ಅಂತರರಾಷ್ಟ್ರೀಯ

ಬ್ರಿಟನ್ ; ಜಲ ಸಂಸ್ಕರಣ ಸ್ಥಾವರದಲ್ಲಿ ಸ್ಪೋಟ... ನಾಲ್ವರು ಸಾವು

ಬ್ರಿಟನ್ ;  ಜಲ ಸಂಸ್ಕರಣ ಸ್ಥಾವರದಲ್ಲಿ  ಸ್ಪೋಟ... ನಾಲ್ವರು ಸಾವು

ಬ್ರಿಸ್ಟಲ್ (ಇಂಗ್ಲೆಂಡ್), ಡಿಸೆಂಬರ್ 4: ಇಂಗ್ಲೆಂಡ್‌  ದೇಶದ   ಬ್ರಿಸ್ಟಲ್‌ನ ಹೊರವಲಯದಲ್ಲಿರುವ ನೀರಿನ ಸಂಸ್ಕರಣಾ ಘಟಕದಲ್ಲಿ ಸಂಭವಿಸಿದ ಸ್ಫೋಟದಲ್ಲಿ ನಾಲ್ವರು ಕಾರ್ಮಿಕರು ಸಾವನ್ನಪ್ಪಿದ್ದಾರೆ.  ಬ್ರಿಸ್ಟಲ್ ವಾಟರ್ ಪ್ಲಾಂಟ್‌ನಲ್ಲಿ ನಡೆದ ಸ್ಫೋಟದಲ್ಲಿ ನಾಲ್ವರು ಕಾರ್ಮಿಕರು ಸಾವನ್ನಪ್ಪಿದ್ದು,  ಮತ್ತೊಬ್ಬರು ಗಂಭೀರ ಗಾಯಗೊಂಡಿದ್ದಾರೆ  ಎಂದು ಚೀಫ್ ಇನ್ಸ್‌ಪೆಕ್ಟರ್ ಮಾರ್ಕ್ ರನಾಕ್ರೆಸ್ ತಿಳಿಸಿದ್ದಾರೆ.

ಮೃತಪಟ್ಟವರಲ್ಲಿ ಮೂವರು  ಸಂಸ್ಕರಣಾ ಘಟಕದ  ಕಾರ್ಮಿಕರಾಗಿದ್ದು,  ಮತ್ತೊಬ್ಬರು ಗುತ್ತಿಗೆದಾರರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಗಾಯಗೊಂಡ ವ್ಯಕ್ತಿಯನ್ನು ಆಸ್ಪತ್ರೆಗೆ ಸಾಗಿಸಿ, ವೈದ್ಯಕೀಯ  ಚಿಕಿತ್ಸೆ ಕಲ್ಪಿಸಲಾಗುತ್ತಿದ್ದು,  ಆತನ ಪ್ರಾಣಕ್ಕೆ ಯಾವುದೇ ಅಪಾಯ ಇಲ್ಲ  ಎಂದು ಪೊಲೀಸರು ತಿಳಿಸಿದ್ದಾರೆ.

ಸ್ಫೋಟದಿಂದಾಗಿ ಸಮೀಪದಲ್ಲಿ ವಾಸಿಸುವ ಜನರಿಗೆ ಯಾವುದೇ  ತೊಂದರೆ   ಇಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಸ್ಫೋಟದ  ಕಾರಣದ  ಬಗ್ಗೆ  ಸರ್ಕಾರಿ ಆರೋಗ್ಯ,  ಭದ್ರತಾ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಘಟನೆಯ  ಬಗ್ಗೆ  ಬ್ರಿಟಿಷ್ ಪ್ರಧಾನಿ ಬೋರಿಸ್ ಜಾನ್ಸನ್  ತೀವ್ರ ಆಘಾತ ವ್ಯಕ್ತಪಡಿಸಿದ್ದಾರೆ.

ಸುದ್ದಿ ಓದಿ