ಅಂತರರಾಷ್ಟ್ರೀಯ

ಭಾರತ- ಚೀನಾ ಸೇನಾ ಕಮಾಂಡರ್‌ ಗಳ 13ನೇ ಸುತ್ತಿನ ಮಾತುಕತೆ

ಭಾರತ- ಚೀನಾ  ಸೇನಾ ಕಮಾಂಡರ್‌ ಗಳ  13ನೇ ಸುತ್ತಿನ ಮಾತುಕತೆ

ಲೇಹ್‌, ಅ 10:  ಪೂರ್ವ ಲಡಾಕ್‌ ನ   ವಾಸ್ತನ  ನಿಯಂತ್ರಣ ರೇಖೆ ( ಎಲ್‌ ಎ ಸಿ) ಗುಂಟ  ಉದ್ಬವವಾಗಿರುವ   ಉದ್ವಿಗ್ನತೆ    ಪರಿಸ್ಥಿತಿಯನ್ನು    ಶಮನಗೊಳಿಸುವ   ಭಾಗವಾಗಿ  ಭಾರತ- ಚೀನಾದ   ಸೇನಾ   ಕಮಾಂಡರ್‌ಗಳ   ಮಟ್ಟದ 13ನೇ ಸುತ್ತಿನ  ಸಂಧಾನ ಸಭೆ   ಇಂದು  ಆರಂಭಗೊಳ್ಳಲಿದೆ.

ಚೀನಾ  ಕಡೆಯ   ಎಲ್‌ ಎ ಸಿ ಯಲ್ಲಿರುವ   ಮೊಲ್ಡಾದಲ್ಲಿ   ಈ ಮಾತುಕತೆ    ಬೆಳಗ್ಗೆ  10.30ಕ್ಕೆ ಆರಂಭಗೊಳ್ಳಲಿವೆ   ಎಂದು  ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪೂರ್ವ ಲಡಾಕ್‌   ವಾಸ್ತವ ನಿಯಂತ್ರಣ ರೇಖೆಯ   ಹಾಟ್‌ ಸ್ಪ್ರಿಂಗ್ಸ್‌  ನಲ್ಲಿ ನಿಯೋಜಿಸಲಾಗಿರುವ  ಸೇನಾಪಡೆಗಳನ್ನು  ಉಭಯ ದೇಶಗಳ  ಪಡೆಗಳು   ಹಿಂಪಡೆದುಕೊಳ್ಳುವ   ಕುರಿತು    ಸೇನಾ  ಕಮಾಂಡರ್‌  ಮ ಟ್ಟದ    ಮಾತುಕತೆಗಳು  ನಡೆಯಲಿವೆ  ಎಂದು   ಅಧಿಕಾರಿಗಳು ಹೇಳಿದ್ದಾರೆ.  ಕಳೆದ 17 ತಿಂಗಳಿಂದ ನಡೆಯುತ್ತಿರುವ ಬಿಕ್ಕಟ್ಟು ಶಮನ ಯತ್ನದ ಭಾಗವಾಗಿ ಭಾನುವಾರ ಮತ್ತೊಂದು ಪ್ರಯತ್ನ  ನಡಯುತ್ತಿದೆ.   ಚಳಿಗಾಲ ಆರಂಭಗೊಳ್ಳಲಿರುವ   ಹಿನ್ನಲೆಯಲ್ಲಿ    ಉಭಯ ದೇಶಗಳ ನಡುವೆ ನಡೆಯಲಿರುವ ಈ ಸಭೆ ಮಹತ್ವ ಪಡೆದುಕೊಂಡಿದೆ.

ಸುದ್ದಿ ಓದಿ