ಅಂತರರಾಷ್ಟ್ರೀಯ

ರಷ್ಯಾದಲ್ಲಿ ಒಂದೇ ದಿನ 22,702 ಕೋವಿಡ್-19 ಸೋಂಕಿತರು ಪತ್ತೆ

ರಷ್ಯಾದಲ್ಲಿ ಒಂದೇ ದಿನ 22,702 ಕೋವಿಡ್-19 ಸೋಂಕಿತರು ಪತ್ತೆ

ಮಾಸ್ಕೋ, 14: ರಷ್ಯಾದಲ್ಲಿ ಶನಿವಾರ 22,702 ಹೊಸ ಕೊರೊನಾ ವೈರಸ್ ಸೋಂಕಿತರು ದೃಢಪಟ್ಟಿದ್ದಾರೆ ಎಂದು ರಷ್ಯಾದ ಆರೋಗ್ಯ ಕೇಂದ್ರವು ತಿಳಿಸಿದೆ. 

ಈ ವರೆಗೆ ದೇಶದಲ್ಲಿ ಕೋವಿಡ್-19 ಪೀಡಿತರ ಸಂಖ್ಯೆ 19,03,253ಕ್ಕೆ ಏರಿದೆ. ಆರೋಗ್ಯ ಕೇಂದ್ರದ ಪ್ರಕಾರ, ಕಳೆದ 24 ಗಂಟೆಗಳಲ್ಲಿ ವರದಿಯಾದ ಅತಿ ಹೆಚ್ಚು ಪ್ರಕರಣಗಳು ಇದಾಗಿದೆ.

ರಷ್ಯಾದ ಆರೋಗ್ಯ ಕೇಂದ್ರವು ಶನಿವಾರ ಈ ಬಗ್ಗೆ ಮಾಹಿತಿ ನೀಡಿದ್ದು "ಕಳೆದ 24 ಗಂಟೆಗಳಲ್ಲಿ, ರಷ್ಯಾದ 85 ಪ್ರದೇಶಗಳಲ್ಲಿ 22,702 ಹೊಸ ಸೋಂಕಿತರು ಪತ್ತೆಯಾಗಿದ್ದಾಗಿ ತಿಳಿಸಿದೆ. ಈ ಪೈಕಿ 5,730 ಸೋಂಕಿತರಿಗೆ ಯಾವುದೇ ಲಕ್ಷಣಗಳಿಲ್ಲ. ರಷ್ಯಾದ ರಾಜಧಾನಿ ಮಾಸ್ಕೋದಲ್ಲಿ 6427, ಪೀಟರ್ಸ್ ಬರ್ಗ್ ನಲ್ಲಿ 1852 ಮತ್ತು ಮಾಸ್ಕೋ ಪ್ರದೇಶದಲ್ಲಿ 786 ಹೊಸ ಪ್ರಕರಣಗಳು ವರದಿಯಾಗಿವೆ. ಇದಲ್ಲದೆ, ಕಳೆದ 24 ಗಂಟೆಗಳಲ್ಲಿ ಈ ವೈರಸ್‌ನಿಂದ 391 ಜನರು ಸಾವನ್ನಪ್ಪಿದ್ದಾರೆ. ಒಟ್ಟು ಸಾವುಗಳ ಸಂಖ್ಯೆ 32,834 ಕ್ಕೆ ತಲುಪಿದೆ. ಈ ಅವಧಿಯಲ್ಲಿ, 18,626 ಜನರ ಚೇತರಿಕೆಯೊಂದಿಗೆ, ಚೇತರಿಸಿಕೊಳ್ಳುವ ಜನರ ಸಂಖ್ಯೆಯೂ 14,25,529 ಕ್ಕೆ ತಲುಪಿದೆ” ಎಂದು ತಿಳಿಸಿದೆ. 

ಸುದ್ದಿ ಓದಿ