ಕೋವ್ಯಾಕ್ಸ್ ಲಸಿಕೆ ಪಡೆಯಲು 184 ದೇಶಗಳ ಸಹಿ: ಖೇತ್ರಪಾಲ್
ಲಂಡನ್
, ನವೆಂಬರ್ 20: ಹಲವು ದೇಶಗಳು ಕೊರೋನ ಲಸಿಕೆ ಉತ್ಪಾದನೆಯಲ್ಲಿ ತೊಡಗಿದ್ದರೂ 2021ರ ಮಧ್ಯದೊಳಗೆ ಲಸಿಕೆ ಸಿಗುವುದು ಅನುಮಾನ ಎಂದು ವಿಶ್ವ
ಆರೋಗ್ಯ ಸಂಸ್ಥೆ ಕಳವಳ ವ್ಯಕ್ತಪಡಿಸಿದೆ.
ವಿಶ್ವ ಆರೋಗ್ಯ ಸಂಸ್ಥೆಯ ದಕ್ಷಿಣ ವಲಯದ ಡೈರೆಕ್ಟರ್ ಡಾ. ಪೂನಮ್ ಖೇತ್ರಪಾಲ್ ಈ ಕುರಿತು ಮಾಹಿತಿ ನೀಡಿದ್ದಾರೆ.ಕೋವ್ಯಾಕ್ಸ್ ಲಸಿಕೆ ಪಡೆಯಲು 184 ದೇಶಗಳು ಸಹಿ ಹಾಕಿವೆ. 92 ಕಡಿಮೆ ಆದಾಯ ಇರುವ ದೇಶಗಳು ಕೂಡ ಸೇರಿವೆ.ಮುಂದಿನ ಕೆಲವು ತಿಂಗಳುಗಳಲ್ಲಿ ಯಶಸ್ವಿ ಲಸಿಕೆ ಕಂಡುಬಂದಲ್ಲಿ, 2021ರ ವೇಳೆಗೆ ದೇಶಗಳಲ್ಲಿ ಸಾಕಷ್ಟು ಪ್ರಮಾಣದ ಲಸಿಕೆಗಳು ಲಭ್ಯವಾಗಲಿದ್ದರೂ ಜನರಿಗೆ ಆದ್ಯತೆ ಮೇರೆಗೆ ಲಸಿಕೆ ನೀಡಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ಲಸಿಕೆ ಕಂಪನಿಯಲ್ಲಿ ಮುಂಚೂಣಿಯಲ್ಲಿರುವ ಮೂರನೇ ಹಂತದ ಪ್ರಯೋಗ ನಡೆಸುತ್ತಿರುವವರು ವೈಯಕ್ತಿಕ
ಲಸಿಕೆಗಳ ಪರಿಣಾಮಕಾರಿತ್ವ ಮತ್ತು ಸುರಕ್ಷತೆ ಮೌಲ್ಯಮಾಪನ ಮಾಡಲು ಹಲವು ತಿಂಗಳುಗಳ ಸಮಯ ತೆಗೆದುಕೊಳ್ಳಲಿದ್ದಾರೆ ಎಂದರೂ ಕೆಲವೊಂದು ಲಸಿಕೆಗಳಿಗೆ ಅನುದಾನದ ಕೊರತೆ ಇದೆ ಎಂದೂ ಹೇಳಲಾಗಿದೆ.