ಕರಾಚಿಯಲ್ಲಿ ಧಾರಾಕಾರ ಮಳೆ: 4 ಮಂದಿ ಸಾವು
ಇಸ್ಲಾಮಾಬಾದ್,
ಆಗಸ್ಟ್ 26 (ಕ್ಸಿನ್ಹುವಾ): ಪಾಕಿಸ್ತಾನದ ದಕ್ಷಿಣ ಸಿಂಧ್ ಪ್ರಾಂತ್ಯದ ರಾಜಧಾನಿ ಕರಾಚಿಯಲ್ಲಿ ಭಾರಿ
ಮಳೆಯಿಂದ 4 ಮಂದಿ ಸಾವನ್ನಪ್ಪಿದ್ದು, ಜನರ ರಕ್ಷಣೆಗೆ
ಸೇನೆಯನ್ನು ಬಳಕೆ ಮಾಡಲಾಗಿದೆ.
ಈ ಹಿಂದೆ, 1984 ರಲ್ಲಿ ಕರಾಚಿಯಲ್ಲಿ 298.4 ಮಿಲಿಮೀಟರ್ ಮಳೆಯಾಗಿತ್ತು ಎಂದು ಪಾಕಿಸ್ತಾನದ ಹವಾಮಾನ ಇಲಾಖೆ (ಪಿಎಂಡಿ) ತಿಳಿಸಿದೆ.
ನಗರದ ಹಲವು ಭಾಗಗಳಲ್ಲಿ ಭಾರಿ ಮಳೆಯಿಂದ ಹಾನಿಯಾಗಿದೆ ಬೀದಿಗಳು, ತಗ್ಗು ಪ್ರದೇಶಗಳು ಜಲಾವೃತವಾಗಿವೆ. ವಿದ್ಯುತ್ ಅವಗಡ ಮತ್ತು ಮೇಲು ಚಾವಣಿ ಕುಸಿತ ಸೇರಿದಂತೆ ಮಳೆ, ಸಂಬಂಧಿತ ಅಪಘಾತಗಳಿಂದ ನಾಲ್ಕು ಜನರು ಮೃತಪಟ್ಟಿದ್ದಾರೆ.
ಸಿಂಧ್ ಮುಖ್ಯಮಂತ್ರಿ ಸೈಯದ್ ಮುರಾದ್ ಅಲಿ ಶಾ, ನಗರದ ತಗ್ಗು ಪ್ರದೇಶಗಳು ನೀರಿನಿಂದ ಮುಳುಗಿವೆ ಮನೆಗಳಲ್ಲಿ ಸಿಲುಕಿರುವ ಜನರನ್ನು ರಕ್ಷಿಸಲು ನಗರದಲ್ಲಿ ತುರ್ತು ಪರಿಸ್ಥಿತಿ ವಿಧಿಸಲಾಗಿದೆ ಎಂದು ಹೇಳಿದರು.
ಹಲವಾರು ಪ್ರದೇಶಗಳ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಯಿತು. ನಗರದಲ್ಲಿ ಭೂಕುಸಿತ ಸಂಭವಿಸಿದ್ದು, ಹಲವಾರು ವಾಹನಗಳು ಹಾನಿಗೊಳಗಾಗಿವೆ. ಸೇನಾ ತಂಡಗಳು ಜನರನ್ನು ದೋಣಿಗಳಲ್ಲಿ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿ, ಅವರಿಗೆ ಆಹಾರ ಮತ್ತು ಆಶ್ರಯ ಒದಗಿಸುತ್ತಿವೆ.