ಅಂತರರಾಷ್ಟ್ರೀಯ

ಕೋವಿಡ್;‌ ಅಮೆರಿಕಾದಲ್ಲಿ ಒಂದೇ ದಿನ 5,12 000 ಪ್ರಕರಣ ದಾಖಲು

ಕೋವಿಡ್;‌ ಅಮೆರಿಕಾದಲ್ಲಿ ಒಂದೇ ದಿನ 5,12 000 ಪ್ರಕರಣ ದಾಖಲು

ವಾಷಿಂಗ್ಟನ್‌, ಡಿ 30: ಜಗತ್ತಿನಲ್ಲಿ ಕೋವಿಡ್‌ ಸಾಂಕ್ರಾಮಿಕದಿಂದ ಹೆಚ್ಚು ಹಾನಿಗೊಳಗಾದ ಅಮೆರಿಕಾದಲ್ಲಿ ಕಳೆದ 24 ಗಂಟೆಗಳಲ್ಲಿ 5,12,000 ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಸಾಂಕ್ರಾಮಿಕ ಆರಂಭಗೊಂಡ ನಂತರ ಒಂದೇ ದಿನ ದಾಖಲಾದ ಅತಿ ಹೆಚ್ಚು ಕೋವಿಡ್​ ಸೋಂಕಿತರ ಸಂಖ್ಯೆ. ಈ ಪ್ರಕರಣಗಳೂ ಸೇರಿ ಒಟ್ಟು ಸೋಂಕಿತರ ಸಂಖ್ಯೆ 54 ಮಿಲಿಯನ್ ತಲುಪಿದೆ.

ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾನಿಲಯ ನೀಡಿದ ಅಂಕಿ ಅಂಶಗಳ ಪ್ರಕಾರ, ಕಳೆದ 24 ಗಂಟೆಗಳಲ್ಲಿ 1,762 ರೋಗಿಗಳು ಕೋವಿಡ್​ನಿಂದ ಸಾವನ್ನಪ್ಪಿದ್ದಾರೆ. ಇಲ್ಲಿಯವರೆಗೆ ಮೃತಪಟ್ಟವರ ಸಂಖ್ಯೆ 8,42,000 ಕ್ಕೂ ಹೆಚ್ಚಾಗಿದೆ . ಸಕ್ರಿಯ ಪ್ರಕರಣಗಳು ಮತ್ತು ಚೇತರಿಕೆ ಕ್ರಮವಾಗಿ 11,981,273 ಮತ್ತು 41,325,110 ಆಗಿದೆ.ಬೂಸ್ಟರ್ ಡೋಸ್‌ ನಿಂದಲೂ ಜನರು ಸೋಂಕಿಗೆ ಒಳಗಾಗುವ ಸಾಧ್ಯತೆಯಿದೆ ಎಂದು ತಜ್ಞರು ಎಚ್ಚರಿಸುತ್ತಿದ್ದಾರೆ. ಈ ವರ್ಷದ ಜನವರಿ 8 ರಂದು ಒಂದೇ ದಿನ 2,94,015 ಪ್ರಕರಣಗಳು ಕಂಡುಬಂದಿದ್ದವು.

ಒಮಿಕ್ರಾನ್ ರೂಪಾಂತರಿ ದೇಶದ ಪರಿಸ್ಥಿತಿ ಹದಗೆಡುತ್ತಿರುವುದಕ್ಕೆ ಕಾರಣವಾಗಿದೆ. ಅಮೆರಿಕಾ ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಶನ್ (ಸಿಡಿಸಿ) ಪ್ರಕಾರ, ದೇಶದಲ್ಲಿ ಒಮಿಕ್ರಾನ್ ಶೇ 58.6ರಷ್ಟಿದೆ ಎಂದು ಅಂದಾಜಿಸಲಾಗಿದೆ. ಪ್ರಸ್ತುತ ಕ್ಯಾಲಿಫೋರ್ನಿಯಾ, ನ್ಯೂಯಾರ್ಕ್ ಕೋವಿಡ್‌ ನಿಂದ ಹೆಚ್ಚು ಬಾಧಿತ ಗೊಂಡ ರಾಜ್ಯಗಳಾಗಿವೆ.

ಸುದ್ದಿ ಓದಿ