ಅಂತರರಾಷ್ಟ್ರೀಯ

9-11 ದಾಳಿಯ 20ನೇ ವರ್ಷ; ನ್ಯೂರ್ಯಾಕ್‌ಗೆ ಬೈಡೆನ್‌ ಭೇಟಿಗೆ ಸಿದ್ಧತೆ

9-11 ದಾಳಿಯ 20ನೇ ವರ್ಷ; ನ್ಯೂರ್ಯಾಕ್‌ಗೆ ಬೈಡೆನ್‌ ಭೇಟಿಗೆ ಸಿದ್ಧತೆ

ವಾಷಿಂಗ್ಟನ್, ಸೆ 5 : ಅಮೆರಿಕದ ಟ್ವಿನ್‌ ಟವರ್‌ ಮೇಲೆ 9-11ರ ಭಯೋತ್ಪಾದಕ ದಾಳಿಯ 20 ನೇ ವಾರ್ಷಿಕೋತ್ಸವದ ಅಂಗವಾಗಿ ಅಲ್ಲಿನ ಅಧ್ಯಕ್ಷ ಜೋ ಬೈಡೆನ್, ನ್ಯೂಯಾರ್ಕ್, ಪೆನ್ಸಿಲ್ವೇನಿಯಾ ಮತ್ತು ವರ್ಜೀನಿಯಾಗೆ ಭೇಟಿ ನೀಡಲಿದ್ದಾರೆ ಎಂದು ಶ್ವೇತಭವನ ಒಂದು ವಾರ ಮುಂಚಿತವಾಗಿ ಘೋಷಿಸಿದೆ.

20 ವರ್ಷಗಳ ಹಿಂದೆ ಕಳೆದುಹೋದ ಜೀವಗಳಿಗೆ ಗೌರವಿಸಲು ಹಾಗೂ ಸ್ಮರಿಸಲು ಸೆಪ್ಟೆಂಬರ್ 11ರ ಶನಿವಾರ, ಬೈಡೆನ್ ಮತ್ತು ಪ್ರಥಮ ಮಹಿಳೆ ಜಿಲ್ ಬೈಡೆನ್ ಅವರು, 9-11 ದಾಳಿಯ ಮೂರು ಸ್ಥಳಗಳಾದ ನ್ಯೂಯಾರ್ಕ್ ನಗರ, ನ್ಯೂಯಾರ್ಕ್ ಶಾಂಕ್ಸ್‌ವಿಲ್ಲೆ, ಪೆನಿಲ್ಸ್‌ವೇನಿಯಾ ಮತ್ತು ವರ್ಜೀನಿಯಾದ ಅರ್ಲಿಂಗ್ಟನ್‌ಗೆ ಪ್ರಯಾಣಿಸಲಿದ್ದಾರೆ ಎಂದು ಶ್ವೇತಭವನ ಶನಿವಾರ ಹೇಳಿದೆ.

ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಮತ್ತು ಎರಡನೇ ಜೆಂಟಲ್ಮನ್ ಡೌಗ್ಲಾಸ್ ಎಮ್‌ಹೋಫ್ ಅವರು ಪ್ರತ್ಯೇಕ ಕಾರ್ಯಕ್ರಮಕ್ಕಾಗಿ ಶಾಂಕ್ಸ್‌ವಿಲ್ಲೆಗೆ ಪ್ರಯಾಣಿಸುತ್ತಾರೆ ಮತ್ತು ನಂತರ ಪೆಂಟಗನ್‌ನಲ್ಲಿ  ಬೈಡೆನ್ ಮತ್ತು ಅವರ ಪತ್ನಿಯೊಂದಿಗೆ ಭೇಟಿ ಮಾಡುತ್ತಾರೆ.

ಸೆಪ್ಟೆಂಬರ್ 11 ಭಯೋತ್ಪಾದಕ ದಾಳಿಗೆ ಸಂಬಂಧಿಸಿದ ಕೆಲವು ದಾಖಲೆಗಳನ್ನು ಸಂಭಾವ್ಯವಾಗಿ ವರ್ಗೀಕರಿಸಲು ಅಂತರ್‌ಪರಿಸ್ಥಿತಿ ಪರಿಶೀಲನೆಯನ್ನು ಆರಂಭಿಸಲು ಶುಕ್ರವಾರ ಬೈಡೆನ್‌ ಆದೇಶ ಹೊರಡಿಸಿದ್ದಾರೆ. ಈ ಕಾರ್ಯನಿರ್ವಾಹಕ ಆದೇಶ ಪ್ರಕಾರ, ಅಟಾರ್ನಿ ಜನರಲ್ ಮುಂದಿನ ಆರು ತಿಂಗಳಲ್ಲಿ ಬಹಿರಂಗಪಡಿಸಿದ ದಾಖಲೆಗಳನ್ನು ಸಾರ್ವಜನಿಕವಾಗಿ ಬಿಡುಗಡೆ ಮಾಡಬೇಕಾಗುತ್ತದೆ.

ಈ ದಾಳಿ ನಡೆಸಿದ ಭಯೋತ್ಪಾದಕರಿಗೆ ಸೌದಿ ಅರೇಬಿಯಾ ಹೊಂದಿರಬಹುದಾದ ಸಂಪರ್ಕಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಬಹಿರಂಗಪಡಿಸಲು 9-11 ಸಂತ್ರಸ್ತರ ಕುಟುಂಬಗಳು ಅಮೆರಿಕ ಸರ್ಕಾರವನ್ನು ಬಹಳ ಹಿಂದಿನಿಂದಲೂ ಒತ್ತಾಯಿಸುತ್ತಿವೆ.

2001ರ ಸೆಪ್ಟೆಂಬರ್ 11ರಂದು, ಅಲ್ ಖೈದಾ (ರಷ್ಯಾದಲ್ಲಿ ನಿಷೇಧಿತ) ಭಯೋತ್ಪಾದಕರು ನ್ಯೂಯಾರ್ಕ್ನ ವರ್ಲ್ಡ್ ಟ್ರೇಡ್ ಸೆಂಟರ್ (ಡಬ್ಲ್ಯುಟಿಸಿ) ನಲ್ಲಿ ಎರಡು ಅಪಹೃತ ವಾಣಿಜ್ಯ ವಿಮಾನಗಳ ಮೂಲಕ ದಾಳಿ ನಡೆಸಿದ್ದರು.ಇನ್ನೊಂದು ವಿಮಾನ ವಾಷಿಂಗ್ಟನ್, ಡಿಸಿ ಬಳಿ ಪೆಂಟಗನ್ ಅನ್ನು ಅಪ್ಪಳಿಸಿತ್ತಯ. ಅಪಹರಿಸಿದ ನಾಲ್ಕನೇ ವಿಮಾನ ಪೆನ್ಸಿಲ್ವೇನಿಯಾ ರಾಜ್ಯದಲ್ಲಿ ಕೆಳಗೆ ಬಿದ್ದಿತ್ತು.

ದಾಳಿಯ ನಂತರ ಅಮೆರಿಕ "ಆಪರೇಷನ್ ಎಂಡ್ಯೂರಿಂಗ್ ಫ್ರೀಡಮ್" ಅನ್ನು ಪ್ರಾರಂಭಿಸಿತು, ಮತ್ತು ಆಗಿನ ಅಧ್ಯಕ್ಷ ಜಾರ್ಜ್ ಡಬ್ಲ್ಯು ಬುಷ್, ಅಫ್ಘಾನಿಸ್ತಾನದಲ್ಲಿ ಅಲ್ ಖೈದಾ ಮತ್ತು ತಾಲಿಬಾನ್ (ಭಯೋತ್ಪಾದಕ ಸಂಘಟನೆ, ರಷ್ಯಾದಲ್ಲಿ ನಿಷೇಧಿಸಲಾಗಿದೆ) ಅನ್ನು ಗುರಿಯಾಗಿಸಿಕೊಂಡು ವೈಮಾನಿಕ ದಾಳಿಗಳನ್ನು ಘೋಷಿಸಿದರು. 9-11 ದುರಂತದ ನಂತರ ಅಲ್ ಖೈದಾ ಸದಸ್ಯರನ್ನು ಹಸ್ತಾಂತರಿಸಲು ತಾಲಿಬಾನ್ ನಿರಾಕರಿಸಿದ ಹಿನ್ನೆಲೆಯಲ್ಲಿ ನಡೆದ ಈ ಯುದ್ಧದಲ್ಲಿ 2,970 ಕ್ಕೂ ಹೆಚ್ಚು ಜನರನ್ನು ಬಲಿಯಾಗಿದ್ದಾರೆ.

ಈಗ ಅಫ್ಗಾನಿಸ್ತಾನದಲ್ಲಿ ಮತ್ತೆ ತಾಲಿಬಾನ್‌ ತನ್ನ ಹತೋಟಿ ಸಾಧಿಸಿರುವುದರಿಂದ ಆಗಸ್ಟ್ 31ರ ಮುಂಜಾನೆ ಆ ದೇಶದಲ್ಲಿ ನಿಯೋಜನೆಗೊಂಡಿದ್ದ ಅಮೆರಿಕದ ಕೊನೆಯ ಪಡೆ ಅಲ್ಲಿಂದ ತೆರಳಿದೆ. ಇಲ್ಲಿಯವರೆಗೆ ಅಫ್ಗಾನಿಸ್ತಾನದಿಂದ ಸ್ಥಳಾಂತರಗೊಂಡ 25,000 ಕ್ಕೂ ಹೆಚ್ಚು ಅಫ್ಗಾನ್ ನಿರಾಶ್ರಿತರು ಈಗ ಅಮೆರಿಕ ಸೇನಾ ನೆಲೆಗಳಲ್ಲಿ ನೆಲೆಸಿದ್ದಾರೆ.

ಸುದ್ದಿ ಓದಿ