ಅಂತರರಾಷ್ಟ್ರೀಯ

ಬೋಕೋ ಹರಾಮ್ ದಾಳಿ :13 ಸಾವು

ಬೋಕೋ ಹರಾಮ್ ದಾಳಿ :13 ಸಾವು

ಅಬುಜಾ, ನವೆಂಬರ್ 02: ಈಶಾನ್ಯ ನೈಜೀರಿಯಾದಲ್ಲಿ ಬೊಕೊ ಹರಾಮ್ ಇಸ್ಲಾಮಿಸ್ಟ್ ಗುಂಪು ನಡೆಸಿದ ದಾಳಿಯಲ್ಲಿ ಕನಿಷ್ಠ 13 ಜನರು ಸಾವನ್ನಪ್ಪಿದ್ದಾರೆ.  ಅಲ್ಲದೆ ಆರು ಜನರನ್ನು ಅಪಹರಿಸಲಾಗಿದೆ ಎಂದು ಸ್ಥಳೀಯ ಡೈಲಿ ಟ್ರಸ್ಟ್ ಪತ್ರಿಕೆ ಸೋಮವಾರ ವರದಿ ಮಾಡಿದೆ.

ದೇಶದ ಈಶಾನ್ಯ ಬೊರ್ನೊ ರಾಜ್ಯದ ಟಕುಲಾಶೆ ಗ್ರಾಮದ ಮೇಲೆ ಉಗ್ರರು ಭಾನುವಾರ ದಾಳಿ ನಡೆಸಿರುವುದಾಗಿ ಹೇಳಲಾಗಿದೆ.

ದಾಳಿಯಲ್ಲಿ ಇಡೀ ಹಳ್ಳಿಯನ್ನು ಧ್ವಂಸ ಮಾಡಲಾಗಿದೆ. ಎಲ್ಲಾ ಜಾನುವಾರು ಮತ್ತು ಕೃಷಿ ಉತ್ಪನ್ನಗಳು ನಾಶವಾಗಿದ್ದು, ಆರು ಜನರನ್ನು ದಾಳಿಕೋರರು ಅಪಹರಿಸಿದ್ದಾರೆ. ಈ ದಾಳಿಯಲ್ಲಿ 13 ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

ಬೋಕೋ ಹರಾಮ್ 2009 ರಲ್ಲಿ ದೇಶಾದ್ಯಂತ ಷರಿಯಾ ಕಾನೂನನ್ನು ಪರಿಚಯಿಸಲು ನೈಜೀರಿಯನ್ ಸರ್ಕಾರದ ವಿರುದ್ಧ ಸಶಸ್ತ್ರ ದಂಗೆಯನ್ನು ಪ್ರಾರಂಭಿಸಿತು. 2015 ರಲ್ಲಿ, ಅದು ಇಸ್ಲಾಮಿಕ್ ಸ್ಟೇಟ್ (ಭಯೋತ್ಪಾದಕ ಸಂಘಟನೆಯನ್ನು ರಷ್ಯಾದಲ್ಲಿ ನಿಷೇಧಿಸಲಾಗಿದೆ) ನೊಂದಿಗೆ ಹೊಂದಾಣಿಕೆ ಮಾಡಿಕೊಂಡಿತು.

ಸುದ್ದಿ ಓದಿ