ಅಂತರರಾಷ್ಟ್ರೀಯ

ಲಾವೊ ಹೊಸ ವರ್ಷದ ರಜಾದಿನಗಳಲ್ಲಿ ರಸ್ತೆ ಅಪಘಾತದಲ್ಲಿ 35 ಮಂದಿ ಸಾವು

ಲಾವೊ ಹೊಸ ವರ್ಷದ ರಜಾದಿನಗಳಲ್ಲಿ ರಸ್ತೆ ಅಪಘಾತದಲ್ಲಿ 35 ಮಂದಿ ಸಾವು

ವಿಯೆಂಟಿಯಾನ್: ಏಪ್ರಿಲ್ 19: ಹೊಸ ವರ್ಷದ ಆಚರಣೆ ಸಂದರ್ಭದಲ್ಲಿ ಲಾವೋಸ್‌ನಾದ್ಯಂತ ಸಂಭವಿಸಿದ ರಸ್ತೆ ಅಪಘಾತಗಳಲ್ಲಿ ಒಟ್ಟು 35 ಜನರು ಸಾವನ್ನಪ್ಪಿದ್ದಾರೆ.

ಸಾರ್ವಜನಿಕ ಭದ್ರತೆಯ ಲಾವೊ ಸಚಿವಾಲಯದ ಅಡಿಯಲ್ಲಿ ಸಂಚಾರ ಪೊಲೀಸ್ ಇಲಾಖೆ ನೀಡಿದ ಇತ್ತೀಚಿನ ವರದಿಯ ಪ್ರಕಾರ, ಆಗ್ನೇಯ ಏಷ್ಯಾದ ದೇಶದಲ್ಲಿ 312 ಅಪಘಾತಗಳು ವರದಿಯಾಗಿವೆ.

ಇದೇ ವೇಳೆ ರಸ್ತೆ ಅಪಘಾತದಲ್ಲಿ 552 ಮಂದಿ ಗಾಯಗೊಂಡಿದ್ದು, 545 ವಾಹನಗಳಿಗೆ ಹಾನಿಯಾಗಿದೆ. ಲಾವೊ ರಾಜಧಾನಿ ವಿಯೆಂಟಿಯಾನ್ 45 ಅಲಘಾತಗಳು ಸಂಭವಿಸಿದ್ದು, ಅತಿ ಹೆಚ್ಚು ಅಪಘಾತ ಸಂಭವಿಸಿದ ಪ್ರದೇಶವಾಗಿದೆ. ಇದು ಎಂಟು ಸಾವುಗಳಿಗೆ ಕಾರಣವಾಯಿತು.

ಅಜಾಗರೂಕ ಚಾಲನೆ, ಕುಡಿದು ವಾಹನ ಚಾಲನೆ, ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಧರಿಸದಿರುವುದು ಮತ್ತು ಅತಿವೇಗದ ಚಾಲನೆಯೇ ಅಪಘಾತಗಳಿಗೆ ಕಾರಣ ಎಂದು ಸಂಚಾರ ಪೊಲೀಸ್ ಇಲಾಖೆ ತಿಳಿಸಿದೆ.

ಸುದ್ದಿ ಓದಿ