ಅಂತರರಾಷ್ಟ್ರೀಯ

ಇಸ್ರೇಲ್ ಸಶಸ್ತ್ರ ಪಡೆಗಳೊಂದಿಗೆ ಘರ್ಷಣೆ; 46 ಪ್ಯಾಲೆಸ್ಟೀಯನ್ನರಿಗೆ ಗಾಯ

ಇಸ್ರೇಲ್  ಸಶಸ್ತ್ರ ಪಡೆಗಳೊಂದಿಗೆ ಘರ್ಷಣೆ; 46  ಪ್ಯಾಲೆಸ್ಟೀಯನ್ನರಿಗೆ ಗಾಯ

ಗಾಜಾ, ನ.12: ಪಶ್ಚಿಮ ದಂಡೆಯಲ್ಲಿರುವ   ರಮಲ್ಲಾ ನಗರದ ಸಮೀಪದಲ್ಲಿ ಇಸ್ರೇಲಿ ಸಶಸ್ತ್ರ ಪಡೆಗಳೊಂದಿಗೆ  ನಡೆದ ಘರ್ಷಣೆಯಲ್ಲಿ    46 ಪ್ಯಾಲೆಸ್ಟೀಯನ್ನರು   ಗಾಯಗೊಂಡಿದ್ದಾರೆ ಎಂದು   ಪ್ಯಾಲೆಸ್ಟೀನಿಯನ್‌  ರೆಡ್ ಕ್ರೆಸೆಂಟ್    ಅನ್ನು  ಉಲ್ಲೇಖಿಸಿ WAFA ಸುದ್ದಿ ಸಂಸ್ಥೆ ಗುರುವಾರ ವರದಿ ಮಾಡಿದೆ.

46  ಮಂದಿಯಲ್ಲಿ   26    ಮಂದಿ    ಇಸ್ರೇಲಿ  ಯೋಧರು  ಸಿಡಿಸಿದ   ಅಶ್ರುವಾಯು  ಪರಿಣಾಮ,   14   ಮಂದಿ  ರಬ್ಬರ್ ಲೇಪಿತ ಲೋಹದ ಗುಂಡುಗಳಿಂದ,    ಉಳಿದ   ಆರು  ಮಂದಿ  ಬಿದ್ದ ಪರಿಣಾಮ  ಗಾಯಗೊಂಡಿದ್ದಾರೆ.  ಈ   ಪೈಕಿ   ಒಬ್ಬರನ್ನು  ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು WAFA ತಿಳಿಸಿದೆ.

ದಶಕಗಳಿಂದ  ಇಸ್ರೇಲ್  ಹಾಗೂ  ಪ್ಯಾಲೆಸ್ಟೈನ್ ನಡುವಣ ಸಂಬಂಧಗಳು    ಹಳಸಿದ್ದು,  ಪ್ಯಾಲೆಸ್ಟೀನಿಯನ್ನರು   ಪಶ್ಚಿಮ ದಂಡೆಯ ಪ್ರಾಂತ್ಯಗಳಲ್ಲಿ  ಸ್ವತಂತ್ರ  ರಾಜ್ಯಕ್ಕಾಗಿ  ರಾಜತಾಂತ್ರಿಕ  ಮಾನ್ಯತೆ  ಬಯಸುತ್ತಿದ್ದು,   ಇಸ್ರೇಲ್ ಭಾಗಶಃ ಆಕ್ರಮಿಸಿಕೊಂಡಿರುವ  ಪೂರ್ವ ಜೆರುಸಲೆಮ್,  ಗಾಜಾ ಪಟ್ಟಿ ಒಳಗೊಂಡ   ಪ್ರದೇಶಗಳು  ಸೇರಿರುವ ಕಾರಣ   ಸಂಬಂಧಗಳು   ಹಳಸಿವೆ.

ಆದರೆ,   ಇಸ್ರೇಲ್‌   ಸರ್ಕಾರ    ಪ್ಯಾಲೆಸ್ಟೈನ್ ಅನ್ನು   ಸ್ವತಂತ್ರ  ರಾಜಕೀಯ,  ರಾಜತಾಂತ್ರಿಕ   ರಾಜ್ಯವೆಂದು   ಮಾನ್ಯ ಮಾಡಲು  ನಿರಾಕರಿಸುತ್ತದೆ. ವಿಶ್ವಸಂಸ್ಥೆ ಸೇರಿದಂತೆ   ಅಂತರರಾಷ್ಟ್ರೀಯ ಸಮುದಾಯದ ಆಕ್ಷೇಪಣೆಗಳ ಹೊರತಾಗಿಯೂ ಆಕ್ರಮಿತ ಪ್ರದೇಶಗಳಲ್ಲಿ   ಇಸ್ರೇಲ್‌   ವಸಾಹತುಗಳನ್ನು ನಿರ್ಮಿಸುತ್ತದೆ. 

ಸುದ್ದಿ ಓದಿ