ಸೌದಿ ಅರೇಬಿಯಾದಲ್ಲಿ ಪತ್ತೆಯಾಯಿತು 4500 ವರ್ಷಗಳ ಹೆದ್ದಾರಿ!
ಸೌದಿ ಅರೇಬಿಯಾ: ಜನವರಿ 17 ಸಿಂಧೂ ನಾಗರೀಕತೆಯಲ್ಲಿ ಹರಪ್ಪಾ ಸಂಸ್ಕೃತಿಯ ಮುಖ್ಯವಾಗಿದ್ದು, ಆ ಕಾಲಘಟ್ಟದಲ್ಲಿ ಹರಪ್ಪಾ ನಾಗರೀಕತೆ ಬಹಳ ಮುಂದುವರಿದಿತ್ತು. ಇದ್ಯಾಕಪ್ಪ ಈಗ ನಾಗರೀಕತೆಯ ಬಗ್ಗೆ ಅಂತೀರಾ.ಇದಕ್ಕೆ ಕಾರಣ, ಇತ್ತೀಚೆಗಷ್ಟೇ ಸೌದಿ ಅರೇಬಿಯಾದಲ್ಲಿ ಇಂತಹದೊಂದು ವಿಶಿಷ್ಟ ಸಂಗತಿಯೊಂದು ಕಂಡುಬಂದಿರುವುದು.
ಸಾಕಷ್ಟು ಮುಂದುವರಿದಿರುವ ಸೌದಿ ಅರೇಬಿಯಾದಲ್ಲಿ 4500 ವರ್ಷಗಳಷ್ಟು ಹಳೆಯದಾದ ಹೆದ್ದಾರಿ ಪತ್ತೆಯಾಗಿದೆ. ಅಷ್ಟೇ ಅಲ್ಲ ಸುತ್ತಮುತ್ತಲಿನ ಪ್ರದೇಶದಲ್ಲಿ 18 ಸಾವಿರಕ್ಕೂ ಹೆಚ್ಚು ಗೋರಿಗಳು ಪತ್ತೆಯಾಗಿವೆ. ಇತಿಹಾಸಕಾರ ಮತ್ತು ಪುರಾತತ್ವ ಇಲಾಖೆ ಹೆಚ್ಚಿನ ಮಾಹಿತಿಯನ್ನು ಹುಡುಕುವಲ್ಲಿ ತೊಡಗಿದೆ. ಹುಡುಕಾಟದಲ್ಲಿ ಸಿಕ್ಕ ವಿಷಯಗಳು ತುಂಬಾ ಆಘಾತಕಾರಿ. ಮಾಹಿತಿ ಪ್ರಕಾರ ಎಲ್ಲಾ ಗೋರಿಗಳು ಸುರಕ್ಷಿತವಾಗಿವೆ ಎನ್ನಲಾಗಿದೆ.
ಸೌದಿ ಅರೇಬಿಯಾದಲ್ಲಿ ಇಂತಹದೊಂದು ವಿಶಿಷ್ಟ ಸಂಗತಿ ಕಂಡುಬಂದಿರುವುದು ಜನರನ್ನು ಬೆರಗುಗೊಳಿಸಿದೆ. ಹೆದ್ದಾರಿಯ ಬಗ್ಗೆ ಮತ್ತು ಸಮಾಧಿಯ ಬಗ್ಗೆ ಸಂಶೋಧಕರು ಹೆಚ್ಚಿನ ಮಾಹಿತಿಗಾಗಿ ಹುಡುಕುತ್ತಿದ್ದಾರೆ.