ಇಡ್ಲಿಬ್ ನಲ್ಲಿ ಉಗ್ರರ ದಾಳಿ: 40 ಸಿರಿಯಾ ಯೋಧರು ಸಾವು
ಮಾಸ್ಕೊ, ಜ 23 : ಇಡ್ಲಿಬ್ ನಲ್ಲಿ ಭಯೋತ್ಪಾದಕರು ನಡೆಸಿದ ದಾಳಿಯಲ್ಲಿ 40 ಸಿರಿಯಾ ಸರ್ಕಾರಿ ಪಡೆಯ ಸೈನಿಕರು ಮೃತಪಟ್ಟಿದ್ದಾರೆ ಎಂದು ಸಿರಿಯಾದಲ್ಲಿನ ರಷ್ಯಾದ ಮರುಸಂಧಾನದ ಕೇಂದ್ರ ತಿಳಿಸಿದೆ.
ಬುಧವಾರ ರಾತ್ರಿ ಸುಮಾರು 450 ಭಯೋತ್ಪಾದಕರು ದಾಳಿ ನಡೆಸಿದ್ದರು. ‘ ದಾಳಿಗಳಲ್ಲಿ ಸಿರಿಯಾ ಸರ್ಕಾರಿ ಪಡೆಗಳ 40 ಸೈನಿಕರು ಮೃತಪಟ್ಟಿದ್ದು, 80ಕ್ಕೂ ಸೈನಿಕರು ಗಾಯಗೊಂಡಿದ್ದಾರೆ.’ ಎಂದು ರಷ್ಯಾ ಕೇಂದ್ರದ ಪ್ರಕಟಣೆ ತಿಳಿಸಿದೆ.
ಘರ್ಷಣೆಗಳಲ್ಲಿ ಸುಮಾರು 50 ಭಯೋತ್ಪಾದಕರು ಮೃತಪಟ್ಟಿದ್ದು, ಇತರ 90 ಮಂದಿ ಗಾಯಗೊಂಡಿದ್ದಾರೆ ಎಂದು ಕೇಂದ್ರ ತಿಳಿಸಿದೆ.
ಮತ್ತೊಂದು ದಾಳಿ ಭೀತಿಯಿಂದ ಸರ್ಕಾರಿ ಪಡೆಗಳು ಆಗ್ನೇಯ ಭಾಗದಿಂದ ಸ್ಥಳಾಂತರಗೊಂಡಿವೆ.
ಈ ಮಧ್ಯೆ, ಅಲೆಪ್ಪೊ ಮೇಲೆ ಸುಮಾರು 50 ಉಗ್ರರು ದಾಳಿ ಯತ್ನ ನಡೆಸಿದ್ದಾರೆ. ಆದರೆ, ದಾಳಿಯನ್ನು ನಿಗ್ರಹಿಸಲಾಗಿದ್ದು, ಘರ್ಷಣೆಯಲ್ಲಿ ಏಳು ಉಗ್ರರು ಹತರಾಗಿದ್ದಾರೆ. ಸಿರಿಯಾ ಸರ್ಕಾರಿ ಪಡೆಯ ಇಬ್ಬರು ಸೈನಿಕರು ಮೃತಪಟ್ಟು, ನಾಲ್ವರು ಗಾಯಗೊಂಡಿದ್ದಾರೆ ಎಂದು ಕೇಂದ್ರ ತಿಳಿಸಿದೆ.
ಬೆಳಗಾವಿಗೆ ಮೋಹನ್ ಭಾಗವತ್ ಭೇಟಿ: 9 ದಿನ ಡ್ರೋನ್ ಹಾರಾಟಕ್ಕೆ ನಿಷೇಧ, 3 ಸ್ಥಳಗಳು ರೆಡ್ ಝೋನ್ : ಡಿಸಿ ಆದೇಶ
ಕೋಲ್ಕತ್ತಾ ಟಿಎಂಸಿ ಕಚೇರಿ ವಿವಾದದ ಮೇಲೆ ಬಂಡಾಯ ಗುಂಪಿಗೆ ಮಮತಾ ಬ್ಯಾನರ್ಜಿ ತೀವ್ರ ವಾಗ್ದಾಳಿ, “ಸಂಸ್ಥೆಗಳನ್ನು ಸ್ವಾಧೀನಪಡಿಸಿಕೊಳ್ಳಲು ಸಾಧ್ಯವಿಲ್ಲ” ಎಂದು ಹೇಳಿಕೆ
ಸಿಸಿಬಿ ಪೊಲೀಸರ ದಾಳಿ–4.96 ಲಕ್ಷ ಮೌಲ್ಯದ ಹೆರಾಯಿನ್ ವಶ, ಓರ್ವ ಬಂಧನ
ಬೆಂಗಳೂರು ಕ್ವಾರಿ ಬಂಡೆ ಕುಸಿತ: ಬಿಹಾರದ ಏಳು ಕಾರ್ಮಿಕರು ಮೃತ
11 ವರ್ಷಗಳಲ್ಲಿ ಡಿಜಿಟಲ್ ಇಂಡಿಯಾ ಆಡಳಿತವನ್ನು ಪರಿವರ್ತಿಸಿ, ನಾಗರಿಕರನ್ನು ಸಬಲಗೊಳಿಸಿದೆ: ಪ್ರಧಾನಿ ಮೋದಿ
ಮುಂಬೈನ ಚೆಂಬೂರಿನಲ್ಲಿ ಶಾಲಾ ಬಸ್ ಮೇಲೆ ಮರ ಉರುಳಿ ಬಿದ್ದು ವಿದ್ಯಾರ್ಥಿ ಸಾವು; ನಾಲ್ವರಿಗೆ ಗಾಯ 