ಜಿಂಬಾಬ್ವೆ ಬಸ್ ಅಪಘಾತದಲ್ಲಿ 32 ಮಂದಿ ಸಾವು
ಹರಾರೆ: ಏಪ್ರಿಲ್ 15: ಆಗ್ನೇಯ ಜಿಂಬಾಬ್ವೆಯ ಚಿಪಿಂಗ್‌ನಲ್ಲಿ ಜಿಯಾನ್ ಕ್ರಿಶ್ಚಿಯನ್ ಚರ್ಚ್‌ನ ಸದಸ್ಯರನ್ನು ಹೊತ್ತೊಯ್ಯುತ್ತಿದ್ದ ಬಸ್ ಅಪಘಾತಕ್ಕೀಡಾಗಿ ಗುರುವಾರ ರಾತ್ರಿ ಕನಿಷ್ಠ 32 ಜನರು ಸಾವನ್ನಪ್ಪಿದ್ದಾರೆ.
9 ಗಂಟೆಯ ಸುಮಾರಿಗೆ ಜೋಪಾ ಮಾರ್ಕೆಟ್ ಬಳಿ ಸಂಭವಿಸಿದ ಅಪಘಾತದಲ್ಲಿ ಸುಮಾರು 40 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಝಡ್‌ಬಿಸಿ ಶುಕ್ರವಾರ ವರದಿ ಮಾಡಿದೆ. ಜಿಂಬಾಬ್ವೆಯಲ್ಲಿ ಈ ಘಟನೆ ಈಸ್ಟರ್ ವಾರಾಂತ್ಯಕ್ಕೆ ಕೆಟ್ಟ ಆರಂಭವನ್ನು ಸೂಚಿಸಿದೆ.