ಇರಾನ್ ಮೇಲೆ ಐಸಿಸ್ ದಾಳಿ;7 ಪೊಲೀಸರು ಸಾವು
ಬಾಗ್ದಾದ್, ಸೆ 5 : ಇರಾಕ್‌ನ ಉತ್ತರ ಕಿರ್ಕುಕ್ ಗವರ್ನರೇಟ್‌ನಲ್ಲಿ ಇಸ್ಲಾಮಿಕ್ ಸ್ಟೇಟ್ (ಐಸಿಸ್) ಭಯೋತ್ಪಾದಕ ಗುಂಪು ನಡೆಸಿದ ದಾಳಿಯಲ್ಲಿ ಹಲವಾರು ಪೊಲೀಸ್ ಅಧಿಕಾರಿಗಳು ಸಾವನ್ನಪ್ಪಿದ್ದಾರೆ ಎಂದು ಶಫಕ್ ನ್ಯೂಸ್ ಭಾನುವಾರ ಮುಂಜಾನೆ ವರದಿ ಮಾಡಿದೆ.
ಐಎಸ್ ಉಗ್ರರು ತಾಲ್ ಅಲ್-ಸ್ಟೀಹ್ ಗ್ರಾಮದಲ್ಲಿ ಫೆಡರಲ್ ಪೊಲೀಸ್ ಪಡೆಗಳ ಮೇಲೆ ದಾಳಿ ನಡೆಸಿದ್ದಾರೆ. ಮೂಲಗಳ ಪ್ರಕಾರ ಕನಿಷ್ಠ ಏಳು ಪೊಲೀಸ್ ಅಧಿಕಾರಿಗಳು ಸಾವನ್ನಪ್ಪಿದ್ದಾರೆ ಮತ್ತು ಹಲವಾರು ಮಂದಿ ಗಾಯಗೊಂಡಿದ್ದಾರೆ. ದಾಳಿ ಇನ್ನೂ ಮುಂದುವರಿದಿದೆ.
ಕಳೆದ ತಿಂಗಳು ಇರಾಕ್ ಅಧ್ಯಕ್ಷ ಬರ್ಹಮ್ ಸಾಲಿಹ್‌ಗೆ ಅವರಿಗೆ ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಆಂಟನಿ ಬ್ಲಿಂಕನ್, ಇಸ್ಲಾಮಿಕ್ ಸ್ಟೇಟ್ ಭಯೋತ್ಪಾದಕ ಗುಂಪಿನ ವಿರುದ್ಧ ಕಾರ್ಯಾಚರಣೆ ಮುಗಿದಿಲ್ಲ, ಆದರೆ ಹೊಸ ಹಂತವನ್ನು ಪ್ರವೇಶಿಸುತ್ತಿದೆ ಎಂದು ಭರವಸೆ ನೀಡಿದ್ದರು.
ಇರಾಕ್‌ನಲ್ಲಿ ಪ್ರಸ್ತುತ 2,500 ಅಮೆರಿಕ ಸೈನಿಕರು ಇಸ್ಲಾಮಿಕ್ ಸ್ಟೇಟ್ ಭಯೋತ್ಪಾದಕ ಗುಂಪನ್ನು ಎದುರಿಸಲು ಸ್ಥಳೀಯ ಪಡೆಗಳಿಗೆ ಸಹಾಯ ಮಾಡುತ್ತಿದ್ದಾರೆ.
ಇರಾಕ್‌ನಲ್ಲಿ ಅಮೆರಿಕ ಯುದ್ಧ ಕಾರ್ಯಾಚರಣೆ ಈ ವರ್ಷದ ಅಂತ್ಯದ ವೇಳೆಗೆ ಮುಕ್ತಾಯಗೊಳ್ಳಲಿದೆ ಎಂದು ಅಧ್ಯಕ್ಷ ಜೋ ಬೈಡೆನ್ ಜುಲೈನಲ್ಲಿ ಹೇಳಿದರು. 2021ರ ಡಿಸೆಂಬರ್ 31ರ ನಂತರ, ಅಮೆರಿಕ ಸೇನೆ ತನ್ನ ಕಾರ್ಯಾಚರಣೆಯನ್ನು, ಭಯೋತ್ಪಾದಕರನ್ನು ಎದುರಿಸಲು ಇರಾಕ್ ಪಡೆಗಳಿಗೆ ತರಬೇತಿಯನ್ನಾಗಿ ಬದಲಾಯಿಸುವ ನಿರೀಕ್ಷೆಯಿದೆ.