ಮಾರ್ಕಂಡೆಯ ಜಲಾಶಯದಿಂದ 1600 ಕ್ಯೂಸೆಕ್ಸ ನೀರು ಹೊರಕ್ಕೆ ; ಶಿರೂರ ಬಳಿಯಿರುವ ಮಾರ್ಕಂಡೇಯ ಜಲಾಶಯ 3.696 ಟಿಎಮ್ಸಿ ಕ್ಷಮತೆಯ ಜಲಾಶಯ : ಹುಕ್ಕೇರಿ ತಾಲೂಕಾಡಳಿತದಿಂದ ನದಿ ದಡದಲ್ಲಿರುವ ಗ್ರಾಮಗಳ ಜನರಿಗೆ ಮುನ್ನೆಚ್ಚರಿಕೆ
ಲೋಕದರ್ಶನ ವರದಿ
ಉಳ್ಳಾಗಡ್ಡಿ-ಖಾನಾಪೂರ: ಕಳೆದ 15 ದಿನಗಳಿಂದ ಕರ್ನಾಟಕ ಹಾಗೂ ಮಹಾರಾಷ್ಟ್ರದ ಸಹ್ಯಾದ್ರಿ ಘಟ ಪ್ರದೇಶಗಳಲ್ಲಿ ಸತತವಾಗಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗೃತಾ ಕ್ರಮವಾಗಿ ಹವಾಮಾನ ಇಲಾಖೆಯ ಮುನ್ಸೂಚನೆ ಮೆರೆಗೆ ಸುರಕ್ಷತಾ ಕ್ರಮವಾಗಿ ಮಂಗಳವಾರ ದಿ.19 ರಂದು ಶಿರೂರ ಬಳಿಯಿರುವ ಮಾರ್ಕಂಡೆಯ ಜಲಾಶಯದಿಂದ ಮೂರು ಕ್ರಸ್ಟ ಗೇಟ್ಗಳಿಂದ 1600 ಕ್ಯೂಸೆಕ್ಸ ನೀರನ್ನು ನದಿ ಮೂಲಕ ಹರಿಬಿಡಲಾಗಿದೆ. ಕೇನಾಲ ಮುಖಾಂತರ 100 ಕ್ಯೂಸೆಕ್ಸ ನೀರನ್ನು ಹರಿಬಿಡಲಾಗಿದೆ. ಜಲಾಶಯಕ್ಕೆ 3.500 ಕ್ಯೂಸೆಕ್ಸ ನೀರು ಹರಿದು ಬರುತ್ತಿದೆ.
ಜಲಾಶಯ 3.696 ಟಿಎಮ್ಸಿ ನೀರು ಸಂಗ್ರಹಣಾ ಸಾಮರ್ಥ್ಯ ಇರುವ ಮಾರ್ಕಂಡೇಯ ಜಲಾಶಯದಲ್ಲಿ ಒಟ್ಟು 2.966 ಟಿಎಮ್ಸಿ ನೀರು ಸಂಗ್ರಹವಿದೆ ಎಂದು ಜಲಾಶಯದ ಮೂಲಗಳಿಂದ ತಿಳಿದು ಬಂದಿದೆ.
ಮುಂಜಾಗ್ರತೆ: ತಾಲೂಕಾ ದಂಡಾಧಿಕಾರಿಗಳಾದ ಡಿ. ಎಚ್.ಹೊಗಾರ ಶಿರೂರ. ಹಗೆದಾಳ. ಬಸ್ಸಾಪೂರ. ಬಗರನಾಳ. ಮಾವನೂರ. ಕುಂದರಗಿ. ಪಾಶ್ಚಾಪೂರ ಗ್ರಾಮಗಳ ಜನರು ಎಚ್ಚರ ವಹಿಸುವುದರೊಂದಿಗೆ ನದಿ ದಡಗಳಲ್ಲಿರುವ ಜನರು ಸುರಕ್ಷತೆಯ ಹಿನ್ನೆಲೆಯಲ್ಲಿ ಮುಂಜಾಗ್ರತೆ ವಹಿಸಬೇಕು ಸಾರ್ವಜನಿಕರು ದನಕರುಗಳನ್ನು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ತಿಳಿಸಿದ್ದಾರೆ.
*** ಮುಂಜಾಗ್ರತಾ ಕ್ರಮವಾಗಿ ಮಾರ್ಕಂಡೇಯ ಜಲಾಶಯದಿಂದ ಇಂದು ನೀರು ಬಿಡಲಾಗಿದ್ದು ಮಾರ್ಕಂಡೇಯ ನದಿಯಿಂದ 3.544 ಕ್ಯೂಸೆಕ್ಸ ನೀರು ಹರಿದು ಬರುತ್ತಿದ್ದು ನಮ್ಮ ಜಲಾಶಯಕ್ಕೆ ಅಗತ್ಯವಿರುವ ನೀರನ್ನು ಸಂಗ್ರಹಿಸುವ ಎಲ್ಲ ಅವಕಾಶಗಳನ್ನು ಇಟ್ಟುಕೊಂಡು ಮುಂಜಾಗ್ರತೆಯಾಗಿ ಇಂದು ನೀರನ್ನು ನದಿಗೆ ಹರಿಬಿಡಲಾಗಿದೆ.
ಅಧೀಕ್ಷಕ ಅಭಿಯಂತರ ಪಿ.ಎ.ನಾಗರಾಜ
ಈ ಸಂದರ್ಭದಲ್ಲಿ ಅಧೀಕ್ಷಕ ಅಭಿಯಂತರರಾದ ಪಿ.ಎ.ನಾಗರಾಜ, ತಾಲೂಕಾ ದಂಡಾಧಿಕಾರಿ ಡಿ.ಎಚ್.ಹೂಗಾರ, ಎಸ್.ಕೆ.ಎಂಟೆತ್ತಿನವರ, ಡಿ.ಎಸ್.ಚಿಂಚನೂರ, ಶರಣಪ್ಪ ಕಡದಿನ್ನಿ, ಕರ್ನಾಟಕ ನೀರಾವರಿ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.