ರಷ್ಯಾದ ಶೇ 59 ಜನರಿಗೆ ಪುಟಿನ್ ಮೇಲೆ ವಿಶ್ವಾಸ: ಸಮೀಕ್ಷೆ ವರದಿ
ಮಾಸ್ಕೋ 26, ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರ ಮೇಲೆ ದೇಶದ ಶೇ 59ರಷ್ಟು ನಾಗರಿಕರು ವಿಶ್ವಾಸ ಹೊಂದಿದ್ದಾರೆ ಎಂದು ರಷ್ಯಾದ ಸಾರ್ವಜನಿಕ ಅಭಿಪ್ರಾಯ ಪ್ರತಿಷ್ಠಾನ (ಎಫ್‌ಒಎಂ) ನಡೆಸಿದ ಸಮೀಕ್ಷೆಯಲ್ಲಿ ತಿಳಿಸಲಾಗಿದೆ.18 ವರ್ಷ ವಯಸ್ಸಿನ ಮತ್ತು ಹೆಚ್ಚಿನ ವಯಸ್ಸಿನ ಜನರನ್ನು 19-21ರವರೆಗೆ ಸಮೀಕ್ಷೆ ನಡೆಸಲಾಗಿತ್ತು. ಜನರ ಅಭಿಪ್ರಾಯದಂತೆ, ಶೇ 59ರಷ್ಟು ಜನರು ತಾವು ಅಧ್ಯಕ್ಷರ ಮೇಲೆ ವಿಶ್ವಾಸವಿರಿಸಿರುವುದಾಗಿ ಹೇಳಿದ್ದರೆ, ಶೇ 31 ಜನರು ಇದಕ್ಕೆ ವಿರುದ್ಧವಾಗಿ ಹೇಳಿದ್ದಾರೆ. ಉಳಿದಂತೆ ಶೇ 10 ಜನರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಅಧ್ಯಕ್ಷರಾಗಿ ಪುಟಿನ್ ಅವರ ಕಾರ್ಯಕ್ಷಮತೆ ಬಗ್ಗೆ ನಡೆದ ಸಮೀಕ್ಷೆಯಲ್ಲಿ ಶೇ 62 ಜನರು ಉತ್ತಮ ಕೆಲಸ ಮಾಡಿದ್ದಾರೆ ಎಂದು ಹೇಳಿದರೆ, ಶೇ 26ರಷ್ಟು ಜನರು ಇದಕ್ಕೆ ವಿರುದ್ಧವಾಗಿ ಹೇಳಿದ್ದಾರೆ. ಉಳಿದಂತೆ ಶೇ 13 ಜನರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಕಳೆದ ತಿಂಗಳು, ರಷ್ಯಾದ ಅಧ್ಯಕ್ಷರ ಮೇಲೆ ಸಾರ್ವಜನಿಕ ವಿಶ್ವಾಸಾರ್ಹತೆ ಮಟ್ಟ ಶೇ 57 ರಷ್ಟಿತ್ತು. ವಿರುದ್ಧವಾಗಿ ಶೇ 30ರಷ್ಟು ಜನರು ಅಭಿಪ್ರಾಯ ವ್ಯಕ್ತಪಡಿಸಿದ್ದರು.