ಅಂತರರಾಷ್ಟ್ರೀಯ

ಮೆಕ್ಸಿಕೋದಲ್ಲಿ ಗೋಡೆಗೆ ಡಿಕ್ಕಿ ಹೊಡೆದ ಬಸ್: 14 ಮಂದಿ ಸಾವು

ಮೆಕ್ಸಿಕೋದಲ್ಲಿ ಗೋಡೆಗೆ ಡಿಕ್ಕಿ ಹೊಡೆದ ಬಸ್: 14 ಮಂದಿ ಸಾವು

ಮೆಕ್ಸಿಕೊ ಸಿಟಿ: ಮೇ 19: ಮೆಕ್ಸಿಕೊದ ಜಲಿಸ್ಕೊ ​​ಪ್ರಾಂತ್ಯದ ಟುಕ್ಸೆಕಾ-ಸಿಟ್ಲಾ ಹೆದ್ದಾರಿಯಲ್ಲಿ ಬಸ್ ಗೋಡೆಗೆ ಡಿಕ್ಕಿ ಹೊಡೆದ ಪರಿಣಾಮ 14 ಜನರು ಸಾವನ್ನಪ್ಪಿದ್ದು, 20 ಮಂದಿ ಗಾಯಗೊಂಡಿದ್ದಾರೆ. ರಾಜ್ಯ ಭದ್ರತೆ ಮತ್ತು ನಾಗರಿಕ ರಕ್ಷಣಾ ಸಚಿವಾಲಯ ಗುರುವಾರ ಈ ಮಾಹಿತಿಯನ್ನು ನೀಡಿದೆ.

ಸೆಕ್ರೆಟರಿಯೇಟ್ ಈ ಕುರಿತು ಟ್ವೀಟ್ ಮಾಡಿದ್ದು, “ಬಸ್ ಮೆಕ್ಸಿಕನ್ ನಗರವಾದ ಜೊಕೊಟೆಪೆಕ್‌ಗೆ ತೆರಳುತ್ತಿದ್ದಾಗ ಬಸ್‌ನ ಬ್ರೇಕ್ ವೈಫಲ್ಯದಿಂದಾಗಿ ಇದ್ದಕ್ಕಿದ್ದಂತೆ ರಸ್ತೆ ಬದಿಯ ಗೋಡೆಗೆ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ 14 ಮಂದಿ ಸಾವನ್ನಪ್ಪಿ, 20 ಜನ ಗಾಯಗೊಂಡಿದ್ದಾರೆ” ಎಂದು ತಿಳಿಸಿದೆ.

ಸುದ್ದಿ ಸಂಸ್ಥೆ ಸ್ಪುಟ್ನಿಕ್ ಪ್ರಕಾರ, ಸ್ಥಳೀಯ ಅಧಿಕಾರಿಗಳು ಮತ್ತು ಬೆರ್ರಿ ತಯಾರಿಸುವ ಕಂಪನಿಯ ಉದ್ಯೋಗಿಗಳು ಬಸ್‌ನಲ್ಲಿದ್ದರು. ಈ ಅಪಘಾತದಲ್ಲಿ ಬಸ್ ಚಾಲಕ ಕೂಡ ಸಾವನ್ನಪ್ಪಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ ಎಂದು ವರದಿ ಮಾಡಿದೆ.

ಸುದ್ದಿ ಓದಿ