ಇರಾನ್‌ನಲ್ಲಿ 5.1 ತೀವ್ರತೆಯ ಭೂಕಂಪನ
ತೆಹ್ರಾನ್, ಸೆ.13 - ಇರಾನ್‌ನ ವಾಯುವ್ಯ ತುರ್ಕಮೆನಿಸ್ತಾನದ ಗಡಿಯಲ್ಲಿ ಸೋಮವಾರ ಪ್ರಬಲ ಭೂಕಂಪನದ ಅನುಭವವಾಗಿದೆ. ಭೂಕಂಪದ ತೀವ್ರತೆಯನ್ನು ರಿಕ್ಟರ್ ಮಾಪಕದಲ್ಲಿ 5.1 ಎಂದು ಯುಎಸ್ ಭೂವೈಜ್ಞಾನಿಕ ಸಮೀಕ್ಷೆಯು ಇಂದು ಮಾಹಿತಿಯನ್ನು ನೀಡಿದೆ.
ಈ ಕಂಪನವು ಇರಾನಿನ ಕುಚನ್‌ನಿಂದ ಈಶಾನ್ಯಕ್ಕೆ 38 ಕಿಲೋಮೀಟರ್ ದೂರದಲ್ಲಿದೆ. ಭೂಕಂಪದ ಕೇಂದ್ರಬಿಂದು ನೆಲದಿಂದ 10 ಕಿಮೀ ಆಳದಲ್ಲಿದೆ.
ಭೂಕಂಪದಿಂದ ಸಂಭವನೀಯ ಸಾವುನೋವು ಅಥವಾ ಹಾನಿಯ ಬಗ್ಗೆ ಇದುವರೆಗೆ ಯಾವುದೇ ವರದಿಗಳಿಲ್ಲ.