ಮುಂದಗೋಡ

ಮಹಿಳಾ ಶಿಕ್ಷಣದ ದೀಪ ಸಾವಿತ್ರಿಬಾಯಿ ಪುಲೆ ಅವರ 195ನೇ ಜನ್ಮ ದಿನಾಚರಣೆ

ಮಹಿಳಾ ಶಿಕ್ಷಣದ ದೀಪ ಸಾವಿತ್ರಿಬಾಯಿ ಪುಲೆ ಅವರ 195ನೇ ಜನ್ಮ ದಿನಾಚರಣೆ

              ಮುಂಡಗೋಡ  05: ಕರ್ನಾಟಕ ದಲಿತ ಸಂಘರ್ಷ ಸಮಿತಿ ಉತ್ತರ ಕನ್ನಡ ಜಿಲ್ಲೆ, ಮುಂಡಗೋಡ ಹಾಗೂ ಆದಿಜಾಂಭವ ಅನುದಾನಿತ ಕನ್ನಡ ಮಾಧ್ಯಮ ಪ್ರೌಢ ಶಾಲೆ, ಮುಂಡಗೋಡ ಇವರ ಸಂಯುಕ್ತ ಆಶ್ರಯದಲ್ಲಿ ಆದಿಜಾಂಭವ ಶಾಲಾ ಆವರಣದಲ್ಲಿ ಭಾರತದ ಪ್ರಥಮ ಮಹಿಳಾ ಶಿಕ್ಷಕಿ ಅಕ್ಷರದ ಅವ್ವ ಸಾವಿತ್ರಿಬಾಯಿ ಪುಲೆ ಅವರ 195ನೇ ಜನ್ಮ ದಿನಾಚರಣೆ ಹಾಗೂ ಮಹಿಳಾ ಶೈಕ್ಷಣಿಕ ಚಿಂತನಾ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಆರಂಭದಲ್ಲಿ ಸಾವಿತ್ರಿಬಾಯಿ ಪುಲೆ ಹಾಗೂ ಸಂವಿಧಾನ ಶಿಲ್ಪಿ ಡಾ. ಬಿ.ಆರ್‌. ಅಂಬೇಡ್ಕರ್ ಅವರ ಭಾವಚಿತ್ರಗಳಿಗೆ ಪುಷ್ಪಾರ್ಚನೆ ನೆರವೇರಿಸಲಾಯಿತು.

               ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಅಧ್ಯಕ್ಷರು ಹಾಗೂ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಘಟನಾ ಸಂಚಾಲಕರಾದ ಶ್ರೀ ಎಸ್‌. ಪಕ್ಕೀರ​‍್ಪ ವಹಿಸಿ ಮಾತನಾಡಿ, ಮಹಿಳಾ ಶಿಕ್ಷಣಕ್ಕೆ ಸಾವಿತ್ರಿಬಾಯಿ ಪುಲೆ ಅವರು ನೀಡಿದ ಅಮೂಲ್ಯ ಕೊಡುಗೆಯನ್ನು ಸ್ಮರಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀಮತಿ ಸುಮಾ ಜಿ., ಮುಂಡಗೋಡ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಸಾವಿತ್ರಿಬಾಯಿ ಪುಲೆ ಅವರ ಆದರ್ಶಗಳನ್ನು ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು. ಶಾಲೆಯ ಮುಖ್ಯ ಶಿಕ್ಷಕರಾದ ಶ್ರೀ ಎಸ್‌.ಡಿ. ಮುಡೆಣ್ಣವರ ಅವರು ಸ್ವಾಗತಿಸಿ ಪ್ರಾಸ್ತಾವಿಕ ಭಾಷಣ ಮಾಡಿದರು. ಈ ವೇಳೆ ವಿದ್ಯಾರ್ಥಿಗಳು ಸಾಮಾಜಿಕ ನಾಯಕರ ಕುರಿತು ಭಾಷಣ ಮಾಡಿದರು.

               ಕಾರ್ಯಕ್ರಮದಲ್ಲಿ  ಡಿ,ಎಸ್,ಎಸ್, ಪದಾಧಿಕಾರಿಗಳು, ಶಿಕ್ಷಕರು, ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಸಾವಿತ್ರಿಬಾಯಿ ಪುಲೆ ಅವರ ಜನ್ಮ ದಿನಾಚರಣೆಯ ಅಂಗವಾಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಸುಮಾ ಜಿ. ಹಾಗೂ ಡಿ,ಎಸ್,ಎಸ್, ತಾಲೂಕಾ ಮಹಿಳಾ ಅಧ್ಯಕ್ಷೆಯಾದ ಯಲ್ಲವಾ ಹರಿಜನ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಡಿ,ಎಸ್,ಎಸ್, ಜಿಲ್ಲಾ ಸಂಚಾಲಕರಾದ ಗೋಪಾಲ ನಡಕಿನಮನಿ, ಸಂತೋಷ ಕಟ್ಟಿಮನಿ, ಕೆಂದಲಗೇರಿ ಹನುಮಂತ ಕಟ್ಟಿಮನಿ, ಹುಲಗಪ್ಪ ಬೋವಿವಡ್ಡರ, ಶ್ರೀ ನಾಗರಾಜ ಕಟ್ಟಿಮನಿ, ಜೂಜೆ ಸಿದ್ದಿ, ಯಲ್ಲವ್ವ ಹರಿಜನ, ಲಕ್ಷಣ ಬೋವಿವಡ್ಡರ, ಹಿರಿಯ ಪತ್ರಕರ್ತರಾದ ನಜಿರುದ್ದೀನ್ ತಾಡಪತ್ರಿ ಹಾಗೂ ಹಿರಿಯ ಶಿಕ್ಷಕರಾದ ಎಸ್‌.ಸಿ. ಪಾಟೀಲ ಉಪಸ್ಥಿತರಿದ್ದರು. 


ಸುದ್ದಿ ಓದಿ