439 ಅಮೆರಿಕನ್ನರು ಇನ್ನೂ ಅಫ್ಘಾನಿಸ್ತಾನದಲ್ಲಿಯೇ ಇದ್ದಾರೆ: ಪೆಂಟಗನ್
ವಾಷಿಂಗ್ಟನ್, ಅ. 27: ಅಫ್ಘಾನಿಸ್ತಾನದಲ್ಲಿ ಇನ್ನೂ 439 ಅಮೆರಿಕನ್ನರು ಸಿಕ್ಕಿಬಿದ್ದಿದ್ದಾರೆ. ಅವರಲ್ಲಿ ಬಹುತೇಕರೊಡನೆ ಅಮೆರಿಕ ಸಂಪರ್ಕದಲ್ಲಿದೆ ಎಂದು ಸೆನೆಟ್ ವಿಚಾರಣೆಯ ಸಂದರ್ಭದಲ್ಲಿ ಪೆಂಟಗನ್ ಹೇಳಿದೆ.
ಇನ್ನೂ ಅಫ್ಘಾನಿಸ್ತಾನದಲ್ಲಿಯೇ ಇರುವ 363 ಮಂದಿ ಅಮೆರಿಕನ್ನರೊಂದಿಗೆ ಸಂಪರ್ಕದಲ್ಲಿದ್ದಾರೆ. 176 ಜನರು ಮಾತ್ರ ದೇಶವನ್ನು ತೊರೆಯಲು ಬಯಸುತ್ತಾರೆ ಎಂದು ಅಮೆರಿಕ ರಕ್ಷಣಾ ಅಧೀನ ಕಾರ್ಯದರ್ಶಿ ಕಾಲಿನ್ ಕಾಹುಲ್ ಮಂಗಳವಾರ ಹೇಳಿದ್ದಾರೆಂದು ಖಾಮಾ ಪ್ರೆಸ್ ಉಲ್ಲೇಖಿಸಿದೆ.
ಸಾವಿರಾರು ನಾಗರಿಕರನ್ನು ಸ್ಥಳಾಂತರಿಸಿದ ನಂತರ ಅಮೆರಿಕ ಪಡೆಗಳು ಆಗಸ್ಟ್ 31 ರಂದು ಅಫ್ಘಾನಿಸ್ತಾನವನ್ನು ತೊರೆದವು. ಇತರ ದೇಶಗಳ ಪ್ರಜೆಗಳನ್ನು ಸ್ಥಳಾಂತರಿಸುವ ಕಾರ್ಯದಲ್ಲಿಯೂ ಅವರು ಸಹಾಯ ಮಾಡಿದರು.