಟಾ ರಾಜ್ಯದಿಂದ ಒಟ್ಟು 35 ಸಾವುಗಳು, ಎನುಗು ರಾಜ್ಯದಿಂದ 33 ಸಾವುಗಳು ಮತ್ತು ಎಂಟು ಸಾವುಗಳು ಬೌಚಿ ರಾಜ್ಯದಿಂದ ಸಂಭವಿಸಿವೆ ಎಂದು ನೈಜೀರಿಯಾ ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ನ ಮಹಾನಿರ್ದೇಶಕ ತಿಳಿಸಿದ್ದಾರೆ. ಈ ಅವಧಿಯಲ್ಲಿ ಮೂರು ರಾಜ್ಯಗಳಿಂದ ಸುಮಾರು 222 ಶಂಕಿತ ಪ್ರಕರಣಗಳು ಮತ್ತು 19 ದೃಢಪಡಿಸಿದ ಪ್ರಕರಣಗಳು ವರದಿಯಾಗಿವೆ ಎಂದು ಇಹೆಕ್ವೀಜು ಹೇಳಿದ್ದಾರೆ.
ಹಳದಿ ಜ್ವರವು ಜ್ವರ, ತಲೆನೋವು, ಆಯಾಸ, ಕಾಮಾಲೆ, ಹೊಟ್ಟೆ ನೋವು, ಎಪಿಸ್ಟಾಕ್ಸಿಸ್, ಮಲ ಅಥವಾ ಮೂತ್ರದಲ್ಲಿ ರಕ್ತ, ವಾಂತಿಯ ಲಕ್ಷಣಗಳನ್ನು ಹೊಂದಿದೆ.
ಒಂದರಿಂದ ಐವತ್ತೈದು ವರ್ಷದೊಳಗಿನ ಪುರುಷರಲ್ಲಿ ರೋಗ ಲಕ್ಷಣಗಳು ಹೆಚ್ಚಿವೆ ಎಂದು ಅವರು ಹೇಳಿದ್ದಾರೆ. ರೋಗ ನಿಗ್ರಹಕ್ಕಾಗಿ ಲಸಿಕೆ ಹಾಕುವ ಕಾರ್ಯಕ್ರಮ ನಡೆಯುತ್ತಿದೆ ಎಂದು ಆರೋಗ್ಯ ಅಧಿಕಾರಿ ತಿಳಿಸಿದ್ದಾರೆ.
ಹಳದಿ ಜ್ವರ ಹೆಚ್ಚಾಗಿ ಸೊಳ್ಳೆ ಕಡಿತದಿಂದ ಹರಡುವ ವೈರಸ್‌ನಿಂದ ಉಂಟಾಗುತ್ತದೆ. ಹಳದಿ ಜ್ವರವನ್ನು ಲಸಿಕೆಯ ಒಂದು ಡೋಸ್ ಮೂಲಕ ರೋಗವನ್ನು ತಡೆಗಟ್ಟಬಹುದು, ಇದು ಜೀವನಕ್ಕೆ ಪ್ರತಿರಕ್ಷೆಯನ್ನು ಒದಗಿಸುತ್ತದೆ.